17 ಗಂಟೆಯ ಅದ್ಧೂರಿ ಮೆರವಣಿಗೆ ಬಳಿಕ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆ

ಶಿವಮೊಗ್ಗ: ಸತತ 17 ಗಂಟೆಯ ಮೆರವಣಿಗೆ ಬಳಿಕ ತುಂಗಾ ನದಿಯಲ್ಲಿ ಹಿಂದೂ ಮಹಾಸಭಾ ಗಣಪತಿ (Ganesh) ವಿಸರ್ಜನೆ ಮಾಡಲಾಯಿತು. ಸೆ.7ರ ಬೆಳಗಿನ ಜಾವ 3.50ರ ಹೊತ್ತಿಗೆ ವಿಸರ್ಜನೆ ಕಾರ್ಯ ಪೂರ್ಣಗೊಂಡಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಪಕ್ಕದ ತುಂಗಾ ನದಿಯ ಭೀಮನ ಮಡುವಿನಲ್ಲಿ ಬೆಳಗಿನ ಜಾವ 3.50ರ ಹೊತ್ತಿಗೆ ವಿಸರ್ಜನೆ ಮಾಡಲಾಯಿತು. ಹಿಂದೂ ಸಂಘಟನೆಗಳ ಮಹಾಮಂಡಳದ ಪ್ರಮುಖರು, ಭಕ್ತರು ಈ ಸಂದರ್ಭ ಇದ್ದರು.

ಇಡೀ ದಿನ ಹೇಗಿತ್ತು ಮೆರವಣಿಗೆ?

ಸೆ.6ರ ಬೆಳಗ್ಗೆ 11 ಗಂಟೆಗೆ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ಆರಂಭವಾಯಿತು. ಕೋಟೆ ರಸ್ತೆಯ ಮೂಲಕ ಮಧ್ಯಾಹ್ನ 2 ಗಂಟೆ ಹೊತ್ತಿಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ ತಲುಪಿತು.

Nanjappa Hospital Advertisement

Hindu-Mahasabha-Ganesh-Visarjane.

ಸಂಜೆ 6.30ರ ಹೊತ್ತಿಗೆ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಬಳಿ ತಲುಪಿತ್ತು. ಸಂಜೆ 7.30ರ ಹೊತ್ತಿಗೆ ಎ.ಎ.ಸರ್ಕಲ್‌ ತಲುಪಿತ್ತು. ರಾತ್ರಿ 8 ಗಂಟೆ ವೇಳೆಗೆ ಗೋಪಿ ಸರ್ಕಲ್‌ ತಲುಪಿತ್ತು. ರಾತ್ರಿ 12ರ ವೇಳೆಗೆ ಕುವೆಂಪು ರಸ್ತೆಯಲ್ಲಿ ಮೆರವಣಿಗೆ ಸಾಗಿತು.

ಇದನ್ನೂ ಓದಿ » ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ಮಾಹಿತಿ

HMS Ganesh visarjane

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment