ಶಿವಮೊಗ್ಗದಲ್ಲಿ ಮತ್ತೊಮ್ಮೆ ಶತಕ ಸಿಡಿಸಿದ ಕರುಣ್‌ ನಾಯರ್‌, ಈಗ ಕರ್ನಾಟಕದ ಸ್ಕೋರ್‌ ಎಷ್ಟು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಪಂದ್ಯದಲ್ಲಿ (Ranji Cricket) ಕರುಣ್‌ ನಾಯರ್‌ ಶತಕ ಸಿಡಿಸಿದ್ದಾರೆ. ಎರಡನೇ ದಿನದ ಭೋಜನ ಅವಧಿಗು ಮುನ್ನ 101 ಓವರ್‌ಗಳಿಗೆ ಕರ್ನಾಟಕ ತಂಡ 8 ವಿಕೆಟ್‌ ಕಳೆದುಕೊಂಡು 336 ರನ್‌ ಗಳಿಸಿದೆ.

ಕರ್ನಾಟಕಕ್ಕೆ ಆರಂಭಿಕ ಆಘಾತ

ಶನಿವಾರ 69 ಓವರ್‌ಗೆ ಕರ್ನಾಟಕ ತಂಡ 5 ವಿಕೆಟ್‌ ಕಳೆದುಕೊಂಡು 222 ರನ್‌ ಗಳಿಸಿತ್ತು. ಇವತ್ತು ಕರುಣ್‌ ನಾಯರ್‌ ಮತ್ತು ಶ್ರೇಯಸ್‌ ಗೋಪಾಲ್‌ ಉತ್ತಮ ಓಪನಿಂಗ್‌ ನೀಡಿದರು. 77ನೇ ಓವರ್‌ನಲ್ಲಿ ವಿಜೇಶ್‌ ಪ್ರಭುದೇಸಾಯಿ ಬೌಲಿಂಗ್‌ನಲ್ಲಿ ಶ್ರೇಯಸ್‌ ಗೋಪಾಲ್‌, ಸ್ನೇಹಲ್‌ ಕೌತಾನ್ಕರ್‌ಗೆ ಕ್ಯಾಚ್‌ ನೀಡಿದರು. ಇದು ಕರ್ನಾಟಕ ತಂಡಕ್ಕೆ ಎರಡನೇ ದಿನದ ಆರಂಭಿಕ ಆಘಾತ ಉಂಟು ಮಾಡಿತು. ಇನ್ನು 88ನೇ ಓವರ್‌ನಲ್ಲಿ ಯಶೋವರ್ಧನ್‌ (14 ರನ್)‌ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. 99ನೇ ಓವರ್‌ನಲ್ಲಿ ವೈಶಾಕ್‌ (31 ರನ್)‌ ಎಲ್‌ಬಿಡ್ಲು ಆಗಿ ಕ್ರೀಸ್‌ನಿಂದ ಹೊರ ನಡೆದರು.

ಕರುಣ್‌ ನಾಯರ್‌ ಶತಕ

261025-Karun-Nair-Scores-century-in-Shimoga-Ranji-cricket.webp

ಶನಿವಾರ 86 ರನ್‌ ಗಳಿಸಿದ್ದ ಕರುಣ್‌ ನಾಯಕರ್‌ ಇವತ್ತು ಶತಕ ಸಿಡಿಸಿದರು. ಭೋಜನ ವಿರಾಮದ ಹೊತ್ತಿಗೆ ಕರುಣ್‌ ನಾಯರ್‌ 137 ರನ್‌ ಗಳಿಸಿದ್ದಾರೆ. ನವುಲೆಯ ಕ್ರೀಡಾಂಗಣದಲ್ಲಿ 2017ರಲ್ಲಿ ಕರ್ನಾಟಕ ಮತ್ತು ಹೈದರಾಬಾದ್‌ ನಡುವಿನ ರಣಜಿ ಪಂದ್ಯದಲ್ಲಿಯು ಕರ್ನಾಟಕದ ತಂಡದ ಕರುಣ್‌ ನಾಯರ್‌ ಶತಕ ಸಿಡಿಸಿದ್ದರು. ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 23 ರನ್‌, ಎರಡನೇ ಇನ್ನಿಂಗ್ಸ್‌ನಲ್ಲಿ 134 ರನ್‌ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು.

ಇದನ್ನೂ ಓದಿ » ಮಾಜಿ MLAಯನ್ನು ಕೆಳಗೆ ಉರುಳಿಸಿದ ಹೋರಿ, ವಿಡಿಯೋ ವೈರಲ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 26, 2025

Leave a Comment