ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ರಿಷಬ್ ಶೆಟ್ಟಿ ನಟನೆ, ನಿರ್ದೇಶನ ಮಾಡಿರುವ ಕಾಂತಾರ 1 ಸಿನಿಮಾಗೆ (Movie) ಶಿವಮೊಗ್ಗದಲ್ಲಿ ಪ್ರೇಕ್ಷಕರಿಂದ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್ ಅಗಿದ್ದು, ಇಂದು ಬೆಳಗ್ಗೆಯಿಂದಲೆ ಚಿತ್ರಮಂದಿರಕ್ಕೆ ಕುಟುಂಬ ಸಹಿತ ಜನರು ಆಗಮಿಸುತ್ತಿದ್ದಾರೆ.
ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರ ಮತ್ತು ಭಾರತ್ ಸೀನಿಮಾಸ್‌ನಲ್ಲಿ ಕಾಂತಾರ 1 ಸಿನಿಮಾ ಪ್ರದರ್ಶನವಾಗುತ್ತಿದೆ. ಅರಂಭಿಕ ಪ್ರದರ್ಶನಗಳೆ ಸಂಪೂರ್ಣ ಭರ್ತಿಯಾಗಿವೆ.
ಪೇಡ್ ಪ್ರೀಮಿಯರ್ ಹೌಸ್‌ಫುಲ್
ಶಿವಮೊಗ್ಗದಲ್ಲಿಯು ಕಾಂತಾರ 1 ಪೇಡ್ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಅ.1ರಂದು ರಾತ್ರಿ 7 ಗಂಟೆಗೆ ಒಂದು ಶೋ, ಭಾರತ್ ಸಿನಿಮಾಸ್‌ನಲ್ಲಿ ರಾತ್ರಿ 7 ಗಂಟೆ, ರಾತ್ರಿ 7.15 ಮತ್ತು ರಾತ್ರಿ 10.15ಕ್ಕೆ ಮೂರು ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು. ಎಲ್ಲ ಪ್ರೀಮಿಯರ್ ಶೋಗಳು ಹೌಸ್ ಫುಲ್ ಪ್ರದರ್ಶನವಾಗಿವೆ.

ಇನ್ನು, ಸಿನಿಮಾ ನೋಡಿ ಬಂದ ಶಿವಮೊಗ್ಗದ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಾನು ಅಭಿನಯಿಸಿದ್ದೇನೆ. ಫಸ್ಟ್ ಪ್ರೀಮಿಯರ್ ಶೋನಲ್ಲೆ ಚಿತ್ರ ನೋಡಿದ್ದೇನೆ. ಸಾಂಗ್ ಮತ್ತು ಸಿನಿಮಾ ನೆಕ್ಸ್ಟ್ ಲೆವೆಲ್‌ನಲ್ಲಿದೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.
ಕಾಂತಾರ ನೋಡಲು ಕಾತುರದಿಂದ ಇದ್ದೆವು. ಈ ಕಾಂತಾರ ಹಲವು ದೇವರುಗಳ ಅವತಾರ. ಎಲ್ಲರು ಬಂದು ನೋಡಬಹುದು.
ಮೊದಲು ಬಿಡುಗಡೆಯಾಗಿದ್ದ ಕಾಂತಾರಕ್ಕಿಂತಲು ಇದು ಅತ್ಯಂತ ಅದ್ಧೂರಿಯಾಗಿ ಮೂಡಿ ಬಂದಿದೆ. ದೈವ ನಂಬಿಕೆ, ಭಕ್ತಿ ಅತ್ಯಂತ ಅದ್ಭುತವಾಗಿದೆ.
ಬೆಳಗಿನ ಶೋ ಹೌಸ್ ಫುಲ್
ಇನ್ನು, ಇಂದು ಕಾಂತಾರ 1 ಸಿನಿಮಾ ಬಿಡುಗಡೆಯಾಗಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆಗೆ ಮೊದಲ ಶೋ ಹೌಸ್‌ಫುಲ್ ಆಗಿದೆ. ಬೆಳಗಿನ ಶೋಗೆ ಕುಟುಂಬ ಸಹಿತ ಜನರು ಆಗಮಿಸಿದ್ದು ಚಿತ್ರತಂಡಕ್ಕೆ ಆಶಾದಾಯಕವಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಚೇತನ್‌ಗೆ ಅದ್ಧೂರಿ ಸ್ವಾಗತ, ಸಿಟಿಯಲ್ಲಿ ಬೈಕ್ ಜಾಥಾ
ಇವತ್ತು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಐದು ಶೋ ಇರಲಿದೆ. ಭಾರತ್ ಸಿನಿಮಾಸ್‌ನಲ್ಲಿ 4 ಪರದೆಯಲ್ಲಿ 15 ಶೋಗಳಿವೆ.





Kantara 1 Movie in shimoga


