ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020
ನಾಳೆಯಿಂದ ಶಿವಮೊಗ್ಗ ಬೆಂಗಳೂರು ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಆಗುತ್ತಿದೆ. ಮತ್ತೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ತಪಾಸಣೆ ಮಾಡುವುದಕ್ಕೆ ರೈಲ್ವೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸಾಮಾಜಿಕ ಅಂತರದ ಬಾಕ್ಸ್ ರೆಡಿ
ನಿಗದಿಯಂತೆ ಜೂನ್ 1ರಂದು ಬೆಳಗ್ಗೆ 5.30ಕ್ಕೆ ರೈಲು ಸಂಚಾರ ಆರಂಭವಾಗಲಿದೆ. ಸಾಮಾಜಿಕ ಅಂತರ ಮತ್ತು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಗಾಗಬೇಕಿರುವ ಹಿನ್ನೆಲೆ, ಪ್ರಯಾಣಿಕರು ನಿಗದಿತ ಸಮಯಕ್ಕಿಂತಲು 90 ನಿಮಿಷ ಮೊದಲೇ ರೈಲ್ವೆ ನಿಲ್ದಾಣ ತಲುಪಬೇಕಿದೆ. ಇನ್ನು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಹಿನ್ನೆಲೆ ರೈಲ್ವೆ ನಿಲ್ದಾಣದ ಮುಂದೆ ಬಾಕ್ಸ್‍ಗಳನ್ನು ಹಾಕಲಾಗಿದೆ. ನಿಲ್ದಾಣದಾದ್ಯಂತ ಸ್ಯಾನಿಟೈಸ್ ಮಾಡಿದ್ದು, ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ.
ಒಂದು ಬೋಗಿಯಲ್ಲಿ 54 ಮಂದಿಯಷ್ಟೇ
ಈ ಮೊದಲು ರೈಲು ಸಂಪೂರ್ಣ ಭರ್ತಿಯಾಗುತ್ತಿತ್ತು. ಆದರೆ ಸಾಮಾಜಿಕ ಅಂತರದ ನಿಯಮ ಪಾಲಿಸಬೇಕಿರುವ ಹಿನ್ನೆಲೆ, ಪ್ರತಿ ಬೋಗಿಗೆ 54 ಪ್ರಯಾಣಿಕರಷ್ಟೇ ಇರಬೇಕಿದೆ. ಹಾಗಾಗಿ ರೈಲಿನಲ್ಲಿ ಕೇವಲ 648 ಸೀಟುಗಳಷ್ಟೇ ಬುಕಿಂಗ್ ಮಾಡಲು ಅವಕಾಶವಿದೆ. ಮತ್ತೊಂದೆಡೆ ಎಸಿ ಕೋಚ್‍ಗಳು ಇರುವುದಿಲ್ಲ.
ಎಲ್ಲೆಲ್ಲಿ ನಿಲ್ಲುತ್ತೆ ಜನ ಶತಾಬ್ದಿ?
ಈ ಮೊದಲು ರೈಲು ಎಲ್ಲೆಲ್ಲಿ ಸ್ಟಾಪ್ ಇತ್ತೋ ಅಲ್ಲೆಲ್ಲ ನಿಲುಗಡೆ ಇರಲಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಭದ್ರಾವತಿ, ಕಡೂರು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದೆ.
ರೈಲ್ವೆ ನಿಲ್ದಾಣದಲ್ಲೂ ಟಿಕೆಟ್ ಬುಕಿಂಗ್
ಆನ್‍ಲೈನ್ ಮೂಲಕ ಮಾತ್ರ ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಅವಕಾಶವಿತ್ತು. ಆದರೆ ಶಿವಮೊಗ್ಗದ ಸೇರಿಂತೆ ಆಯ್ದ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪಿಆರ್‍ಎಸ್ ಕೌಂಟರ್‍ಗಳನ್ನು ಆರಂಭಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಾಗಾಗಿ ರೈಲ್ವೆ ನಿಲ್ದಾಣದಲ್ಲೂ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳುವ ಆವಕಾಶವಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422