ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ಹಿಂದೂ ಮಹಾಸಭಾ (HINDU MAHASABA) ಗಣಪತಿಯ ರಾಜಬೀದಿ ಉತ್ಸವದ ಅಂಗವಾಗಿ, ಗಾಂಧಿ ಬಜಾರ್’ನಲ್ಲಿ (GANDHI BAZAAR) ಮಹಾದ್ವಾರ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಹಾದ್ವಾರ ವಿನ್ಯಾಸ ಕುರಿತು ಈವರೆಗೂ ಇದ್ದ ಕುತೂಹಲಕ್ಕೆ (CURIOSITY) ತೆರೆಬೀಳಲು ಕ್ಷಣಗಣನೆ ಆರಂಭವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಓತಿಘಟ್ಟ ಸಮೀಪ ಜೀವನ್ ಕಲಾ ಸನ್ನಿಧಿಯಲ್ಲಿ (JEEVAN KALA SANNIDHI) ನಿರ್ಮಾಣವಾಗಿದ್ದ ಕಲಾಕೃತಿಗಳನ್ನು ಗಾಂಧಿ ಬಜಾರ್’ಗೆ ತರಲಾಗಿದೆ. ಎರಡು ದಿನ ಈ ಕಲಾಕೃತಿಗಳ ಜೋಡಣೆ ಕಾರ್ಯ ನಡೆಯಲಿದೆ. ಕಲಾವಿದ ಜೀವನ್ ನೇತೃತ್ವದ ಕಲಾವಿದರ ತಂಡ, ಮಹಾದ್ವಾರ ನಿರ್ಮಾಣ ಮಾಡಲಿದ್ದಾರೆ.
ಈ ಭಾರಿಯ ಕಾನ್ಸೆಪ್ಟ್ ಏನು?
2018ರಲ್ಲಿ ರಾಮ ಮಂದಿರ, 2019ರಲ್ಲಿ ಸಿಂಹಾಸನರೂಢ ಛತ್ರಪತಿ ಶಿವಾಜಿ ಮಹಾರಾಜ್ ಕಾನ್ಸೆಪ್ಟ್’ಗಳು ಗಮನ ಸೆಳೆದಿದ್ದವು. ಹಾಗಾಗಿ ಮಹಾದ್ವಾರ ಕಾನ್ಸೆಪ್ಟ್ ಕುರಿತು ತೀವ್ರ ಕುತೂಹಲ ಮೂಡಿತ್ತು. ಮಹಾಭಾರತ ಯುದ್ಧ ಸಂದರ್ಭ, ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶವನ್ನು ಈ ಭಾರಿ ರೂಪಿಸಲಾಗಿದೆ.
ಯುದ್ಧ ಭೂಮಿಯಲ್ಲಿ ರಥ ಚಲಾಯಿಸುತ್ತಿದ್ದ ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡುತ್ತಾರೆ. ಈ ಕಾನ್ಸೆಪ್ಟ್’ಗಾಗಿ ಕಲಾವಿದರು ಒಂದು ರಥ, ನಾಲ್ಕು ಕುದುರೆಗಳ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಇನ್ನು, ಶ್ರೀಕೃಷ್ಣನು ಅರ್ಜನಿಗೆ ದಿಕ್ಕು ತೋರಿಸುತ್ತಿರುವಂತೆ ಕಲಾಕೃತಿ ನಿರ್ಮಿಸಲಾಗಿದೆ. ಅರ್ಜುನನು ಶ್ರೀ ಕೃಷ್ಣ ತೋರಿದ ದಿಕ್ಕಿಗೆ ಬಾಣ ಹೂಡಲು ಸಿದ್ಧವಾಗಿರುವಂತೆ ಪ್ರತಿಮೆ ಸಿದ್ಧಪಡಿಸಲಾಗಿದೆ.
ಆಟೊಮೇಷನ್, ಲೇಸರ್ ಲೈಟ್
ಮುಂಚೆ ಕಲಾಕೃತಿಗಳನ್ನು ನಿರ್ಮಿಸಿ, ಅದಕ್ಕೆ ಲೈಟ್ ವ್ಯವಸ್ಥೆ ಮಾಡಿ, ಮಹಾದ್ವಾರವನ್ನು ಅಂದಗೊಳಿಸಲಾಗುತ್ತಿತ್ತು. ಈ ಭಾರಿ ಆಟೊಮೇಷನ್ ಮತ್ತು ಲೇಸರ್ ಲೈಟ್ ಬಳಕೆಗೆ ಯೋಜಿಸಲಾಗಿದೆ. ಕಲಾವಿದ ಜೀವನ್ ಅವರು ಶಿವಮೊಗ್ಗ ಲೈವ್.ಕಾಂಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಗಲು ರಾತ್ರಿ ನಡೆದ ಕೆಲಸ
ಮಹಾದ್ವಾರ ನಿರ್ಮಾಣ ಕಾರ್ಯವು ಓತಿಘಟ್ಟ ಬಳಿ ಜೀವನ್ ಕಲಾ ಸನ್ನಿಧಿಯಲ್ಲಿ ಸಿದ್ಧಪಡಿಸಲಾಯಿತು. ಒಂದು ತಿಂಗಳು 23 ಕಲಾವಿದರು ಹಗಲು, ರಾತ್ರಿ ಕೆಲಸ ಮಾಡಿ ಈ ಕಾನ್ಸೆಪ್ಟ್ ಸಿದ್ಧಪಡಿಸಿದ್ದಾರೆ.
