NEWS HIGHLIGHTS
ಶಿವಮೊಗ್ಗ: ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ನಗರದ ಜಯನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿದರು.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಠಾಣೆಗೆ ಆಗಮಿಸಿದ ರವಿಕಾಂತೇಗೌಡ ಗೌರವ ವಂದನೆ ಸ್ವೀಕರಿಸಿದರು. ಠಾಣೆಯ ಕಾರ್ಯವೈಖರಿ, ಪ್ರಮುಖ ಕಡತಗಳ ನಿರ್ವಹಣೆ, ಅಪರಾಧ ದಾಖಲಾತಿ ಹಾಗೂ ಇತರೆ ಪ್ರಮುಖ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಇದೇ ಸಂದರ್ಭ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕುಂದುಕೊರತೆ ಆಲಿಸಿದ ಅವರು, ಸಾರ್ವಜನಿಕರ ರಕ್ಷಣೆಗೆ ಆದ್ಯತೆ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಸಂಬಂಧ ಸಲಹೆ ನೀಡಿದರು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ, ಡಿವೈಎಸ್‌ಪಿ ಸಂಜೀವ್ ಕುಮಾರ್, ಜಯನಗರ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್, ಸಿ.ಇ.ಎನ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್, ಎರಡು ಠಾಣೆಗಳ ಸಿಬ್ಬಂದಿ ಇದ್ದರು.
ಇದನ್ನೂ ಓದಿ:➤ ಸಿಎಂ ಜೊತೆಗೆ ಶಿವಮೊಗ್ಗ ಡಿಸಿ ವಿಡಿಯೋ ಕಾನ್ಫರೆನ್ಸ್, ಬಳಿಕ ದಿಢೀರ್ ಮೀಟಿಂಗ್, ಏನಂದ್ರು ಜಿಲ್ಲಾಧಿಕಾರಿ?