ಮೋದಿ ಕಾರ್ಯಕ್ರಮಕ್ಕೆ ಬರಲ್ಲ ಅಂದುಕೊಂಡವರು ಬಂದರು, ಬರುತ್ತಾರೆ ಅಂದುಕೊಂಡವರು ಬರಲೇ ಇಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 MARCH 2024

SHIMOGA : ವಿಧಾನಸಭೆ ಚುನಾವಣೆ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಅವರು ಇವತ್ತು ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗವಹಿಸಿದ್ದರು. ಆದರೆ ಬಿಜೆಪಿ ಕಟ್ಟಾಳು ಎಂದು ಗುರುತಿಸಿಕೊಂಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮಕ್ಕೆ ಗೈರಾಗಿದ್ದು ಎಲ್ಲರ ಗಮನ ಸೆಳೆಯಿತು.

ಹತ್ತು ತಿಂಗಳ ಬಳಿಕ ಕುಮಾರ್‌ ಪ್ರತ್ಯಕ್ಷ

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ, ಪಕ್ಷ ಮತ್ತು ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರು. ಅವರು ಕಾಂಗ್ರೆಸ್‌ ಸೇರ್ಪಡೆಯಾಗಬಹುದು. ಶಿವಮೊಗ್ಗದಿಂದ ಚುನಾವಣೆಗೆ ಸ್ಪರ್ಧಿಸಬಹುದು. ಬಿಜೆಪಿಯಿಂದ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಬಹುದು ಎಂದೆಲ್ಲ ಅಂತೆ ಕಂತೆ ಮಾಹಿತಿ ಹರಿದಾಡಿತ್ತು.

ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಕುಮಾರ್‌ ಬಂಗಾರಪ್ಪ ಹಾಜರಾಗುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಖುದ್ದು ಕಾರು ಚಾಲನೆ ಮಾಡಿಕೊಂಡು ಬಂದ ಕುಮಾರ್‌ ಬಂಗಾರಪ್ಪ, ವೇದಿಕೆಗೆ ತಲುಪಿದರು. ಕುಮಾರ್‌ ಬಂಗಾರಪ್ಪ ಅವರನ್ನು ಕಂಡು ಕಾರ್ಯಕರ್ತರು ಉತ್ಸಾಹದಿಂದ ಘೋಷಣೆ ಕೂಗಿದರು.

ಬಿಜೆಪಿಯ ಕಟ್ಟಾಳು ಚೇರ್‌ ಖಾಲಿ ಉಳಿದಿತ್ತು

ಇನ್ನು, ಬಿಜೆಪಿ ಕಟ್ಟಾಳು ಕೆ.ಎಸ್.ಈಶ್ವರಪ್ಪ ಅವರು ಸಮಾವೇಶಕ್ಕೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. ಈಶ್ವರಪ್ಪ ಸ್ವತಂತ್ರವಾಗಿ ಲೋಕಸಭೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಭಾನುವಾರ ಸಾಲು ಸಾಲು ಮುಖಂಡರು ಅವರ ಮನವೊಲಿಸಿ, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈಶ್ವರಪ್ಪ ಅವರು ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆ ಇತ್ತು. ಹಾಗಾಗಿ ಅವರಿಗೆ ಆಸನ ಮೀಸಲಿಡಲಾಗಿತ್ತು. ಆದರೆ ಈಶ್ವರಪ್ಪ ಗೈರಾಗಿದ್ದರಿಂದ ಅವರಿಗೆ ಮೀಸಲಾಗಿದ್ದ ಕುರ್ಚಿ ಖಾಲಿ ಉಳಿದಿತ್ತು. ಇನ್ನು, ಅಲ್ಲಮಪ್ರಭು ಮೈದಾನದ ಆವರಣದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳಲ್ಲಿ ಈಶ್ವರಪ್ಪ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ನೋಡಲು ಜನವೋ ಜನ, ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 18, 2024

BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

Leave a Comment