ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ಅಕ್ಟೋಬರ್ 2019
ಈ ಬಾರಿ ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಗಜಪಡೆ ಮೆರವಣಿಗೆ. ಅಂಬಾರಿ ಹೊತ್ತು ಆನೆಗಳು ಮೆರವಣಿಗೆ ನಡೆಸಲಿವೆ. ಈಗಾಗಲೆ ಶಿವಮೊಗ್ಗದಲ್ಲಿ ತಾಲೀಮು ಆರಂಭವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವೆಲ್ಲ ಆನೆಗಳು ಪಾಲ್ಗೊಂಡಿವೆ?
ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿವೆ. ಸಾಗರ, ಗಂಗೆ ಮತ್ತು ಭಾನುಮತಿ ಆನೆಗಳು ಶಿವಮೊಗ್ಗ ನಗರಕ್ಕೆ ಬಂದಿವೆ.
ಸಾಗರ ಆನೆ : 1989ರಲ್ಲಿ ಸಾಗರ ತಾಲೂಕಿನಲ್ಲಿ ಸೆರೆ ಹಿಡಿಯಲಾಗಿತ್ತು. ಈ ಆನೆಗೆ ಸುಮಾರು 30 ವರ್ಷವಿದೆ. ಶಾಂತ ಸ್ವಭಾವ. ಹಲವು ಸರಿ ಅಂಬಾರಿ ಹೊತ್ತ ಅನುಭವವಿದೆ.
ಗಂಗೆ ಆನೆ : 1968ರಲ್ಲಿ ಮೈಸೂರು ಜಿಲ್ಲೆಯ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಗಿತ್ತು. ವಯಸ್ಸು 72 ವರ್ಷ. ಹಲವು ಬಾರಿ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಅನುಭವ ಗಂಗೆ ಆನೆಗಿದೆ.
ಭಾನುಮತಿ ಆನೆ : 2014ರಲ್ಲಿ ಭಾನುಮತಿ ಆನೆಯನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆ ಹಿಡಿಯಲಾಗಿತ್ತು. ಸ್ವಭಾವದಲ್ಲು ಉತ್ತಮವೆನಿಸಿಕೊಂಡಿದೆ. ಭಾನುಮತಿಗೆ ಇದು ಮೊದಲ ದಸರಾ ಉತ್ಸವವಾಗಿದೆ.
ಹೇಗಿದೆ ಜಂಬೂ ಸವಾರಿ ತಾಲೀಮು?
ಗಜಪಡೆಗೆ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಪ ವಲಯ ಅರಣ್ಯಾಧಿಕಾರಿ, ಮಾವುತ, ಕಾವಾಡಿ ಸೇರಿ ಒಟ್ಟು 15 ಸಿಬ್ಬಂದಿ ಗಜಪಡೆಯೊಂದಿಗೆ ಇದ್ದಾರೆ. ವಾಸವಿ ಶಾಲೆಯಿಂದ ಲಕ್ಷ್ಮೀ ಚಿತ್ರಮಂದಿರ ಬಳಿ ಇರುವ ಹಳೇ ಜೈಲು ಆವರಣದವರೆಗೆ ತಾಲೀಮು ನಡೆಸಲಾಗುತ್ತಿದೆ.
ಪ್ರತಿದಿನ ಬೆಳಗ್ಗೆ 7.30 ಮತ್ತು ಸಂಜೆ 4.30ಕ್ಕೆ ರಾಜಬೀದಿಯಲ್ಲಿ ತಾಲೀಮು ನಡೆಸಲಾಗುತ್ತದೆ. ತಾಲೀಮು ಬಳಿಕ ಆನೆಗಳಿಗೆ ಆಹಾರದ ವ್ಯವಸ್ಥೆ ಇದೆ. ಆ ಬಳಿಕ ಅವುಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ವಾಸವಿ ಶಾಲೆಯಿಂದ ತಾಲೀಮು ನಡೆಸಲು ಹೊರಡುವಾಗ 500 ಕೆ.ಜಿಯ ಮರಳಿನ ಮೂಟೆಗಳನ್ನು ಹೊತ್ತು ಸಾಗರ ಆನೆ ತೆರಳಲಿದೆ. ಜೈಲು ಆವರಣದಲ್ಲಿ ಮರಳು ಮೂಟೆಗಳನ್ನು ಬಿಟ್ಟು ಆನೆಗಳು ಹಿಂತಿರುಗಲಿವೆ.
ಗಜಪಡೆ ತಾಲೀಮು ನೋಡಲು ರಾಜಬೀದಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಮಕ್ಕಳು ಕೂಡ ಕುತೂಹಲದಿಂದ ತಾಲೀಮು ಕಣ್ತುಂಬಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]