ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 2 JANUARY 2025
ಶಿವಮೊಗ್ಗ : ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ, ಅವಕಾಶ ಮತ್ತು ಸವಾಲುಗಳ ಕುರಿತು ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ (seminar) ಚಾಲನೆ ನೀಡಲಾಯಿತು.
ಐಐಟಿ ಧಾರವಾಡದ ಸಲಹೆಗಾರ ಪ್ರೊ. ಕೆ.ವಿ.ವಿಜಯ್ ಕುಮಾರ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ 250 ಮಿಲಿಯನ್ ವಿದ್ಯಾರ್ಥಿಗಳು ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಓದುತ್ತಿದ್ದಾರೆ. ಇಂಟರ್‌ನೆಟ್ ಮೂಲಕ ಎಂಥಹ ವಿಚಾರಗಳನ್ನು ಬೇಕಾದರು ತಿಳಿಯಬಹುದು ಎಂಬ ಅಂಧತ್ವದಲ್ಲಿದ್ದಾರೆ. ತಾವು ಬಳಸುವ ಅಪ್ಲಿಕೇಶನ್ ತೆರೆದುಕೊಳ್ಳಲು ಸ್ವಲ್ಪ ತಡವಾದರು ಕಾಯುವ ತಾಳ್ಮೆ ಯುವ ಸಮೂಹದಲ್ಲಿ ಇಲ್ಲ. ಇಂತಹ ಸಂದರ್ಭ ಶಿಕ್ಷಕರು, ಹೊಸ ತಾಂತ್ರಿಕತೆಯ ಮೂಲಕ ಶೈಕ್ಷಣಿಕ ಅಭ್ಯಾಸದತ್ತ ವಿದ್ಯಾರ್ಥಿಗಳನ್ನು ಸೆಳೆಯಬೇಕು. ಮೊಬೈಲ್‌ನಲ್ಲಿ ಬರೆಯುವ ಮೆಸೇಜ್‌ಗಳ ಮಾದರಿಯಲ್ಲಿ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುತ್ತಿದ್ದಾರೆ. ತಂತ್ರಜ್ಞಾನದಿಂದ ಏನನ್ನು ಕಲಿಯಬೇಕು ಎಂಬ ಗೊಂದಲದ ನಡುವೆ, ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ನಡೆಸುವ, ಅವರಿಗೆ ಬರವಣಿಗೆ, ಶಬ್ದಕೋಶಗಳ ಬಳಕೆ, ವ್ಯಾಖ್ಯಾನದಂತಹ ಕೌಶಲ್ಯತೆ ತುಂಬುವ ಕಾರ್ಯ ಶಿಕ್ಷಕರಿಂದ ಆಗಬೇಕು. ಮೂಲಭೂತವಾಗಿ ಇದನ್ನು ಕಲಿಸದಾತ ಕೆಟ್ಟ ಶಿಕ್ಷಕನಾಗಿ ವಿದ್ಯಾರ್ಥಿಗಳ ಎದುರು ಗುರುತಿಸಿಕೊಂಡು ಬಿಡುತ್ತಾರೆ. ಭಾರತೀಯರಷ್ಟು ಪ್ರಬುದ್ಧವಾಗಿ ಇಂಗ್ಲೀಷ್ ಮಾತನಾಡಬಲ್ಲ ಶಕ್ತಿ ವಿದೇಶಿಗರಲ್ಲಿ ಇಲ್ಲ. ಯಾರು ಮಾತೃಭಾಷೆಯಲ್ಲಿ ಹೆಚ್ಚು ಪ್ರಬುದ್ಧರಾಗಿರುತ್ತಾರೆ, ಅಂತಹ ವ್ಯಕ್ತಿ ಯಾವುದೇ ಭಾಷೆಯನ್ನು ಸುಲಲಿತವಾಗಿ ಕಲಿಯಬಹುದು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಹೊಸತನದ ಕಲಿಯಲು ಯಾರು ನಿಮ್ಮನ್ನು ತಡೆಯುವುದಿಲ್ಲ.ಪ್ರೊಫೆಸರ್ ಹೇಳಿದ 3 ಪ್ರಮುಖ ಪಾಯಿಂಟ್
ತಂತ್ರಜ್ಞಾನದ ಅತಿಯಾದ ಅವಲಂಬನೆ ವಿನಾಶಕ್ಕೆ ಕಾರಣವೂ ಹೌದು. ಆಧುನಿಕತೆಯ ಒಳಗೆ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿದೆ. ಆನ್‌ಲೈನ್ ತರಗತಿ ಮೂಲಕ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದೆ ಹೆಚ್ಚು.
– ಜಿ.ಎಸ್.ನಾರಾಯಣ ರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ
ತಂತ್ರಜ್ಞಾನದ ಬಳಕೆಯಿಂದಾಗಿ ನಮಗೆ ತಿಳಿಯದಂತೆ ನೆನಪಿನ ಶಕ್ತಿ ಕುಂದುತ್ತಾ ಹೋಗುತ್ತದೆ. ತಂತ್ರಜ್ಞಾನದ ದಾಸರಾಗಿ ಕುಗ್ಗಿದ್ದೆವೆ. ಹೊಸ ತಂತ್ರಜ್ಞಾನ ಬಂದಾಗ ಅದನ್ನು ಬಳಸಿ ಎಂದು ಹೇಳುವ ವ್ಯವಸ್ಥೆ, ಮುಂದೆ ತಂತ್ರಜ್ಞಾನದಿಂದ ದೂರವಿರಿ ಎನ್ನುವಂತಹ ಸ್ಥಿತಿ ಬರಬಹುದು.
– ಜಗನ್ನಾಥ ಡಾಂಗೆ, ಕುವೆಂಪು ವಿವಿ ಶಿಕ್ಷಣಶಾಸ್ತ್ರ ಸಂಶೋಧನಾ ವಿಭಾಗದ ಪ್ರಾಧ್ಯಾಪಕ
ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಶೀಲಾ.ಜಿ, ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಡಾ.ಎನ್.ಡಿ.ಮಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಸುಬ್ರಹ್ಮಣ್ಯ ಪ್ರಾರ್ಥಿಸಿ, ಪ್ರಾಧ್ಯಾಪಕ ಡಾ. ಪ್ರಕಾಶ.ಕೆ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಲಾವಣ್ಯ.ಸಿ.ಇ ನಿರೂಪಿಸಿದರು.
ಇದನ್ನೂ ಓದಿ » ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಎಚ್ಚೆತ್ತ ಅಧಿಕಾರಿಗಳು, ಸ್ಲ್ಯಾಬ್‌ಗಳು ಬದಲು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422