ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಜನವೋ ಜನ, ಈಗ ಎಲ್ಲಿದೆ ಗಣಪತಿ?

SHIVAMOGGA LIVE NEWS | 28 SEPTEMBER 2023 (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಹಿಂದೂ ಮಹಾಸಭಾ ಗಣಪತಿಯ (Hindu Mahasabha Ganapati) ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸಹಸ್ರ ಸಂಖ್ಯೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕೋಟೆ ರಸ್ತೆಯಲ್ಲಿ ಮೆರವಣಿಗೆ ಆರಂಭವಾಯಿತು. ಎಸ್‌ಪಿಎಂ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದೆ. ಅಲ್ಲಲ್ಲಿ ಗಣಪತಿಗೆ (Ganapati) ಪೂಜೆ ಸಲ್ಲಿಸಲಾಗುತ್ತಿದೆ. ಕೋಟೆ ರಸ್ತೆಯ ನೆರಹೊರೆಯ ಬಡಾವಣೆಯ ಜನರು ಗಣಪತಿಗೆ ಹೂವು, ಹಣ್ಣು ಅರ್ಪಿಸುತ್ತಿದ್ದಾರೆ.

ಇದನ್ನೂ ಓದಿ- BREAKING NEWS – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶುರು

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ರಾಮಣ್ಣ ಶ್ರೇಷ್ಠಿ ಪಾರ್ಕ್‌ನತ್ತ
ಎಸ್‌ಪಿಎಂ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸಾಗುತ್ತಿದೆ. ಇನ್ನು ಕೆಲವೆ ನಿಮಿಷದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್‌ನತ್ತ ಗಣಪತಿ ಮೂರ್ತಿ ತಲುಪಲಿದೆ. ಈಗಾಗಲೇ ರಾಮಣ್ಣ ‍ಶ್ರೇಷ್ಠಿ ಪಾರ್ಕ್‌ ಸರ್ಕಲ್‌ನಲ್ಲಿ ಭರ್ಜರಿ ಅಲಂಕಾರ ಮಾಡಲಾಗಿದೆ.

ಹಿಂದೂ ಮಹಾಸಭಾ ಗಣಪತಿ ದರ್ಶನಕ್ಕೆ ಭಾರಿ ಸಂಖ್ಯೆಯ ಜನ ಸೇರಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ಜನ ನಿಂತು ಗಣಪತಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

290923 Hindu Mahasabha Ganapathi Procession 2.30 pm

Leave a Comment