ಜನಶತಾಬ್ದಿ ರೈಲಿನಲ್ಲಿ ಬ್ಯಾಗ್‌ ಪತ್ತೆ, ಒಳಗಿತ್ತು ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌, ಕಾಸ್ಮೆಟಿಕ್ಸ್‌, ನಗದು

ಶಿವಮೊಗ್ಗ: ಜನಶತಾಬ್ಬಿ (Jan Shatabdi) ರೈಲಿನಲ್ಲಿ ಮಂಗಳವಾರ ರಾತ್ರಿ ಪ್ರಯಾಣ ಮಾಡಿದ ಯುವತಿಯೊಬ್ಬರು ಬೋಗಿಯಲ್ಲೇ ಬಿಟ್ಟು ಹೋಗಿದ್ದ 1.24 ಲಕ್ಷ ರೂ. ಮೌಲ್ಯದ ಉತ್ಪನ್ನಗಳ ಬ್ಯಾಗನ್ನು ರೈಲ್ವೆ ಪೊಲೀಸರು ಸುರಕ್ಷಿತವಾಗಿ ವಾಪಸ್ ಮಾಡಿದ್ದಾರೆ.

ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದ ಯುವತಿಯು ಬೋಗಿಯಲ್ಲೇ ಬ್ಯಾಗ್ ಮರೆತು ಹೋಗಿದ್ದರು. ಪ್ರಯಾಣಿಕರು ಇಳಿದು ಹೋದ ಬಳಿಕ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಬೋಗಿಗಳನ್ನು ಪರಿಶೀಲಿಸುವ ಸಮಯದಲ್ಲಿ ಬ್ಯಾಗ್‌ ಪತ್ತೆಯಾಗಿತ್ತು.

ಬ್ಯಾಗ್‌ನಲ್ಲಿ ₹1.12 ಲಕ್ಷದ ಆಪಲ್ ಲ್ಯಾಪ್ಟಾಪ್, ₹10,000 ಮೌಲ್ಯದ ಕಾಸ್ಮೆಟಿಕ್ಸ್, ₹2,000 ನಗದು ಸೇರಿದಂತೆ ಒಟ್ಟು 1.24 ರೂ. ಮೌಲ್ಯದ ವಸ್ತುಗಳಿದ್ದವು. ಬ್ಯಾಗ್ ಪರಿಶೀಲನೆ ನಡೆಸಿ ಅದರ ವಾರಸುದಾರರನ್ನು ಪತ್ತೆ ಮಾಡಿ ಠಾಣೆಗೆ ಕರೆಸಿ ವಾಪಸ್ ನೀಡಿದ್ದಾರೆ.

270925-Left-over-bag-on-Jan-Shatabdi-train-handed-over-to-the-girl.webp

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಸ್‌ ಹತ್ತಿದ ಕೆಲವೇ ಕ್ಷಣದಲ್ಲಿ ಚನ್ನಗಿರಿಯ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

JNNCE-Admission-Advt-scaled

left over bag on Jan Shatabdi train

270925-Left-over-bag-on-Jan-Shatabdi-train-handed-over-to-the-girl.webp

Leave a Comment