ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 5 DECEMBER 2024
ಶಿವಮೊಗ್ಗ : ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮೆಗ್ಗಾನ್ ಆಸ್ಪತ್ರೆಗೆ (Hospital) ಭೇಟಿ ನೀಡಿ ವಿವಿಧೆಡೆ ಪರಿಶೀಲಿಸಿದರು. ಅಲ್ಲದೆ ಔಷಧಗಳ ಕುರಿತು ಮಾಹಿತಿ ಪಡೆದರು.
ಬಳ್ಳಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಸರ್ಕಾರದ ಆದೇಶದ ಮೇರೆಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮೆಗ್ಗಾನ್ ಆಸ್ಪತ್ರೆ ಔಷಧ ಉಪ ಉಗ್ರಾಣ, ಮುಖ್ಯ ಉಗ್ರಾಣ ಮತ್ತು ಡಿಎಚ್ಒ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಸರ್ಕಾರದ ಆದೇಶದ ಮೇರೆಗೆ ಮೆಗ್ಗಾನ್ ಆಸ್ಪತ್ರೆಯಲ್ಲೂ ರಿಂಗ್ಲಾಲ್ಯಾಕ್ವೆಡ್ ಫ್ಲಯ್ (ಗ್ಲುಕೋಸ್) ಬಳಸದೆ ತೆಗೆದಿಡಲಾಗಿದೆ. 1.10 ಲಕ್ಷ ರೂ. ಮೌಲ್ಯದ ಗ್ಲೂಕೋಸ್ ತರಿಸಿದ್ದು, ಅದರಲ್ಲಿ 48 ಸಾವಿರ ರೂ. ಮೌಲ್ಯದ ಗ್ಲೂಕೋಸ್ ಬಳಸದೆ ತೆಗೆದಿಡಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್ ಸುದ್ದಿ
ಪಶ್ಚಿಮ ಬಂಗಾಳದಿಂದ ಪೂರೈಕೆ ಆಗುವ ಮೆಡಿಸಿನ್ಗನ್ನೂ ಬಳಸದಂತೆ ಲೋಕಾಯಕ್ತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ತಪಾಸಣೆ ವೇಳೆ ಇನ್ಸ್ಪೆಕ್ಟರ್ ವೀರಬಸಪ್ಪ ಕುಸ್ಲಾಪುರ, ಮುಖ್ಯಪೇದೆ ಸುರೇಂದ್ರ, ಸಿಬ್ಬಂದಿ ಮಂಜುನಾಥ್, ಪ್ರಶಾಂತ್, ಪ್ರದೀಪ್, ಗಂಗಾಧರ್ ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422