ಲಿಂಗಾಯತ ಯೂತ್‌ ಫೋರಂಗೆ ನೂತನ ಪದಾಧಿಕಾರಿಗಳು, ಹೊಸ ತಂಡಕ್ಕೆ ಪಂಚ ಸೂತ್ರ

ಶಿವಮೊಗ್ಗ: ಇಂಟರ್ ನ್ಯಾಷನಲ್ ಲಿಂಗಾಯಿತ ಯೂತ್ ಫೋರಂ (ಐಎಲ್‌ವೈಎಫ್‌) ಮಹಿಳಾ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಫೋರಂನ ನೂತನ ಅಧ್ಯಕ್ಷ ವಿಶ್ವಾಸ್ ಯಲಬುರ್ಗಿ ತಿಳಿಸಿದರು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕೇವಲ 50 ಸದಸ್ಯರೊಂದಿಗೆ ಆರಂಭವಾದ ಫೋರಂ, ಇದೀಗ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಶಾಖೆಗಳನ್ನು ಹೊಂದಿದೆ. 3,000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಶಿವಮೊಗ್ಗದಲ್ಲಿ ಫೋರಂ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾಗಿವೆ. ಹತ್ತಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Lingayath-Youth-Forum-press-meet-in-Shimoga

ನೂತನ ಪದಾಧಿಕಾರಿಗಳು

2026-27ನೇ ಸಾಲಿನ ಫೋರಂನ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಡಿ.ಎಸ್., ಕಾರ್ಯದರ್ಶಿಯಾಗಿ ರಾಜು ಎಂ.ಎಸ್., ಖಜಾಂಚಿಯಾಗಿ ಸಂಜಯ್ ಎಂ.ಎಸ್. ಹಾಗೂ ನಿರ್ದೇಶಕರುಗಳಾಗಿ ಚೈತ್ರಾ ಸಜ್ಜನ್, ಅನುಷಾ, ಸುನೀಲ್, ಮೋಹನ್ ಬಾಳೆಕಾಯಿ, ಈಶ್ವರ ಸರ್ಜಿ, ಮಂಜು ಕರ್ನಲಿ, ವಿಕಾಸ್, ಸಂದೀಪ್, ರವಿ ಪಾಟೀಲ್ ಮತ್ತು ನಿರಂಜನ್ ವೇದಮೂರ್ತಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

Nanjappa Hospital Advertisement

ಹೊಸ ತಂಡವು ಕೌಶಲ್ಯಾಭಿವೃದ್ಧಿ, ಹೆಣ್ಣು ಮಕ್ಕಳ ಶಿಕ್ಷಣ, ಸಸಿ ನೆಡುವುದು, ರಕ್ತದಾನ ಶಿಬಿರ ಮತ್ತು ನೈಸರ್ಗಿಕ ವಿಕೋಪ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ. ‘ಐ ಶೇರ್, ಐ ಲೀಡ್, ಐ ಕೇರ್, ಐ ಬಾಂಡ್ ಹಾಗೂ ಐ ನೆಟ್’ ಎಂಬ ಪಂಚಸೂತ್ರಗಳ ಆಧಾರದ ಮೇಲೆ ಚಟುವಟಿಕೆ ನಡೆಯಲಿದೆ. ಈ ವರ್ಷ ಸಮುದಾಯದ ಉದ್ಯಮಿಗಳು, ವರ್ತಕರು ಮತ್ತು ರೈತರನ್ನು ಒಳಗೊಂಡ ಬೃಹತ್ ವಾಣಿಜ್ಯ ಮೇಳ ಆಯೋಜಿಸುವ ಗುರಿ ಇದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಹೊಯ್ಸಳ ರಂಗಪ್ಪ, ಸಂಜಯ್ ಶಂಕರ್, ಡಾ. ಸುನೀಲ್, ಗಣೇಶ್ ಅಂಗಡಿ, ಚೈತ್ರಾ ಸಜ್ಜನ್ ಮತ್ತಿತರರು ಇದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion