NEWS HIGHLIGHTS
SHIVAMOGGA LIVE NEWS | 12 JUNE 2024
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.SHIMOGA : ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಮತ್ತು ಸಹಚರರನ್ನು ಬಂಧಿಸಿರುವ ಪ್ರಕರಣ ಸಂಬಂಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದರು. ಬಸವಣ್ಣನ ವಚನದ ಮೂಲಕ ಇಂದ್ರಜಿತ್ ಲಂಕೇಶ್ ಉತ್ತರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಕೊಲೆ ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತನಿಖೆ ಮಾಡುತ್ತಿದ್ದಾರೆ. ಬಸವಣ್ಣನ ವಚನದ ಮೂಲಕ ಇದಕ್ಕೆ ಉತ್ತರ ನೀಡುತ್ತೇನೆ. ಜಗತ್ತಿನ ಡೊಂಕು ನೀವೇಕೆ ತಿದ್ದುವಿರಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ಈ ವಿಚಾರ ಬೇಡ ಲಂಕೇಶ್, ಕುವೆಂಪು ಅವರ ಬಗ್ಗೆ ಮಾತಾನಾಡೋಣ. ಗೌರಿ ಸಿನಿಮಾದ ಬಗ್ಗೆ ಮಾತಾನಾಡೋಣ. ಎಲ್ಲರಿಗೂ ಹೇಳೋದು ಇಷ್ಟೇ ಕನ್ನಡ ಬೆಳೆಸಿ, ಕನ್ನಡ ಉಳಿಸಿ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಇದನ್ನೂ ಓದಿ – ಮಳೆಗಾಲ ಮುಗಿಯುವವರೆಗೆ ಅಧಿಕಾರಿಗಳಿಗೆ ರಜೆ ಇಲ್ಲ, ಮಳೆ ಹಾನಿಯ ಫೋಟೊ ತಕ್ಷಣ ರವಾನೆಗೆ ಸೂಚನೆ