ಶಿವಮೊಗ್ಗ, ಭದ್ರಾವತಿಯಲ್ಲಿ ಮಹಿಳೆಯರ ಆಕ್ರೋಶ, ಮುಖಂಡರ ಬಿಡುಗಡೆಗೆ ಆಗ್ರಹ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 JANUARY 2023

SHIMOGA / BHADRAVATHI : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬಂಧನ ಖಂಡಿಸಿ ಮತ್ತು ಬಿಡುಗಡೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ಕರವೇ ಮಹಿಳಾ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡದ ನಾಡು, ನುಡಿಗೆ ಧಕ್ಕೆಯಾದಾಗ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ದಿಟ್ಟತನದ ಹೋರಾಟ ನಡೆಸುತ್ತಿದ್ದಾರೆ. ಅನ್ಯ ಭಾಷೆಯ ನಾಮಫಲಕ ತೆರವುಗೊಳಿಸುವಂತೆ ಹೋರಾಟ ಆರಂಭಿಸುತ್ತಿದ್ದಂತೆ ಅವರನ್ನು ಬಂಧಿಸಿರುವುದು ದುರದೃಷ್ಟಕರ. ಕೂಡಲೆ ನಾರಾಯಣಗೌಡ ಮತ್ತು ಕರವೇ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ಆರ್.ಮಂಜು, ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್‌, ಪ್ರಮುಖರಾದ ಬಾಲಮುರಳಿ, ಶೈಲೇಶ್‌, ವಿಜಯ್‌ ಕುಮಾರ್‌ ಸೇರಿದಂತೆ ಹಲವರು ಇದ್ದರು.

ಭದ್ರಾವತಿಯಲ್ಲಿ ಮಹಿಳೆಯರ ಹೋರಾಟ

ಭದ್ರಾವತಿಯಲ್ಲಿ ತಾಲೂಕು ಕಚೇರಿಯಲ್ಲಿ ಕರವೇ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಕಾರ್ಯಕರ್ತರ ಬಂಧನ ಸರಿಯಲ್ಲ. ಅವರನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್‌, ಮಹೇಶ್ವರಿ, ನಾಗರತ್ನ, ಸುಶ್ಮಿತಾ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಹೊಸ ವರ್ಷ, ಶಿವಮೊಗ್ಗದ ಜಿಮ್‌ಗಳು, ಯೋಗ ತರಬೇತಿ ಕೇಂದ್ರಗಳಿಗೆ ಅಡ್ಮಿಷನ್‌ ಹೆಚ್ಚಳ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment