ಶಿವಮೊಗ್ಗದಲ್ಲಿ 2 ದಿನ ಲೇಬರ್‌ ಲೈಸೆನ್ಸ್‌ ಮೇಳ| ಗಾಂಧಿ ಪಾರ್ಕ್‌ ಬೋರ್ಡ್‌ನಲ್ಲಿ ಅಕ್ಷರಗಳು ಮಾಯ – ಫಟಾಫಟ್‌ ನ್ಯೂಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 DECEMBER 2023

FATAFAT-NEWS-1ಕಳಚಿ ಬಿದ್ದ ಅಕ್ಷರಗಳು

SHIMOGA : ಗಾಂಧಿ ಪಾರ್ಕ್‌ನ ಹೊಸ ಬೋರ್ಡ್‌ ಹಾನಿಗೀಡಾಗಿದೆ. ಮಹಾತ್ಮ ಗಾಂಧೀಜಿ ಉದ್ಯಾನವನ ಎಂದು ಮಹಾನಗರ ಪಾಲಿಕೆ ವತಿಯಿಂದ ಬೋರ್ಡ್‌ ಹಾಕಲಾಗಿತ್ತು. ಗಾಂಧೀಜಿಯ ಹೆಸರಿನಲ್ಲಿದ್ದ ಅಕ್ಷರಗಳು ಕಳಚಿ ಬಿದ್ದಿವೆ. ಕಸ್ತೂರ ಬಾ ಪದವಿ ಪೂರ್ವ ಕಾಲೇಜು ಮುಂಭಾಗ ಇರುವ ಗೇಟ್‌ನ ಬೋರ್ಡ್‌ನಲ್ಲಿ ಅಕ್ಷರಗಳು ಕಳಚಿ ಬಿದ್ದಿವೆ. ಇದನ್ನು ಕೂಡಲೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

gandhi park

ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಕ್ತಿ ಪೂಜೆ, ಹೊಸಮನೆಯಲ್ಲಿ ಗಮನ ಸೆಳೆಯುತ್ತಿದೆ ಶಬರಿಮಲೆ ದೇಗುಲ ಮಾದರಿ

ಲೇಬರ್‌ ಲೈಸೆನ್ಸ್‌ ಮೇಳ

FATAFAT-NEWS-2SHIMOGA : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್‌ ಸಭಾಂಗಣದಲ್ಲಿ ಲೇಬರ್‌ ಲೈಸೆನ್ಸ್‌ ಮೇಳ ಆಯೋಜಿಸಲಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ನೋಂದಣಿ ಕಡ್ಡಾಯವಾಗಿದೆ. ಈ ಹಿನ್ನೆಲೆ ಡಿ.4 ಮತ್ತು 5ರಂದು ಮೇಳ ಆಯೋಜಿಸಲಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಅಗತ್ಯ ದಾಖಲೆ ಸಹಿತ ಪೂರ್ಣ ವಿವರ ಸಲ್ಲಿಸಿ ಫೀಸ್‌ ಪಾವತಿಸಬೇಕು. ತಮ್ಮ ಮೊಬೈಲ್‌ ಸಹಿತ ಮೇಳದಲ್ಲಿ ಭಾಗವಹಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಎನ್.ಗೋಪಿನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 4, 2023

Leave a Comment