ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 13 JULY 2024
SHIMOGA : ಬೆಂಗಳೂರಿನಿಂದ ಆಗಮಿಸಿದ್ದ ಇಂಡಿಗೋ ವಿಮಾನ (flight) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೆ ಹಿಂತಿರುಗಿದೆ. ಇದೇ ವಿಮಾನದಲ್ಲಿ ಆಗಮಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ್ ಬೆಂಗಳೂರಿಗೆ ಮರಳುವಂತಾಗಿದೆ. ಹಾಗಾಗಿ ಅವರ ಜಿಲ್ಲಾ ಪ್ರವಾಸ ರದ್ದಾಗಿದೆ.
ಮಳೆ, ಮೋಡ ಕವಿದ ವಾತಾವರಣದಿಂದ ರನ್ ವೇ ವಿಸಿಬಲಿಟಿ ಇಲ್ಲದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನ ಇವತ್ತು ಲ್ಯಾಂಡ್ ಆಗಲಿಲ್ಲ. ಹಲವು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು ಸದ್ಯವಾಗಲಿಲ್ಲ. ಹಾಗಾಗಿ ವಿಮಾನ ಬೆಂಗಳೂರಿಗೆ ಮರಳಿದೆ.

ಗೃಹ ಸಚಿವರ ಪ್ರವಾಸ ರದ್ದು
ಇಂಡಿಗೋ ವಿಮಾನದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಆಗಮಿಸುತ್ತಿದ್ದರು. ವಿಮಾನ ಲ್ಯಾಂಡ್ ಆಗದ ಹಿನ್ನೆಲೆ ಅವರ ಜಿಲ್ಲಾ ಪ್ರವಾಸ ರದ್ದಾಗಿದೆ. ಸೊರಬ ಮತ್ತು ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರ ಕಾರ್ಯಕ್ರಮಗಳು ನಿಗದಿಯಾಗಿದ್ದವು.
ಇನ್ನು, ಮಧ್ಯಾಹ್ನ ತಿರುಪತಿಯಿಂದ ಆಗಮಿಸಿದ್ದ ಸ್ಟಾರ್ ಏರ್ ವಿಮಾನ ಲ್ಯಾಂಡ್ ಆಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇರಿದಂತೆ ವಿವಿಧ ತಂತ್ರಾಂಶ ಇಲ್ಲ. ಹಾಗಾಗಿ ರಾತ್ರಿ ವೇಳೆ, ಮಂಜು ಮತ್ತು ಮೋಡ ಕವಿದ ವಾತಾವರಣದ ಸಂದರ್ಭ ವಿಮಾನ ಪೈಲಟ್‌ಗಳಿಗೆ ರನ್ ವೇಳೆ ಕಾಣಿಸುವುದಿಲ್ಲ. ಇಂತಹ ಸಂದರ್ಭ ವಿಮಾನ ಲ್ಯಾಂಡಿಂಗ್ ಮಾಡದೆ ಹಿಂತಿರುಗಲಿವೆ.
ಇದನ್ನೂ ಓದಿ – SHIMOGA JOBS – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸವಿದೆ, ಶೋ ರೂಂನಲ್ಲಿ ಉದ್ಯೋಗವಕಾಶ
LATEST NEWS
- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

About The Editor
ನಿತಿನ್ ಆರ್.ಕೈದೊಟ್ಲು
















