SHIVAMOGGA LIVE NEWS | 28 SEPTEMBER 2023
SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆಯಲ್ಲಿ (procession) ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಡೊಳ್ಳು, ಕಂಸಾಳೆಗೆ ಜನರು ಹೆಜ್ಜೆ ಹಾಕುತ್ತಿದ್ದಾರೆ. ಎಸ್ಪಿಎಂ ರಸ್ತೆಯಲ್ಲಿ ಗಣಪತಿಯ ಮೆರವಣಿಗೆ ಸಾಗುತ್ತಿದೆ.
ಇದನ್ನೂ ಓದಿ- ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್
ಎಂಎಲ್ಎ, ಜನಪ್ರತಿನಿಧಿಗಳ ಡಾನ್ಸ್
ಮೆರವಣಿಗೆಯಲ್ಲಿ (procession) ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬಹುತೇಕ ಜನಪ್ರತಿನಿಧಿಗಳು ಡೊಳ್ಳಿಗೆ ಹೆಜ್ಜೆ ಹಾಕಿದರು. ಮಹಾನಗರ ಪಾಲಿಕೆ ಸದಸ್ಯೆಯರು ಮತ್ತು ಬಿಜೆಪಿ ಕಾರ್ಯಕರ್ತೆಯರ ಜೊತೆಗೆ ಶಾಸಕ ಚನ್ನಬಸಪ್ಪ ಹೆಜ್ಜೆ ಹಾಕಿದರು. ಇನ್ನು ಕಾರ್ಪೊರೇಟರ್ಗಳು, ರಾಜಕೀಯ ಮುಖಂಡರು ಕೂಡ ಮೆರವಣಿಗೆಯಲ್ಲಿ ಭಾಗವಹಸಿ ಡಾನ್ಸ್ ಮಾಡಿದರು.
ವಯಸ್ಸಿನ ಹಂಗು ತೊರೆದು ಡಾನ್ಸ್
ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ವಯಸ್ಸಿನ ಹಂಗು ತೊರೆದು ನೃತ್ಯ ಮಾಡಿದರು. ಮಹಿಳೆಯರು, ಮಕ್ಕಳು, ಯುವಕರು ಭರ್ಜರಿ ಸ್ಟೆಪ್ಸ್ ಹಾಕಿದರು. ಬೆಳಗ್ಗೆಯಿಂದಲೆ ಮೆರವಣಿಗೆಯಲ್ಲಿ (procession) ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದಾರೆ.