ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಮೇ 2020
ಲಾಕ್ ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಅಂತರ ಜಿಲ್ಲಾ KSRTC ಬಸ್ ಸಂಚಾರ ಪುನಾರಂಭವಾಗಿದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬಸ್ಸುಗಳು ತೆರಳುತ್ತಿವೆ. ಇನ್ನು, ಬಸ್ ಹತ್ತುವ ಪ್ರಯಾಣಿಕರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲಿಗೆಲ್ಲ ಬಸ್ ಸಂಚಾರ ಶುರುವಾಯ್ತು?
ಬೆಂಗಳೂರು, ಹುಬ್ಬಳ್ಳಿ, ಹರಿಹರ, ಶೃಂಗೇರಿ, ಚಿಕ್ಕಮಗಳೂರು, ಚಿತ್ರದುರ್ಗಕ್ಕೆ ಶಿವಮೊಗ್ಗದಿಂದ ಬಸ್ ಸಂಚಾರ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಬಸ್ ಸಂಚಾರ ಶುರುವಾಗಿದೆ. ಬೆಂಗಳೂರಿನ ಕಡೆಗೆ ಹೆಚ್ಚು ಪ್ರಯಾಣಿಕರಿದ್ದಾರೆ. ಹಾಗಾಗಿ ಬೆಂಗಳೂರಿಗೆ ಹೆಚ್ಚಿನ ಬಸ್ಸುಗಳು ತೆರಳುತ್ತಿವೆ.
ಮುಂಚಿನಂತೆ ಎಲ್ಲೆಂದರಲ್ಲಿ ನಿಲ್ಲೋದಿಲ್ಲ ಬಸ್
ಮೊದಲಿನಿಂತೆ ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸುವುದಿಲ್ಲ. ಬೆಂಗಳೂರಿಗೆ ಹೊರಡುವ ಬಸ್ಸುಗಳು ಕಡೂರು, ಬೀರೂರು ಸೇರಿದಂತೆ ಬೇರೆಲ್ಲೂ ಸ್ಟಾಪ್ ಕೊಡುವುದಿಲ್ಲ. ನೇರವಾಗಿ ಬೆಂಗಳೂರಿಗೆ ತೆರಳಲಿವೆ. ಮತ್ತೊಂದೆಡೆ ದಾವಣಗೆರೆಗೆ ಬಸ್ಸುಗಳಿಲ್ಲ. ಹರಿಹರಕ್ಕೆ ಮಾತ್ರ ತೆರಳಲಿವೆ. ಊಟ, ತಿಂಡಿ, ಕಾಫಿಗೆ ಎಂದು ಸ್ಟಾಪ್ ಕೊಡುವುದಿಲ್ಲ.
12.30ರ ನಂತರ ಬೆಂಗಳೂರಿಗೆ ಬಸ್ ಇಲ್ಲ
ಶಿವಮೊಗ್ಗದಿಂದ ಬೆಂಗಳೂರಿಗೆ ಹೆಚ್ಚು ಬಸ್ಸುಗಳು ತೆರಳುತ್ತಿವೆ. ಆದರೆ ರಾಜ್ಯ ಸರ್ಕಾರ ಸಂಜೆ 7 ಗಂಟೆ ಬಳಿಕ ಯಾವುದೇ ಬಸ್ಸುಗಳು ಸಂಚಾರ ಮಾಡುವಂತಿಲ್ಲ ಎಂದು ಆದೇಶಿಸಿದೆ. ಈ ಹಿನ್ನೆಯಲ್ಲಿ ಬೆಂಗಳೂರಿನ ಕಡೆಗೆ ಮಧ್ಯಾಹ್ನ 12.30ಕ್ಕೆ ಕೊನೆಯ ಬಸ್ ಹೊರಡಲಿದೆ ಎಂದು KSRTC ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್ ತಿಳಿಸಿದ್ದಾರೆ. ಈ ನಿಯಮದ ಕಾರಣ ಮೊದಲ ಹಂತದಲ್ಲಿ ನಿಗದಿತ ಮಾರ್ಗಗಳು ಹೊರತು ಬೇರೆ ಮಾರ್ಗಗಳಿಗೆ ಬಸ್ ಪ್ರಯಾಣ ಆರಂಭಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಇಲ್ಲವಾದಲ್ಲಿ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವುದಿಲ್ಲ.
ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲಬೇಕು.
ಬಸ್ ಹತ್ತುವ ಮೊದಲು ಥರ್ಮಲ್ ಟೆಸ್ಟ್ ನಡೆಸಲಾಗುತ್ತದೆ. ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುತ್ತದೆ. ಅಲ್ಲದೆ ಪ್ರಯಾಣಿಕರ ವಿಳಾಸ, ಫೋನ್ ನಂಬರ್ ಸೇರಿದಂತೆ ಅಗತ್ಯ ಮಾಹಿತಿ ಪಡೆದುಕೊಳ್ಳಲಾಗುತ್ತದೆ.
ಬಸ್ಸಿನಲ್ಲಿ ಮೂವರು ಕೂರುವ ಸೀಟ್ನಲ್ಲಿ ಇಬ್ಬರು, ಇಬ್ಬರು ಕೂರುವ ಸೀಟ್ನಲ್ಲಿ ಒಬ್ಬರು ಮಾತ್ರ ಕುಳಿತು ಪ್ರಯಾಣಿಸಬೇಕಿದೆ. ಹಾಗಾಗಿ ಪ್ರತಿ ಬಸ್ಗೆ ಕೇವಲ 30 ಪ್ರಯಾಣಿಕರನ್ನಷ್ಟೇ ಹತ್ತಿಸಲಾಗುತ್ತಿದೆ.
ಮಾಸ್ಕ್, ಗ್ಲೌಸ್ ತೊಟ್ಟ ಡ್ರೈವರ್, ಕಂಡಕ್ಟರ್
KSRTC ಬಸ್ ಡ್ರೈವರ್ ಮತ್ತು ಕಂಡಕ್ಟರ್ಗಳು ಮಾಸ್ಕ್, ಗ್ಲೌಸ್ಗಳನ್ನು ತೊಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಚಾಲಕ, ಕಂಡಕ್ಟರ್ಗಳೆಲ್ಲ ಮಾಸ್ಕ್, ಗ್ಲೌಸ್ ತೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲ ಹಂತದಲ್ಲಿ 50 ಬಸ್
ಮೊದಲ ದಿನ ಅಂತರ ಜಿಲ್ಲ ಬಸ್ ಸಂಚಾರಕ್ಕೆ 50 ಬಸ್ಸುಗಳನ್ನು ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಬಸ್ಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿಗೆ ಹೆಚ್ಚಿನ ಬಸ್ಸುಗಳು ತೆರಳುತ್ತಿವೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]