ರಸ್ತೆ ಮೇಲೆ ಕುಳಿತ ಆಯೋಜಕರು, ದಾರಿ ಉದ್ದಕ್ಕೂ ರಕ್ಷಣೆ, ಸ್ವಚ್ಛತೆ ಮಾಡಿದ ಸ್ವಯಂ ಸೇವಕರು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

 SHIVAMOGGA LIVE NEWS 

ಶಿವಮೊಗ್ಗ | ನಗರದಲ್ಲಿ ನಡೆದ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾದಲ್ಲಿ (JAATHA) ಸ್ವಯಂ ಸೇವಕರು, ಕಾರ್ಯಕ್ರಮ ಆಯೋಜಕರ ನಡೆ ಜನ ಮೆಚ್ಚುಗೆ ಪಡೆಯಿತು. ಜಾಥಾದಲ್ಲಿ ಪಾಲ್ಗೊಂಡವರ ರಕ್ಷಣೆ, ಸ್ವಚ್ಛೆತಾ ಕಾರ್ಯ ಗಮನ ಸೆಳೆಯಿತು.

10 LAKH VIEWS IMAGE

ಶಿವಮೊಗ್ಗ ಮೆಡಿಕಲ್ ಕಾಲೇಜು ಮುಂಭಾಗ ಜಾಥಾಗೆ ಚಾಲನೆ ನೀಡಲಾಯಿತು. ಅಲ್ಲಿಂದಲೂ ಸ್ವಯಂ ಸೇವಕರೆ ಭದ್ರತೆ ಮತ್ತು ಸ್ವಚ್ಛತೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ದಾರಿ ಉದ್ದಕ್ಕೂ ಕ್ಲೀನ್ ಕ್ಲೀನ್

TODAY-LINK-NEWS-IMAGE.jpgಜಾಥಾದಲ್ಲಿ ಪಾಲ್ಗೊಂಡಿದ್ದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನೀರು ಕುಡಿದು ಬಾಟಲಿಗಳನ್ನು ಕಳಗೆ ಬಿಸಾಡಿದಾಗ ಅವುಗಳನ್ನು ಸ್ವಯಂ ಸೇವಕರೆ ಆಯ್ದುಕೊಂಡು, ಕಸದ ಬುಟ್ಟಿಗೆ ಹಾಕಿಕೊಂಡು ಹೋಗುತ್ತಿದ್ದರು. ಜಾಥಾ ಮತ್ತು ಭಾಷಣ ಮುಗಿಯುವ ತನಕ ಸ್ವಯಂ ಸೇವಕರು ನೀರಿನ ಬಾಟಲಿಗಳನ್ನು ಆಯುವುದು ಕಂಡು ಬಂತು.

ಇನ್ನು, ಸೈನ್ಸ್ ಮೈದಾನದ ಮುಂಭಾಗ ರಸ್ತೆಯಲ್ಲಿ ಸಭೆ ವೇಳೆ ಎಲ್ಲರಿಗೂ ಚಾಕ್ಲೇಟ್ ವಿತರಣೆ ಮಾಡಲಾಯಿತು. ಚಾಕ್ಲೇಟ್ ಕವರ್’ಗಳನ್ನು ಜನರು ಕೆಳಗೆ ಬಿಸಾಡಿದರೆ ಸ್ವಯಂ ಸೇವಕರು ಆವುಗಳನ್ನು ಆಯ್ದುಕೊಂಡು ತಾವೇ ತಂದಿದ್ದ ಕಸದ ಬುಟ್ಟಿಗೆ ಹಾಕಿಕೊಂಡು ಹೋಗುತ್ತಿದ್ದರು.

ಸ್ವಯಂ ಸೇವಕರಿಂದ ರಕ್ಷಣೆ

ಜಾಥಾಗೆ ಪೊಲೀಸ್ ಇಲಾಖೆ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೂ ಮೆರವಣಿಗೆ ಹಾದಿ ಉದ್ದಕ್ಕೂ ಸ್ವಯಂ ಸೇವಕರು ಕೈ ಕೈ ಹಿಡಿದು, ಚೈನ್ ಲಿಂಕ್ ಮಾಡಿಕೊಂಡು ಸಾಗಿದರು.  ಹಾಗಾಗಿ ಧರ್ಮಗುರುಗಳು, ಗಣ್ಯರು ಸರಾಗವಾಗಿ ಜಾಥಾದಲ್ಲಿ ಪಾಲ್ಗೊಳ್ಳಲು ಅನುಕೂಲವಾಯಿತು.

Shathigagi Nadige in Shimoga

ರಸ್ತೆ ಮೇಲೆ ಕುಳಿತ ಆಯೋಜಕರು

‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾಗಾಗಿ ಯಾವುದೆ ವೇದಿಕೆ ನಿರ್ಮಾಣ ಮಾಡಿರಲಿಲ್ಲ. ಸೈನ್ಸ್ ಮೈದಾನ ಮುಂಭಾಗ ಬಸ್ ನಿಲ್ದಾಣವನ್ನೇ ವೇದಿಕೆಯಾಗಿ ಪರಿವರ್ತಿಸಲಾಯಿತು. ಧರ್ಮಗುರುಗಳು ಮಾತ್ರ ವೇದಿಕೆ ಮೇಲೆ ಕುಳಿತಿದ್ದರು. ಉಳಿದಂತೆ ಜಾಥಾ ಆಯೋಜಿಸಿದ್ದ ವಿವಿಧ ಸಂಘಟೆನೆಗಳ ಪ್ರಮುಖರು ರಸ್ತೆ ಮೇಲೆ ಕುಳಿತು ಧರ್ಮಗುರುಗಳ ಮಾತು ಆಲಿಸಿದರು. ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ.ಧನಂಜಯ ಸರ್ಜಿ, ವಕೀಲ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ,  ಕೆ.ಎಲ್.ಅಶೋಕ್, ಅನನ್ಯ ಶಿವಕುಮಾರ್ ಸೇರಿದಂತೆ ಹಲವರು ರಸ್ತೆ ಮೇಲೆ ಕುಳಿತು ಧರ್ಮಗುರುಗಳ ಮಾತು ಕೇಳಿದರು.

Dr Dhananjaya Sarji sitting on road

Shimoga Nanjappa Hospital

ಇದನ್ನೂ ಓದಿ – ಶಿವಮೊಗ್ಗದಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾ, ಹೇಗಿತ್ತು? ಯಾರೆಲ್ಲ ಪಾಲ್ಗೊಂಡಿದ್ದರು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment