ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್‌, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

ಶಿವಮೊಗ್ಗ: ಅನಾರೋಗ್ಯಕ್ಕೀಡಾದ ಗಂಡು ಚಿರತೆಗೆ (leopard) ಕಳೆದ ರಾತ್ರಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಲಾಗಿದೆ. ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್‌ನ ಅಗತ್ಯವಿದ್ದರಿಂದ ಚಿರತೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು.

ವಯೋಸಹಜ ಆರೋಗ್ಯ ಸಮಸ್ಯೆ

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ 15 ವರ್ಷದ ಗಂಡು ಚಿರತೆ ಭದ್ರಾಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಕಳೆದ ಎರಡು ದಿನದಿಂದ ಚಿರತೆ ನಿತ್ರಾಣಗೊಂಡಿದೆ. ಚಿಕಿತ್ಸೆ ನಡೆಸುತ್ತಿದ್ದ ಮೃಗಾಲಯದ ಡಾಕ್ಟರ್‌ ತುರ್ತಾಗಿ ಸ್ಕ್ಯಾನಿಂಗ್‌ ಅಗತ್ಯವಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಮೃಗಾಲಯದ ಸಿಬ್ಬಂದಿ ಚಿರತೆಯನ್ನು ನಂಜಪ್ಪ ಆಸ್ಪತ್ರೆಗೆ ಕರೆತಂದಿದ್ದರು.

MRI-Scanning-For-Leopard-in-Shimoga-Nanjappa-Hospital

ನಂಜಪ್ಪ ಆಸ್ಪತ್ರೆಯೇ ಏಕೆ?

ಶಿವಮೊಗ್ಗದ ಮೃಗಾಲಯದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ವ್ಯವಸ್ಥೆ ಇಲ್ಲ. ಇತ್ತ ಪಶುವೈದ್ಯಕೀಯ ಕಾಲೇಜಿನಲ್ಲಿಯು ಈ ಸೌಲಭ್ಯವಿಲ್ಲ. ಆದ್ದರಿಂದ ನಂಜಪ್ಪ ಆಸ್ಪತ್ರೆಯಲ್ಲಿಯೇ ಎಂಆರ್‌ಐ ಸ್ಕ್ಯಾನಿಂಗ್‌ ಮಾಡಲು ನಿರ್ಧರಿಸಲಾಯಿತು. ಬೆಳಗಿನ ಹೊತ್ತು ಆಸ್ಪತ್ರೆಯಲ್ಲಿ ಜನ ಸಂದಣಿ ಹೆಚ್ಚಿರುವ ಹಿನ್ನೆಲೆ ಚಿರತೆಗೆ ನಡುರಾತ್ರಿ ಸ್ಕ್ಯಾನಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ನಂಜಪ್ಪ ಆಸ್ಪತ್ರೆಯ ಸ್ಕ್ಯಾನಿಂಗ್‌ಗೆ ವಿಶೇಷ ಮಾನ್ಯತೆಯು ಇದೆ.

MRI-Scanning-For-Leopard-in-Shimoga-Nanjappa-Hospital

ಹೇಗಿತ್ತು ಸ್ಕ್ಯಾನಿಂಗ್‌ ಪ್ರಕ್ರಿಯೆ?

ಚಿರತೆಗೆ ಮಂಪರು ಇಂಜೆಕ್ಷನ್‌ ನೀಡಿ ಮೃಗಾಲಯದ ವಾಹನದಲ್ಲಿಯೇ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿತ್ತು. ಸ್ಕ್ಯಾನಿಂಗ್‌ ಪ್ರಕ್ರಿಯೆ ಆರಂಭವಾಗುವ ಹೊತ್ತಿಗೆ ಪುನಃ ಮಂಪರು ಇಂಜೆಕ್ಷನ್‌ ನೀಡಲಾಯಿತು. ಸುಮಾರು ಅರ್ಧ ಗಂಟೆ ಸ್ಕ್ಯಾನಿಂಗ್‌ ಪ್ರಕ್ರಿಯೆ ನಡೆಯಿತು.

MRI-Scanning-For-Leopard-in-Shimoga-Nanjappa-Hospital

ಈ ಸಂಬಂಧ ಶಿವಮೊಗ್ಗ ಲೈವ್‌.ಕಾಂ ಜೊತೆಗೆ ಮಾತನಾಡಿದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ, “ಕಾಡಿನಲ್ಲಿ ಚಿರತೆಗಳು ಸಮಾನ್ಯವಾಗಿ 10 ವರ್ಷ ಬದುಕುತ್ತವೆ. ಇಲ್ಲಿನ ಮೃಗಾಲಯದಲ್ಲಿ 15 ವರ್ಷ ಬದುಕಿದೆ. ಕಳೆದ ಎರಡು ದಿನದಿಂದ ಅನಾರೋಗ್ಯ ಉಂಟಾಗಿದೆ. ಸ್ಕ್ಯಾನಿಂಗ್‌ನ ಅಗತ್ಯವಿದ್ದರಿಂದ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಸ್ಕ್ಯಾನಿಂಗ್‌ ಪ್ರಕ್ರಿಯೆ ಒಂದೇ ರೀತಿಯದ್ದು. ಆದ್ದರಿಂದ ಇಲ್ಲಿಗೆ ಕರೆತಂದಿದ್ದೇನೆ. ಮೃಗಾಲಯದಲ್ಲಿ ಮುಂದಿನ ಚಿಕಿತ್ಸೆ ಮುಂದುವರೆಯಲಿದೆ” ಎಂದು ತಿಳಿಸಿದರು.

ಇಲ್ಲಿದೆ ಸ್ಕ್ಯಾನಿಂಗ್‌ ವಿಡಿಯೋ

Shivamogga Live reached 2.8 million views in January-2026 - Editor : Nitin Kaidotlu

ಇದನ್ನೂ ಓದಿ – ಶಿವಮೊಗ್ಗ ಬೈಪಾಸ್‌ನಲ್ಲಿ ಧಗಧಗ ಉರಿದ ಮಳಿಗೆ, ವಸ್ತುಗಳು ಸ್ಪೋಟ, ಏನೇನಾಯ್ತು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 7, 2026

Leave a Comment