ಫೈಬರ್ ಬಳಸಿ ಕಲಾಕೃತಿಗಳ ನಿರ್ಮಾಣ ಮಾಡಲಾಗಿದೆ. ಸುಮಾರು 500 ಕೆ.ಜಿಯಷ್ಟು ಕಬ್ಬಿಣ, 450 ಕೆ.ಜಿ ರೆಗ್ಸಿನ್ ಲಿಕ್ವಿಡ್ ಬಳಕೆಯಾಗಿದೆ. ಕೆರೆ ಮಣ್ಣು ಬದಲು ಮುಂಬೈನಿಂದ ಜೇಡಿಮಣ್ಣು ತರಿಸಲಾಗಿತ್ತು.
ಈ ಭಾರಿ ಮಹಾದ್ವಾರದ ಮತ್ತೊಂದು ಆಕರ್ಷಣೆ ಅಂದರೆ ಬೃಹತ್ ಖಡ್ಗ. ಈ ಖಡ್ಗದ ಮೇಲೆ ರಥ ಇರುವಂತೆ ಚಿತ್ರಿಸಲಾಗಿದೆ. ಖಡ್ಗದ ಮೇಲೆ ಸ್ಲೋಗನ್ ಬರೆಸಲಾಗುತ್ತಿದೆ. ಇದನ್ನು ಸ್ಥಳದಲ್ಲಿಯೆ ನೋಡಬೇಕು ಎಂದು ಕುತೂಹಲ ಉಳಿಸಿದ್ದಾರೆ ಕಲಾವಿದ ಜೀವನ್. ಮತ್ತೊಂದೆಡೆ ಆಂಜನೇಯ ಸ್ವಾಮಿ, ಛತ್ರಪತಿ ಶಿವಾಜಿಯ ಮೂರ್ತಿಗಳು ಸೇರಿದಂತೆ ವಿವಿಧ ಪ್ರತಿಮೆಗಳನ್ನು ಸಿದ್ಧಪಡಿಸಲಾಗಿದೆ. ಗಣಪತಿಯ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿವಿಧೆಡೆ ಇವುಗಳನ್ನು ಇರಿಸಲು ಅಲಂಕಾರ ಸಮಿತಿ ಯೋಜಿಸಿದೆ.
ಸಿನಿಮಾಗಳಲ್ಲಿ ಜೀವನ್ ಕೈಚಳಕ
ಶಿವಮೊಗ್ಗದ ಕಲಾವಿದ ಜೀವನ್ ಅವರು ವಿವಿಧ ಸಿನಿಮಾಗಳಲ್ಲಿ ಕಲಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (YASH) ಅಭಿಯನಯದ KGF 2, ಡಾಲಿ ಧನಂಜಯ ಅಭಿನಯದ ಮಾನ್ಸೂನ್ ರಾಗ (MONSOON RAGA) ಸಿನಿಮಾದಲ್ಲಿ 17 ಅಡಿಯ ಗಣಪತಿಯ ಮೂರ್ತಿಯನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ.
ಅಷ್ಟೆ ಅಲ್ಲಾ, ಕುಂದಾಪುರ, ಗೋಕರ್ಣದ ಓಂ ಬೀಚ್’ನಲ್ಲಿರುವ 15 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ತಯಾರಿಸಿದ್ದರು. ಹಳೆಬೀಡು ಮಠಕ್ಕೆ 29 ಅಡಿ ಎತ್ತರದ ಶಿವನ ಮುಖ, ಬಳ್ಳಾರಿಯಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿರುವ ನಟ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ಜೀವನ್ ನಿರ್ಮಿಸಲಿದ್ದಾರೆ.
ಶಿವಮೊಗ್ಗದಲ್ಲಿ ಈ ಹಿಂದೆ ಅಯೋಧ್ಯೆ ರಾಮ ಮಂದಿರ ಮಾದರಿಯ ಪ್ರವೇಶ ದ್ವಾರ, ಶಿವಾಜಿ ಪ್ರತಿಮೆಯನ್ನು ಕಲಾವಿದ ಜೀವನ್ ಮತ್ತು ಅವರ ತಂಡ ನಿರ್ಮಿಸಿತ್ತು. ಈ ಭಾರಿ ವಿಭಿನ್ನವಾದ ಕಾನ್ಸೆಪ್ಟ್ ಸಿದ್ಧವಾಗಿದ್ದು, ಜನರ ಕುತೂಹಲ ಇಮ್ಮಡಿಯಾಗಿದೆ.
ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಉತ್ಸವದ ಮಹಾದ್ವಾರದ ಎರಡು ಪ್ರೋಮೋ ವೈರಲ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.