ಶಿವಮೊಗ್ಗ LIVE
ಶಿವಮೊಗ್ಗ: ವೈದ್ಯರ ನಿರ್ಲಕ್ಷ್ಯಕ್ಕೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ (Mc Gann Hospital)ಹೆರಿಗೆ ವಿಭಾಗದಲ್ಲಿ ಬಾಣಂತಿಯೊಬ್ಬರು (Mother) ಮೃತಪಟ್ಟಿದ್ದಾರೆ. ಶಿವಮೊಗ್ಗ ನಗರದ ಇಮಾಂಬಾಡ ಬಡಾವಣೆಯ ನಿವಾಸಿ ನಯಾಜ್ ಅವರ ಪತ್ನಿ ನೂರ್ ಅಫ್ಸಾ (25) ಮೃತ ಬಾಣಂತಿ.
ಆಪರೇಷನ್ ಬಳಿಕ ಹೊಟ್ಟೆನೋವು
ನೂರ್ ಅಫ್ಸಾ ಅವರು ನವೆಂಬರ್ 20ರಂದು ಹೆರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ನ.21 ರಂದು ಸಿಸೇರಿಯನ್ ಮೂಲಕ ಗಂಡು ಮಗು ಜನ್ಮ ನೀಡಿದ್ದರು. ಆದರೆ ಆಪರೇಷನ್ ಮರುದಿನದಿಂದ ನೂರ್ ಅಫ್ಸಾ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಈ ಕುರಿತು ವೈದ್ಯರಿಗೆ (Doctors) ಮಾಹಿತಿ ನೀಡಿದರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಭದ್ರಾವತಿ – ಶಿವಮೊಗ್ಗ ರಸ್ತೆಯಲ್ಲಿ ರಾತ್ರಿ ಕಾರು ಅಡ್ಡಗಟ್ಟಿ ದಾಳಿ, ಆಗಿದ್ದೇನು?
ಆಪರೇಷನ್ (Operation) ನಡೆದು ಎರಡು ದಿನದ ಬಳಿಕ ನೂರ್ ಅಫ್ಸಾ ಅವರಿಗೆ ಮಲ ವಿಸರ್ಜನೆ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಂಡಿತ್ತು. ರೋಗಿಯ ಸ್ಥಿತಿ ಗಂಭೀರವಾದ ಹಿನ್ನೆಲೆ ನ.28 ರಂದು ವೈದ್ಯರು ಮತ್ತೆ ಆಪರೇಷನ್ ನಡೆಸಿದರು. ಶಸ್ತ್ರಚಿಕಿತ್ಸೆ ಬಳಿಕ ನೂರ್ ಅಫ್ಸಾ ಅಸುನೀಗಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ತಮ್ಮ ಮಗಳ ಸಾವಿಗೆ ಕಾರಣ ಎಂದು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.ಮತ್ತೆ ಆಪರೇಷನ್, ಬಾಣಂತಿ ಸಾವು
ಕುಟುಂಬದವರ ಆಕ್ರಂದನ
ನೂರ್ ಅಫ್ಸಾ ಅವರು 3 ವರ್ಷದ ಹೆಣ್ಣು ಮಗು, ಕೇವಲ 8 ದಿನದ ಗಂಡು ಮಗುವನ್ನು ಬಿಟ್ಟು ಅಗಲಿದ್ದಾರೆ. ಆಸ್ಪತ್ರೆಯ ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಕುಟುಂಬದವರು ದೊಡ್ದಪೇಟೆ ಪೊಲೀಸ್ ಠಾಣೆಗೆ ದೂರು ನೀಡದ್ದಾರೆ.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






