ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕೋಟೆ ಮಾರಿಕಾಂಬ ದೇವಿ ಜಾತ್ರೆ ಹಿನ್ನಲೆ ಇದೇ ಮೊದಲ ಬಾರಿ ಗಾಂಧಿ ಬಜಾರ್‌ನಲ್ಲಿ ಬೃಹತ್ ಮಹಾದ್ವಾರ ನಿರ್ಮಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮಾದರಿಯ ಮಹಾದ್ವಾರ ಸ್ಥಾಪಿಸಲಾಗಿದೆ. ಮಹಿಷಾಸುರ ಮರ್ದಿನಿ ಕಾನ್ಸೆಪ್ಟ್‌ನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಉದ್ಘಾಟನೆಯಾಯ್ತು ಮಹಾದ್ವಾರ?
ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನನ್ನು ವಧಿಸಿದ್ದಳು. ಇದೇ ಕಾನ್ಸೆಪ್ಟ್ ಅನ್ನು ಗಾಂಧಿ ಬಜಾರ್ ಪ್ರವೇಶದಲ್ಲಿ ಮುಖ್ಯ ದ್ವಾರವಾಗಿ ನಿರ್ಮಿಸಲಾಗಿದೆ. ಭಾನುವಾರ ಸಂಜೆ ಮಹಾದ್ವಾರವನ್ನು ಉದ್ಘಾಟಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಕಲಾವಿದ ಜೀವನ್ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.
ಫೋಟೊ, ವಿಡಿಯೋ, ಸೆಲ್ಫಿ
ಮಹಾದ್ವಾರ ಉದ್ಘಾಟನೆಯಾಗುತ್ತಿದ್ದಂತೆ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು. ಮಹಾದ್ವಾರವನ್ನು ಕಣ್ತುಂಬಿಕೊಂಡರು. ಫೋಟೊ, ವಿಡಿಯೋ ತೆಗೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಖುಷಿ ಪಟ್ಟರು. ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೊಲೀಸರು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಗಾಂಧಿ ಬಜಾರ್ ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ ಹಾಕಿದ್ದರು.
ಮಹಾದ್ವಾರ ಕುರಿತು 3 ವಿಶೇಷತೆಗಳು ಇಲ್ಲಿವೆ
ಮಹಿಷಾಸುರ ಮರ್ದಿನಿ ಕಾನ್ಸೆಪ್ಟ್‌ನ ಮಹಾದ್ವಾರವನ್ನು ನಿರ್ಮಿಸಲು 45 ದಿನ ಸಮಯ ಹಿಡಿದಿದೆ. ಮೂರ್ತಿಗಳು 22 ಅಡಿ ಅಗಲ, 26 ಅಡಿ ಎತ್ತರವಿದೆ. ದುರ್ಗಾದೇವಿ, ಹುಲಿ ಮತ್ತು ರಾಕ್ಷಸನ ಕಲಾಕೃತಿಗಳಿವೆ. ಇದೇ ಮೊದಲ ಬಾರಿ ಎಲ್ಲ ಕಲಾಕೃತಿಗಳು ಆಕ್ಷನ್ ಮಾಡುತ್ತಿವೆ. ದುರ್ಗಾದೇವಿಯ ಎರಡು ಕೈಗಳು ಮತ್ತು ತ್ರಿಶೂಲ ಆಕ್ಷನ್ ಮಾಡುತ್ತಿವೆ. ರಾಕ್ಷಸನ ಕೈ ಮತ್ತು ತಲೆ, ಹುಲಿಯ ಕಾಲುಗಳು ಮತ್ತು ತಲೆ ಆಕ್ಷನ್ ಮಾಡುತ್ತವೆ. ಇನ್ನು, ಈ ಆಕ್ಷನ್‌ಗೆ ತಕ್ಕ ಹಾಗೆ ಈ ಬಾರಿ ಆಡಿಯೋ ಮಿಕ್ಸ್ ಕೂಡ ಇದೆ.
ಇದನ್ನೂ ಓದಿ – ಕೋಟೆ ಮಾರಿಕಾಂಬ ಜಾತ್ರೆ, ಯಾವ್ಯಾವ ದಿನ ಏನೇನು ಪೂಜೆ, ಕಾರ್ಯಕ್ರಮ ನಡೆಯಲಿದೆ? ಇಲ್ಲಿದೆ ಪಟ್ಟಿ
ಕಲಾಕೃತಿಯಲ್ಲಿ ಸಹಜತೆಗೆ ಹೆಚ್ಚು ಒತ್ತು ನೀಡಲಾಗಿದೆ. ದುರ್ಗಾದೇವಿಯ ತಲೆಗೂದಲನ್ನು ಕಲ್ಕತ್ತದಿಂದ ತರಿಸಲಾಗಿದೆ. ಇದು ಸಹಜ ಕೂದಲಿನಂತಿದೆ. ಇನ್ನು ಹುಲಿಗಾಗಿ ಮುಂಬೈನಿಂದ ಫರ್ ತರಿಸಲಾಗಿದೆ. ಅದರ ಮೇಲೆ ರೇಖೆಗಳನ್ನು ಪೇಂಟ್ ಮಾಡಲಾಗಿದೆ. 25 ಕಾರ್ಮಿಕರು ಹಗಲು – ರಾತ್ರಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಮಾರಿಕಾಂಬ ಜಾತ್ರೆ, ಇದೇ ಮೊದಲು ದೇಗುಲದಲ್ಲಿ ಅತ್ಯಂತ ವಿಭಿನ್ನ ಅಲಂಕಾರ, ಐಡಿಯಾ ಯಾರದ್ದು ಗೊತ್ತಾ?
ಓತಿಘಟ್ಟದ ಜೀವನ್ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್ ನೇತೃತ್ವದಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮಹಾದ್ವಾರವನ್ನು ಕಲಾವಿದ ಜೀವನ್ ಅವರೆ ನಿರ್ಮಿಸುತ್ತಿದ್ದಾರೆ. ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ವಿಭಾಗದಲ್ಲಿ ಜೀವನ್ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ, ಹೊರ ರಾಜ್ಯದಲ್ಲಿ ವಿವಿಧ ಕಲಾಕೃತಿಗಳನ್ನು ಜೀವನ್ ನಿರ್ಮಿಸಿದ್ದರೆ.