ಕೋಟೆ ಮಾರಿಕಾಂಬ ಜಾತ್ರೆ, ಗದ್ದುಗೆ ಮೇಲೆ ತಾಯಿಯ ಪ್ರತಿಷ್ಠಾಪನೆ, ಸಾವಿರ ಸಾವಿರ ಭಕ್ತರಿಂದ ದರ್ಶನ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 23 ಮಾರ್ಚ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಗಾಂಧಿ ಬಜಾರ್’ನ ತವರು ಮನೆಯಿಂದ ಶ್ರೀ ಮಾರಿಕಾಂಬ ದೇವಿಯನ್ನು ಮಾರಿ ಗದ್ದುಗೆಗೆ ಕರೆತಂದು ಪ್ರತಿಷ್ಠಾಪಿಸಲಾಗಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬೆಳಗ್ಗೆಯಿಂದ ಸಾಲುಗಟ್ಟಿ ತೆರಳುತ್ತಿದ್ದಾರೆ.

Shimoga Nanjappa Hospital

ಶಿವಮೊಗ್ಗ ಕೋಟೆ ಮಾರಿಕಾಂಬ ದೇವಿ ಜಾತ್ರೆ ವಿಜೃಂಭಣೆಯಿಂದ ನೆರವೇರುತ್ತಿದೆ. ಮಂಗಳವಾರ ಗಾಂಧಿ ಬಜಾರ್’ನ ತವರು ಮನೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇವತ್ತು ಕೋಟೆ ಮಾರಿಕಾಂಬ ದೇವಸ್ಥಾನದ ಮಾರಿ ಗದ್ದುಗೆ ಮೇಲೆ ದೇವಿಯನ್ನು ಕೂರಿಸಲಾಗಿದೆ.

ಗಾಂಧಿ ಬಜಾರ್’ನಿಂದ ಮೆರವಣಿಗೆ

ಕಳೆದ ರಾತ್ರಿ ಉಪ್ಪಾರ ಸಮಾಜದವರು ಶ್ರೀ ಮಾರಿಕಾಂಬೆಯನ್ನು ಮೆರವಣಿಗೆ ಮೂಲಕ ಮಾರಿ ಗದ್ದುಗೆವರೆಗೂ ಕರೆತಂದರು. ಈ ವೇಳೆ ಮಂಗಳ ವಾದ್ಯಗಳೊಂದಿಗೆ ಎದುರಾದ ಗಂಗಾ ಮತಸ್ಥ ಸಮಾಜದವರು ದೇವಿಗೆ ಪೂಜೆ ಸಲ್ಲಿಸಿದರು.

ದರ್ಶನಕ್ಕೆ ಜನವೋ ಜನ

ಮಾರಿ ಗದ್ದುಗೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ದೊಡ್ಡ ಸಂಖ್ಯೆಯ ಭಕ್ತರು ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಹರಿದು ಬರುತ್ತಿದ್ದಾರೆ. ಗದ್ದುಗೆ ಮೇಲಿರುವ ದೇವಿಯನ್ನು ಕಣ್ತುಂಬಿಕೊಂಡು, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಹರಕೆ ಕೋಳಿ ತೂರಿದ ಭಕ್ತರು

ಗದ್ದುಗೆ ಮೇಲಿರುವ ದೇವಿಯತ್ತ ಭಕ್ತರು ಹೂವು, ಹಣ್ಣು, ಹರಕೆ ಕೋಳಿಯನ್ನು ತೂರುತ್ತಿದ್ದಾರೆ. ಮಡಿಲಕ್ಕಿಯನ್ನು ಅರ್ಪಿಸುತ್ತಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುಟುಂಬ ಸಹಿತ ದೇವಸ್ಥಾನಕ್ಕೆ ಆಗಮಿಸಿದ್ದರು. ಗದ್ದುಗೆ ಮೇಲಿರುವ ದೇವಿಯನ್ನು ಕಣ್ತುಂಬಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಮಹಾನಗರ ಪಾಲಿಕೆ ಕಾರ್ಪೊರೇಟಟರ್’ಗಳು, ಜನಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು.

Marikamba Jathre in Shimoga

ಇದನ್ನೂ ಓದಿ |  VIRAL PHOTO | ಕೋಟೆ ಮಾರಿಕಾಂಬ ದೇವಿ ಮಡಿಲಲ್ಲಿ ಪುನೀತ್ ರಾಜಕುಮಾರ್ ಫೋಟೊ

ಇದನ್ನೂ ಓದಿ |  ಕೋಟೆ ಮಾರಿಕಾಂಬ, ವಿದ್ಯಾನಗರದ ಜಾತ್ರೆ, ಶಿವಮೊಗ್ಗ ಸಿಟಿ ಜಗಮಗ

KB prasanna kumar

ಇದನ್ನೂ ಓದಿ |  ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

JNNCE College JNU

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment