ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ರಾತ್ರಿ ಲಾಠಿ ಚಾರ್ಜ್‌, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

SHIMOGA CITY: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಶಿವಮೊಗ್ಗದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲವು ಆರ್‌ಸಿಬಿ ಅಭಿಮಾನಿಗಳು ಲಾಠಿ ಏಟು ತಿಂದು ಮನೆಗೆ ಮರಳಿದ್ದಾರೆ.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಕಳೆದ ರಾತ್ರಿ ಸಂಭ್ರಮಾಚರಣೆ ವೇಳೆ ಲಘು ಲಾಠಿ ಪ್ರಹಾರ ನಡೆದಿದೆ.

Lathi-Charge-in-Shimoga-during-RCB-Winning-Celebration

ಎ.ಎ. ಸರ್ಕಲ್‌ನಲ್ಲಿ ಆಗಿದ್ದೇನು?

ಐಪಿಎಲ್‌ ಫೈನಲ್‌ ಪಂದ್ಯಾವಳಿ ಹಿನ್ನೆಲೆ ಎ.ಎ. ಸರ್ಕಲ್‌ನಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಯುವಕರು ಎ.ಎ.ಸರ್ಕಲ್‌ನಲ್ಲಿ ಬೈಕ್‌ ಜಾಥಾ ನಡೆಸಿದರು. ಕೆಲವರು ಪಟಾಕಿ ಸಿಡಿಸಿದರು. ಇದೇ ವೇಳೆ ಕೆಲವು ಯುವಕರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ತಡೆದು ಸಂಭ್ರಮಾಚರಣೆಗೆ ಮುಂದಾದರು.

ಪೊಲೀಸ್‌ ಎಚ್ಚರಿಕೆ ಮೀರಿ ರಸ್ತೆ ತಡೆ

ಬಿ.ಹೆಚ್‌.ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ವಾಹನಗಳನ್ನು ತಡೆಯದಂತೆ ಪೊಲೀಸರು ಎಚ್ಚರಿಸಿದರು. ಆದರೆ ಕೆಲವು ಯುವಕರು ಇದನ್ನು ಮೀರಿ ರಸ್ತೆ ತಡೆದು ಕುಣಿಯಲು ಆರಂಭಿಸಿದರು. ಈ ವೇಳೆ ಪೊಲೀಸರು ಯುವಕರನ್ನು ರಸ್ತೆಯಿಂದ ಸೈಡಿಗೆ ಸರಿಸಲು ಯತ್ನಿಸಿದರು. ಆಗ ನೂಕಟ ತಳ್ಳಾಟವಾಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದರು.

ಕಳೆದ ಪಂದ್ಯಾವಳಿ ವೇಳೆಯು ಲಾಠಿ ಏಟು

ಕಳೆದ ಐಪಿಎಲ್‌ ಪಂದ್ಯಾವಳಿಯ ಸಂಭ್ರಮಾಚರಣೆ ವೇಳೆಯು ಶಿವಮೊಗ್ಗಲ್ಲಿ ಲಾಠಿ ಚಾರ್ಜ್‌ ಆಗಿತ್ತು. ಗೋಪಿ ಸರ್ಕಲ್‌ನಲ್ಲಿ ಯುವಕರನ್ನು ಚದುರಿಸಲು ಲಾಠಿ ಚಾರ್ಜ್‌ ನಡೆಸಲಾಗಿತ್ತು. ಈ ಬಾರಿಯು ಕೆಲವು ಯುಕವರ ಅತಿರೇಖರದ ವರ್ತನೆ ಹಿನ್ನೆಲೆ ಹಲವರಿಗೆ ಲಾಠಿ ಏಟು ಬೀಳುವಂತಾಯಿತು.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!