ಕ್ಷುಲಕ ವಿಚಾರಕ್ಕೆ ಜಗಳ, ಶಿವಮೊಗ್ಗದಲ್ಲಿ ಅತ್ತೆಗೆ ಚಾಕು ಇರಿದ ಸೊಸೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 28 ಜೂನ್ 2022

ಕ್ಷುಲಕ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿ, ಸೊಸೆ ಅತ್ತೆಗೆ ಚಾಕು ಇರಿದ (KNIEF ATTACK) ಪ್ರಕರಣ ವರದಿಯಾಗಿದೆ. ಅಲ್ಲದೆ ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

Shimoga Nanjappa Hospital

ಶಿವಮೊಗ್ಗದ ಬಡಾವಣೆಯೊಂದರ ಮನೆಯಲ್ಲಿ ಘಟನೆ ಸಂಭವಿಸಿದೆ. ಅತ್ತೆ ಮತ್ತು ಸೊಸೆ ಮಧ್ಯೆ ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿದೆ.

ಏನಿದು ಪ್ರಕರಣ?

ಮಗನಿಗೆ ಮದುವೆಯಾಗಿ 18 ತಿಂಗಳು ಕಳೆದಿತ್ತು. ಆದರೆ ಅತ್ತೆ ಮತ್ತು ಸೊಸೆ ಮಧ್ಯೆ ಹೊಂದಾಣಿಕೆ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಗ ಮತ್ತು ಸೊಸೆ ಬೆಂಗಳೂರಿನಲ್ಲಿದ್ದರು. ಈಚೆಗೆ ಮಗ, ಸೊಸೆ ಶಿವಮೊಗ್ಗಕ್ಕೆ ಆಗಮಿಸಿದ್ದರು.

ಜೂ.25ರಂದು ಮಧ್ಯಾಹ್ನ ಮಗ ಮನೆಯಲ್ಲಿ ಇರದ ವೇಳೆ ಅತ್ತೆ ಮತ್ತು ಸೊಸೆ ಮಧ್ಯೆ ಕ್ಷುಲಕ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ಸೊಸೆ, ಅತ್ತೆಯ ಮೇಲೆ ಹಲ್ಲೆ ಮಾಡಿ, ಅಡುಗೆ ಮನೆಯಲ್ಲಿದ್ದ ಚಾಕು ತಂದು ಅತ್ತೆಯ ಬಲಗೈ ತೋಳಿಗೆ ಇರಿದಿದ್ದಾಳೆ (KNIEF ATTACK) ಎಂದು ಆರೋಪಿಸಲಾಗಿದೆ. ಅಷ್ಟು ಹೊತ್ತಿಗೆ ಮಗ ಮನೆಗೆ ಬಂದಿದ್ದು ಜಗಳ ಬಿಡಿಸಿದ್ದಾನೆ. ಈ ವೇಳೆ ಸೊಸೆ ಜೀವ ಬೆದರಿಕೆ ಒಡ್ಡಿದ್ದಾಳೆ ಎಂದು ಅತ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಆರೋಪ ಸಾಬೀತು, ಭದ್ರಾವತಿ ಯುವಕನಿಗೆ 20 ವರ್ಷ ಜೈಲು, 50 ಸಾವಿರ ರೂ. ದಂಡ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment