ಮೆರವಣಿಗೆ ಆರಂಭದಲ್ಲೆ ಸೋಮಣ್ಣ ಆನೆ ನೀಡಿದ್ದ ಸೂಚನೆ, ನಿರ್ಲಕ್ಷಿಸಿದ ಅರಣ್ಯ ಇಲಾಖೆ

ಶಿವಮೊಗ್ಗ: ಮೆರವಣಿಗೆ ಆರಂಭದಲ್ಲೆ ಸೋಮಣ್ಣ ಆನೆ ತನ್ನ ಆತಂಕ ಹೊರ ಹಾಕಿದ್ದ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದರು. ಇದುವೆ ಅವಘಡಕ್ಕೆ ಕಾರಣವಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಸಕ್ರೆಬೈಲಿನ ಸೋಮಣ್ಣ ಆನೆ ಮೇಲೆ ಅಂಬಾರಿ ಹೊರಿಸುವ ನಿರ್ಧಾರವಾಗಿತ್ತು. ಪ್ರತಿ ವರ್ಷದಂತೆ ಅಲಂಕೃಗೊಂಡಿದ್ದ ಆನೆಗಳನ್ನು ಶಿವಪ್ಪನಾಯಕ ಅರಮನೆ ಮುಂಭಾಗ ಕರೆತರಲಾಯಿತು. ಅಲ್ಲಿ ಸೋಮಣ್ಣ ಆನೆ ಮೇಲೆ 450 ಕೆ.ಜಿ ತೂಕದ ಬೆಳ್ಳಿ ಅಂಬಾರಿ ಹೊರಿಸಲಾಯಿತು. ಜಂಬೂ ಸವಾರಿ ಆರಂಭಕ್ಕು ಮುನ್ನ ಕಂಸಾಳೆ ಮತ್ತು ಡೊಳ್ಳಿನ ಶಬ್ದವಾಗುತ್ತಿದ್ದಂತೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿತು. ದಿಕ್ಕು ಬದಲಿಸಿ ನಿಂತಿತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ನಿರ್ಲಕ್ಷಿಸಿದರು.

Elephant-Somanna-With-Silver-ambari-in-Shivmaogga

ಆನೆಯನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಆದರೆ ಅಂಬಾರಿ ಹೊತ್ತ ಸ್ಥಳದಿಂದ ಸುಮಾರು 800 ಮೀಟರ್‌ ದೂರ ಸಾಗಿದ ಸೋಮಣ್ಣ ಆನೆ ಅಲ್ಲಿಂದ ಹಿಂತಿರುಗಿ ಓಡಲು ಆರಂಭಿಸಿತು.