ಶಿವಮೊಗ್ಗ: ಪವಿತ್ರ ಕ್ಷೇತ್ರ ಕೂಡ್ಲಿ ಬಳಿ ತುಂಗಾ ಭದ್ರಾ ನದಿಯಲ್ಲಿ ಮರಳುಗಾರಿಕೆ (Sand Mining) ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕರೆದಿರುವ ಟೆಂಡರ್ ಅನ್ನು ತಕ್ಷಣ ಕೈಬಿಡಬೇಕು ಎಂದು ಬಿಜೆಪಿ ಮುಖಂಡ ಗಿರೀಶ್ ಭದ್ರಾಪುರ ಆಗ್ರಹಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡ್ಲಿ ಕ್ಷೇತ್ರ ಹಾಗೂ ಭಕ್ತಾದಿಗಳ ಹಿತಕ್ಕಾಗಿ ಈ ಭಾಗದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ನಿರಂತರವಾಗಿ ಆಕ್ಷೇಪಿಸುತ್ತಾ ಬರಲಾಗಿದೆ. ಗಣಿ ಇಲಾಖೆ ಅಧಿಕಾರಿಗಳು ಸ್ಥಳ ಪರೀಕ್ಷೆ ನಡೆಸಿ ಗಣಿಗಾರಿಕೆ ಅನುಮತಿ ನೀಡುವ ನಿಯಮ ಪಾಲಿಸುತ್ತಿಲ್ಲ. ಲಂಚದ ಆಸೆಗೆ ಅನುಮತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ಮರಳುಗಾರಿಕೆಗೆ ಅವಕಾಶ ನೀಡದಂತೆ ದೇವಸ್ಥಾನ ಸಮಿತಿ ಮತ್ತು ಸ್ಥಳೀಯರು ಹಲವು ಬಾರಿ ಭೂ ವಿಜ್ಞಾನ ಇಲಾಖೆಗೆ ಮನವಿ ನೀಡಿದ್ದಾರೆ. ಆದರೆ ಇಲಾಖೆ ಮನವಿಗೆ ಯಾವುದೆ ಸ್ಪಂದನೆ ನೀಡಿಲ್ಲ. 2018ರಲ್ಲಿ ಈ ಭಾಗದಲ್ಲಿ ಮರಳು ಗಣಿಗೆ ಟೆಂಡರ್ ಕರೆದಾಗ ಸಂಸದ ಬಿ.ವೈ.ರಾಘವೇಂದ್ರ, ಅಂದಿನ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಕೂಡ್ಲಿ ಗ್ರಾಮಸ್ಥರು ಹಾಗೂ ಭಕ್ತರು ಗಣಿಗಾರಿಕೆಗೆ ಅವಕಾಶ ನೀಡದಂತೆ ಮನವಿ ಮಾಡಿದ್ದರು. ಆಗ ಸುಮ್ಮನಾಗಿ ಈಗ ಮತ್ತೆ ಟೆಂಡರ್ ಕರೆದಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್, ಲಕ್ಷ್ಮಣ್, ರಾಮಕೃಷ್ಣ, ಕಾಂತರಾಜ್, ಹಾಲೇಶ್ ಮತ್ತಿತರರಿದ್ದರು.
ಇದನ್ನೂ ಓದಿ » ಪೂಜೆಗೆ ತೆರಳಿದ್ದ ದಂಪತಿಗೆ ಬೆಳ್ಳಂಬೆಳಗ್ಗೆ ಪಕ್ಕದ ಮನೆಯವರಿಂದ ಬಂತು ಫೋನ್, ವಾಪಸ್ ಬಂದಾಗ ಕಾದಿತ್ತು ಶಾಕ್

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200