ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | PROTEST| 10 ಮೇ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಿಜೆಪಿ ದುರಾಡಳಿತದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಾದಯಾತ್ರೆ ಮಾಡಿದ್ದಾರೆ. ಆದರೆ ಇವತ್ತು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಕಿಮ್ಮನೆ ರತ್ನಾಕರ್ ಅವರಿಗೆ ಭಾಷಣಕ್ಕೆ ಅವಕಾಶ ನೀಡಲಿಲ್ಲ. ಫ್ಲೆಕ್ಸ್’ಗಳಲ್ಲಿಯು ಅವರ ಭಾವಚಿತ್ರ ಕಾಣಿಸಲಿಲ್ಲ. ಇದು ಅವರ ಬೆಂಬಲಿಗರನ್ನು ಕೆರಳಿಸಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಸತತ ಐದು ದಿನ 70 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಇವತ್ತು ಅವರ ಪಾದಯಾತ್ರೆ ಶಿವಮೊಗ್ಗಕ್ಕೆ ತಲುಪಿತು. ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನಧ್ವನಿ ಪ್ರತಿಭಟನೆಯಲ್ಲಿ ಕಿಮ್ಮೆನ ರತ್ನಾಕರ್ ಅವರು ಪಾಲ್ಗೊಂಡಿದ್ದರು.
ಭಾಷಣಕ್ಕೆ ಕರೆಯಲೆ ಇಲ್ಲ
ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಈ ವೇಳೆ ವೇದಿಕೆ ಮೇಲಿದ್ದ ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಸಚಿವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಆದರೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಭಾಷಣ ಮಾಡಲು ಅವಕಾಶ ನೀಡಲಿಲ್ಲ.
ಕೊನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾಷಣ ಮುಗಿಸುತ್ತಿದ್ದಂತೆ ಜನರು ಸಭೆಯಿಂದ ಹೊರಡಲು ಎದ್ದು ನಿಂತರು. ಆ ಹೊತ್ತಿನಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಭಾಷಣ ಮಾಡಲು ನಿರೂಪಕರು ಆಹ್ವಾನಿಸಿದರು. ಮುಖಂಡರ ಒತ್ತಾಯಕ್ಕೆ ಕಿಮ್ಮನೆ ರತ್ನಾಕರ್ ಅವರು ಕೆಲವು ಸೆಕೆಂಡ್ ಭಾಷಣ ಮಾಡಿದರು. ಇದು ಅವರ ಬೆಂಬಲಿಗರನ್ನು ಕೆರಳಿಸಿತು.
ಬ್ಯಾನರ್’ಗಳಲ್ಲೂ ಕಿಮ್ಮನೆ ನಾಪತ್ತೆ
ಇನ್ನು, ಇವತ್ತಿನ ಪ್ರತಿಭಟನೆ ಕುರಿತು ಪಕ್ಷದ ಕಚೇರಿ ಮುಂದೆ ಹಾಕಲಾಗಿದ್ದ ಬ್ಯಾನರ್’ನಲ್ಲಿ ಕಾಂಗ್ರೆಸ್’ನ ಎಲ್ಲಾ ಮುಖಂಡರ ಫೋಟೊಗಳಿದ್ದವು. ಆದರೆ ಕಿಮ್ಮನೆ ರತ್ನಾಕರ್ ಅವರ ಭಾವಚಿತ್ರ ಇರಲಿಲ್ಲ. ಇದು ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಿಮ್ಮನೆ ರತ್ನಾಕರ್ ಅವರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿತು. ಕಾಂಗ್ರೆಸ್ ಕಚೇರಿ ಬಾಗಿಲು ಹಾಕಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ | ಮಾಜಿ ಸಚಿವ ಕಿಮ್ಮನೆ ರತ್ನಾಕರ್’ಗೆ ಮಾಜಿ ಸಿಎಂ ಸಿದ್ದರಾಮಯ್ಯ ಫೋನ್ ಕರೆ