SHIVAMOGGA LIVE CITY NEWS, 5 DECEMBER 2024
ಶಿವಮೊಗ್ಗ : ಇಡೀ ದಿನ ನಗರದಲ್ಲಿ ಏನೇನಾಯ್ತು. ಇಲ್ಲಿದೆ ಫಟಾಫಟ್ ನ್ಯೂಸ್ ಅಪ್‌ಡೇಟ್.
ಮೆಗ್ಗಾನ್ ಆಸ್ಪತ್ರೆಯಲ್ಲಿ ಲೋಕಾಯುಕ್ತ ಪರಿಶೀಲನೆ
ಮೆಗ್ಗಾನ್ ಆಸ್ಪತ್ರೆ : ಲೋಕಾಯುಕ್ತ ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಔಷಧ ಉಪ ಉಗ್ರಾಣ, ಮುಖ್ಯ ಉಗ್ರಾಣ ಮತ್ತು ಡಿಹೆಚ್‌ಒ ಕಚೇರಿಗೆ ಭೇಟಿ ನೀಡಿದ್ದರು. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಿಗೆ ಸರ್ಕಾರದ ಆದೇಶದ ಮೇರೆಗೆ ಈ ಪರಿಶೀಲನೆ ನಡೆಯಿತು.
ಇದನ್ನೂ ಓದಿ : ವಿಐಎಸ್‌ಎಲ್, ಭದ್ರಾವತಿಯಲ್ಲಿ ಬಿ.ವಿ.ಶ್ರೀನಿವಾಸ್‌ಗೆ ಮನವಿ
ಮೂರು ಶಾಖೆ ಆರಂಭ
ಡಿಸಿಸಿ ಬ್ಯಾಂಕ್ : ಇದೇ ತಿಂಗಳು ಜಿಲ್ಲೆಯಲ್ಲಿ ಮೂರು ಹೊಸ ಶಾಖೆಗಳನ್ನು ಆರಂಭಿಸಲಾಗುತ್ತಿದೆ. ಇನ್ನು, ಬೆಳೆ ವಿಮೆ ನೀತಿ ಅವೈಜ್ಞಾನಿಕವಾಗಿದ್ದು ಪರಿಷ್ಕರಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ : ಡಿಸಿಸಿ ಬ್ಯಾಂಕ್‌ನಿಂದ ಮೂರು ಹೊಸ ಶಾಖೆ, ಎಲ್ಲೆಲ್ಲಿ? ಯಾವಾಗ ಆರಂಭ?
ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
ನೆಹರು ಕ್ರೀಡಾಂಗಣ : ಡಿವಿಎಸ್ ಶಿಕ್ಷಣ ಸಂಸ್ಥೆ, ಕುವೆಂಪು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮೂರು ದಿನಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಚಾಲನೆ ನೀಡಿದರು. ಮೂರು ದಿನ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಲಿದೆ.
ಇದನ್ನೂ ಓದಿ : ‘ನಾನೇನು ಸನ್ಯಾಸಿಯಲ್ಲ, ಮೂರು ಬಾರಿ ಶಾಸಕನಾಗಿದ್ದೇನೆʼ
ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ : ಬೀದಿ ಬದಿ ವ್ಯಾಪಾರಸ್ಥರಿಗೆಂದೇ ಗುರುತಿಸಿದ ವ್ಯಾಪಾರದ ಜಾಗ, ಟಿವಿಸಿ ಕಮಿಟಿಯಲ್ಲಿ ಅನುಮೋದನೆಗೊಂಡ ವ್ಯಾಪಾರ ವಲಯಗಳನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ : ಸಿಲಿಂಡರ್ ಸ್ಪೋಟ, ಭದ್ರಾವತಿ ಗೋಬಿ ಮಂಚೂರಿ ಅಂಗಡಿ ಮಾಲೀಕ ಸಾವು
ಸಹ್ಯಾದ್ರಿ ಕಾಲೇಜಿನಲ್ಲಿ ಕಾರ್ಯಾಗಾರ
ಸಹ್ಯಾದ್ರಿ ಕಾಲೇಜು : ಹಿರಿಯ ವಿದ್ಯಾರ್ಥಿಗಳ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಚಾಮರಾಜ ಒಡೆಯರ್ ಸಭಾಂಗಣದಲ್ಲಿ ಬೆಂಗಳೂರಿನ ಮಲೆನಾಡು ಕೋಚಿಂಗ್ ಸೆಂಟರ್ ಸಹಕಾರದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಸಲಾಯಿತು. ಮಾಜಿ ಸಂಸದ ಆಯನೂರು ಮಂಜುನಾಥ್ ಉದ್ಘಾಟಿಸಿದರು.
ಇದನ್ನೂ ಓದಿ : ಶಕ್ತಿ ಯೋಜನೆ, ಶಿವಮೊಗ್ಗದಲ್ಲಿ ಈವರೆಗೂ ಉಚಿತವಾಗಿ ಓಡಾಡಿದ ಮಹಿಳೆಯರೆಷ್ಟು?
ಶಿವಮೊಗ್ಗದಲ್ಲಿ ಪೊಲೀಸ್ ಕ್ರೀಡಾಕೂಟ
ಡಿಎಆರ್ ಮೈದಾನ : ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಚಾಲನೆ ನೀಡಿದರು. ಸಶಸ್ತ್ರ ಮೀಸಲು ಪಡೆ ಕವಾಯತ್ ಮೈದಾನದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಎಲ್ಲ ತಾಲೂಕಿನ ಪೊಲೀಸರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಬೆಳೆ ವಿಮೆ, ಪರಿಷ್ಕರಣೆಗೆ ಆರ್‌ಎಂಎಂ ಆಗ್ರಹ, ಕಾರಣವೇನು?
ಸಾಧಕ ಮಹಿಳೆಯರಿಗೆ ಸನ್ಮಾನ
ಕೃಷಿ ಕಾಲೇಜು : ಕೃಷಿ ನಿರತ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸನ್ಮಾನಿಸಲಾಯಿತು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ : ಅಡಿಕೆ ಧಾರಣೆ | 4 ಡಿಸೆಂಬರ್ 2024 | ಶಿವಮೊಗ್ಗದಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್?
ಏಡ್ಸ್ ದಿನಾಚರಣೆ ಜಾಥಾ
ಶಿವಮೊಗ್ಗ : ಏಡ್ಸ್ ದಿನಾಚರಣೆ ಪ್ರಯುಕ್ತ ಜಿಲ್ಲಾ ಕೋರ್ಟ್ ಆವರಣದಿಂದ ಐಎಂಎ ಸಭಾಂಗಣದವರೆಗೆ ಜಾಥಾ ನಡೆಸಲಾಯಿತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಜಾಥಾಗೆ ಚಾಲನೆ ನೀಡಿದರು.