‘ನಂಬಿಕೆ ಇಲ್ಲ ಅಂದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ’

ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MAY 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಮುಖ್ಯಮಂತ್ರಿ ಮೇಲೂ ನಂಬಿಕೆ ಇಲ್ಲ. ಹೈಕಮಾಂಡ್ ಮೇಲೂ ನಂಬಿಕೆ ಇಲ್ಲ ಅನ್ನುವುದಾದರೆ ಸಿ.ಪಿ.ಯೋಗೇಶ್ವರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಯೋಗೇಶ್ವರ್ ಅವರು ಸ್ವತಃ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ಬಳಿಕ ಮತ್ತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಎಚ್ಚರಿಸಿದರು.

Shivamogga Live Promotion

ರಾಜ್ಯ ಬಿಜೆಪಿಯ ಎಲ್ಲಾ ಶಾಸಕರು ಕಲ್ಲು ಬಂಡೆಗಳಂತೆ ಒಗ್ಗಟ್ಟಾಗಿ ಇದ್ದೇವೆ. ಕೇಂದ್ರ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ ಎಂದರು.

ಇನ್ನು, ಸಿಎಂ ಬದಲಾವಣೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ಕಾಂಗ್ರೆಸ್‍ನವರಿಗೆ ಜನರು ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಮತ್ತೆ  ಯಾವಾಗ ಸಿಎಂ ಕುರ್ಚಿ ಮೇಲೆ ಕೂರುತ್ತೇವೆ ಎಂದು ಬಕಪಕ್ಷಿಗಳಂತೆ ಕಾದು ಕೂತಿದ್ದಾರೆ. ಕಾಂಗ್ರೆಸ್‍ನಿಂದ 17 ಶಾಸಕರು ಪಕ್ಷಕ್ಕೆ ಜಾಡಿಸಿ ಒದ್ದು ಹೊರಗೆ ಬಂದರು. ಅದಕ್ಕೆ ಸರ್ಕಾರ ಹೋಗಿದೆ. ನಮ್ಮಲ್ಲಿ ಒಬ್ಬರು ಇಬ್ಬರು ಮಾತನಾಡುತ್ತಿರುವುದು ನಿಜ. ಸಮಸ್ಯೆ ತಿಳಿಸುವುದಕ್ಕೆ ಅವರಿಗೆ ಅಧಿಕಾರಿವಿದೆ ಎಂದು ಹೇಳಿದರು.

ಸಚಿವ ಈಶ್ವರಪ್ಪ ಅವರು ಸಿಎಂ ಬದಲಾವಣೆ, ಸಚಿವ ಯೋಗೇಶ್ವರ್ ಕುರಿತು ಹೇಳಿದ್ದೆನು? ಇಲ್ಲಿದೆ ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment