ಶಿವಮೊಗ್ಗದಲ್ಲಿ IPL FAN PARK, ಒಳಗೆ ಏನೇನಿದೆ? ಮೊದಲ ದಿನದ ರೆಸ್ಪಾನ್ಸ್‌ ಹೇಗಿತ್ತು?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಜೋರು ಮಳೆಯ ಮಧ್ಯೆ ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ (NES Ground) ಸ್ಥಾಪಿಸಲಾಗಿದ್ದ ಐಪಿಎಲ್‌ ಫ್ಯಾನ್‌ ಪಾರ್ಕ್‌ಗೆ (IPL Fan Park) ದೊಡ್ಡ ಸಂಖ್ಯೆಯ ಜನರು ಭೇಟಿ ನೀಡಿದ್ದರು. ಬೃಹತ್‌ ಪರದೆ (Giant screen) ಮೇಲೆ ಐಪಿಎಲ್‌ ಪಂದ್ಯ ಕಣ್ತುಂಬಿಕೊಂಡು ಖುಷಿಪಟ್ಟರು.

ಶನಿವಾರ ಕೋಲ್ಕತ ನೈಟ್‌ರೈಡರ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ನಡುವಿನ ಐಪಿಎಲ್‌ ಪಂದ್ಯದ ನೇರ ಪ್ರಸಾರವನ್ನು (Live streaming / Live telecast) ಶಿವಮೊಗ್ಗ ಐಪಿಎಲ್‌ ಫ್ಯಾನ್‌ ಪಾರ್ಕ್‌ನಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

IPL-FAN-PARK-IN-Shimoga-NES-Ground

ಮೊದಲ ಇನ್ನಿಂಗ್ಸ್‌ನ ವೇಳೆ ಮಳೆ ಅಡ್ಡಿ

ಐಪಿಎಲ್‌ ಪಂದ್ಯಾವಳಿಯ ಮೊದಲ ಇನ್ನಿಂಗ್ಸ್‌ನ ವೇಳೆ ಶಿವಮೊಗ್ಗದಲ್ಲಿ ಜೋರು ಮಳೆಯಾಗಿತ್ತು. ಹಾಗಾಗಿ ಫ್ಯಾನ್‌ ಪಾರ್ಕ್‌ಗೆ ಜನರ ಸಂಖ್ಯೆ ಕಡಿಮೆಯಾಗಿತ್ತು. ಬೆರಳೆಣಿಕೆಯಷ್ಟು ಜನರು ಮಾತ್ರ ಆಗಮಿಸಿದ್ದರು. ಮಳೆ ನಿಂತ ಮೇಲೆ ಫ್ಯಾನ್‌ ಪಾರ್ಕ್‌ನಲ್ಲಿ ಜನರ ಸಂಖ್ಯೆ ಹೆಚ್ಚಾಯಿತು. ಎರಡನೇ ಇನ್ನಿಂಗ್ಸ್‌ ಸಂದರ್ಭ ಕುಟುಂಬ ಸಹಿತ ಜನರು ಫ್ಯಾನ್‌ ಪಾರ್ಕ್‌ಗೆ ಆಗಮಿಸಿ ಬೃಹತ್‌ ಪರದೆ ಮೇಲೆ ಕ್ರಿಕೆಟ್‌ ವೀಕ್ಷಿಸಿ ಖುಷಿಪಟ್ಟರು.

ನಿಂತು ಮ್ಯಾಚ್‌ ನೋಡಿದ ಜನರು

ಫ್ಯಾನ್‌ ಪಾರ್ಕ್‌ನಲ್ಲಿ ಬೃಹತ್‌ ಪರದೆ ಮುಂಭಾಗ ಕುಳಿತು ಮ್ಯಾಚ್‌ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಳೆಯಿಂದಾಗಿ ಎನ್‌ಇಎಸ್‌ ಮೈದಾನ ಹಸಿಯಾಗಿದ್ದರಿಂದ ಜನರು ನೆಲದ ಮೇಲೆ ಕೂರಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಜನರು ಅನಿವಾರ್ಯವಾಗಿ ನಿಂತುಕೊಂಡೇ ಮ್ಯಾಚ್‌ ವೀಕ್ಷಿಸಿದರು.

ಫ್ಯಾನ್‌ ಪಾರ್ಕ್‌ನಲ್ಲಿ ಫುಲ್‌ ಎಂಟರ್‌ಟೈನ್ಮೆಂಟ್‌

ಮ್ಯಾಚ್‌ ವೀಕ್ಷಣೆ ಮಾತ್ರವಲ್ಲ ಫ್ಯಾನ್‌ ಪಾರ್ಕ್‌ಗೆ ಆಗಮಿಸುವವರಿಗೆ ಫುಲ್‌ ಎಂಟರ್‌ಟೈನ್ಮೆಂಟ್‌ಗೂ ವ್ಯವಸ್ಥೆ ಮಾಡಲಾಗಿದೆ. ತಿಂಡಿ, ತಿನಿಸುಗಳ ಖರೀದಿಗೂ ಅವಕಾಶವಿದೆ. ಫ್ಯಾನ್‌ ಪಾರ್ಕ್‌ನಲ್ಲಿ ಏನೇನೆಲ್ಲ ಇದೆ ಎಂಬ ಹೈಲೈಟ್ಸ್‌ (Key highlights) ಇಲ್ಲಿದೆ.

  • ಫ್ಯಾನ್‌ ಪಾರ್ಕ್‌ಗೆ ಉಚಿತ ಪ್ರವೇಶವಿದೆ (Free entry). ಒಳಗೆ ಪ್ರವೇಶಿಸುವ ಪ್ರತಿಯೊಬ್ಬರ ಕೈಗೂ ಬ್ಯಾಂಡ್‌ ಹಾಕಲಾಗುತ್ತದೆ ಮತ್ತು ಲಕ್ಕಿ ಡ್ರಾ ಕೂಪನ್‌ (Lucky draw coupon) ನೀಡಲಾಗುತ್ತದೆ.
  • ಫ್ಯಾನ್‌ ಪಾರ್ಕ್‌ನ ಒಳಗೆ ವಿಶೇಷ ಚೇತನರು, ವೃದ್ಧರಿಗೆ (Senior citizens) ಕೂರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ಹಾಸ್ಪಿಟಾಲಿಟಿ ಏರಿಯಾ (hospitality area) ನಿರ್ಮಿಸಲಾಗಿದೆ.
  • ಫ್ಯಾನ್‌ ಪಾರ್ಕ್‌ನಲ್ಲಿ ಬೃಹತ್‌ ಪರದೆಯಲ್ಲಿ ಕ್ರಿಕೆಟ್‌ ವೀಕ್ಷಿಸಬಹುದಾಗಿದೆ. ಪರದೆಯ ಮುಂಭಾಗ ವಿಸ್ತಾರವಾದ ಜಾಗದಲ್ಲಿ ಕುಳಿತು ಪಂದ್ಯ ಕಣ್ತುಂಬಿಕೊಳ್ಳಬಹುದಾಗಿದೆ.
  • ಒಳಾಂಗಣದಲ್ಲಿ ವಿವಿಧ ಆಟಗಳನ್ನು (Gaming zone) ಆಡಲು ಅವಕಾಶವಿದೆ. ಮಕ್ಕಳು ಕ್ರಿಕೆಟ್‌ ಆಡಲು ನೆಟ್ಸ್‌ ವ್ಯವಸ್ಥೆಯನ್ನು (Cricket practice nets) ಮಾಡಲಾಗಿದೆ.
  • ಲೈವ್‌ ಕ್ರಿಕೆಟ್‌ನ ಪ್ರತಿ ಬ್ರೇಕ್‌ನ ಸಂದರ್ಭ ಅಭಿಮಾನಿಗಳಿಗೆ ಜೋಶ್‌ ತುಂಬಲು ಡಿಜೆ ವ್ಯವಸ್ಥೆ (Live DJ system) ಇದೆ. ಇಲ್ಲಿದೆ ವಿಡಿಯೋ

ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯ ವೀಕ್ಷಣೆಗೂ ಫ್ಯಾನ್‌ ಪಾರ್ಕ್‌ನಲ್ಲಿ ಅವಕಾಶವಿದೆ. ದೊಡ್ಡ ಸಂಖ್ಯೆಯ ಅಭಿಮಾನಿಗಳು ಫ್ಯಾನ್‌ ಪಾರ್ಕ್‌ಗೆ ಬರುವ ಹಿನ್ನೆಲೆ ಪೊಲೀಸ್‌ ಬಂದೋಬಸ್ತ್‌ (Police security) ಕೈಗೊಳ್ಳಲಾಗಿದೆ.

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 17, 2026