‘ಮುಂದೆ ಆ ರೈತರ ಮಕ್ಕಳು ಬಂದೂಕು ಹಿಡಿದರೆ ಆರಗ ಜ್ಞಾನೇಂದ್ರ ಅವರೇ ಕಾರಣರಾಗುತ್ತಾರೆ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shimoga Nanjappa Hospital

 SHIVAMOGGA LIVE NEWS 

SHIMOGA | ನಕ್ಸಲರು (NAXAL) ಬಂದೂಕು ಹಿಡಿದು ಓಡಾಡಿದ ಜಾಗದಲ್ಲಿಯೆ ಈಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಅವರ ಮಕ್ಕಳು ಬಂದೂಕು ಹಿಡಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೆ ಕಾರಣರಾಗುತ್ತಾರೆ ಎಂದು ವಕೀಲ ಕೆ.ಪಿ.ಶ್ರೀಪಾಲ್ ಎಚ್ಚರಿಸಿದರು.

Shimoga Nanjappa Hospital

ಭೂತಾನ್ ಅಡಕೆ ಆಮದು, ಎಲೆ ಚುಕ್ಕಿ ರೋಗದ ಕುರಿತು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಕೀಲ ಕೆ.ಪಿ.ಶ್ರೀಪಾಲ್ ಅವರು, ರೈತರ ಕಡಗಣನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಂದೂಕು ಹಿಡಿಯಬಹುದು’ (NAXAL)

ಹಿಂದೆ ಯಾವೆಲ್ಲ ಭಾಗದಲ್ಲಿ ನಕ್ಸಲರು (NAXAL) ಬಂದೂಕು ಹಿಡಿದು ಓಡಾಡುತ್ತಿದ್ದರೋ, ಆ ಭಾಗದಲ್ಲಿ ಈಗ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಮುಂದೆ ಅವರ ಮಕ್ಕಳು ಬಂದೂಕು ಹಿಡಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಆ ಭಾಗದ ಜನಪ್ರತಿನಿಧಿಗಳೆ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಕ್ಲಿಕ್ ಮಾಡಿ ಇದನ್ನೂ ಓದಿ ಭೂತಾನ್ ಅಡಕೆ ಭೀತಿ, ಎಲೆ ಚುಕ್ಕಿ ರೋಗದಿಂದ ಫಜೀತಿ, ಶಿವಮೊಗ್ಗದಲ್ಲಿ ಬೀದಿಗಿಳಿದ ಬೆಳೆಗಾರರು

ಹೋರಾಟಕ್ಕೆ ಬರದಿರಲು ಜ್ವರದ ಕಾರಣ (NAXAL) 

ಭೂತಾನ್ ಅಡಕೆ ಆಮದಿನಿಂದ ವರ್ತಕರಿಗೆ ಹೆಚ್ಚು ಹೊಡೆತ ಬೀಳಲಿದೆ. ಸಣ್ಣ ರೈತರಿಗೆ ವಂಚನೆ ಮಾಡಿ, ಅಡಕೆ ಖರೀದಿಸಿ ಈಗ ಎಸಿ ರೂಮಿನಲ್ಲಿ ಕುಳಿತಿದ್ದಾರೆ. ರೈತರೊಂದಿಗೆ ವರ್ತಕರು ಬೀದಿಗಿಳಿಯಬೇಕು. ಆದರೆ ಇವತ್ತಿನ ಹೋರಾಟಕ್ಕೆ ಆಹ್ವಾನಿಸಿದರೆ ಜ್ವರ ಎಂದು ಕಾರಣ ನೀಡುತ್ತಿದ್ದಾರೆ. ಬಿಜೆಪಿಯ ಭಯಕ್ಕೆ ಜ್ವರದ ನೆಪ ಹೇಳುತ್ತಿದ್ದಾರೆ ಎಂದು ಶ್ರೀಪಾಲ್ ಆಪಾದಿಸಿದರು.

ಲೂಟಿಕೋರರಿಗೆ ವೀಸಾ, ಪಾಸ್ ಪೋರ್ಟ್

ಸಾವಿರಾರು ಕೋಟಿ ರೂ. ಲೂಟಿ ಮಾಡಿದವರಿಗೆ ಮೋದಿ ಸರ್ಕಾರ ವೀಸಾ, ಪಾಸ್ ಪೋರ್ಟ್ ಮಾಡಿಸಿ ವಿದೇಶಕ್ಕೆ ಕಳುಹಿಸಿದೆ. ಈಗ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಮಲೆನಾಡು ಭಾಗದ ಸಂಸದರು, ಶಾಸಕರು, ಅಡಕೆ ಬೆಳೆಗಾರರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.

JNNCE College Admission

ಕ್ಲಿಕ್ ಮಾಡಿ ಇದನ್ನೂ ಓದಿ ಕೊಡಚಾದ್ರಿ ಕಾಲೇಜು ಬೀಗ ಮುರಿದ ಕಳ್ಳರು, ಫೈಲ್ ಗಳು ಚಲ್ಲಾಪಿಲ್ಲಿ, ಪ್ರಶ್ನೆ ಪತ್ರಿಕೆ ಸೇಫ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment