ಶಿವಮೊಗ್ಗ ಪಾಲಿಕೆಗೆ 20ಕ್ಕೂ ಹೆಚ್ಚು ಲೋಕಾಯುಕ್ತರು, ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಿಬ್ಬಂದಿ ತಬ್ಬಿಬ್ಬು

ಶಿವಮೊಗ್ಗ: ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದೆ. ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಪರಿಶೀಲನೆ ನಡೆಯುತ್ತಿದೆ?

Lokayukta-officials-sudden-visit-to-Shimoga-Palike.

ಲೋಕಾಯುಕ್ತ ಎಸ್‌.ಪಿ ಎಂ.ಎಸ್‌. ಕೌಲಾಪುರೆ ಮಾರ್ಗದರ್ಶನದಲ್ಲಿ ಇವತ್ತು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ದಿಢೀರ್‌ ಪರಿಶೀಲನೆ ನಡೆಸಲಾಗುತ್ತಿದೆ. ಪಾಲಿಕೆಯ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ, ಟಪಾಲು ಸೆಕ್ಷನ್‌, ಸಹಾಯವಾಣಿ, ನಲ್ಮ್‌ ವಿಭಾಗ ಸೇರಿದಂತೆ ಪಲಿಕೆಯ ಪ್ರತಿ ಕಚೇರಿಯಲ್ಲಿಯು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

25ಕ್ಕು ಹೆಚ್ಚು ಸಿಬ್ಬಂದಿಯಿಂದ ಪರಿಶೀಲನೆ

ಸಾರ್ವಜನಿಕರ ಕೆಲಸಗಳು ವಿಳಂಬ ಸಂಬಂಧ ಲೋಕಾಯುಕ್ತಕ್ಕೆ ಹಲವು ದೂರು ಬಂದಿತ್ತು. ಈ ಹಿನ್ನೆಲೆ ಇವತ್ತು ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಎಸ್‌.ಪಿ. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿ 25ಕ್ಕು ಹೆಚ್ಚು ಸಿಬ್ಬಂದಿ ಪರಿಶೀಲನೆ ಕಾರ್ಯದಲ್ಲಿ ತೊಡಿಗಿದ್ದಾರೆ.

Shimoga Mahanagara Palike

ಸಿಬ್ಬಂದಿ ತಬ್ಬಿಬ್ಬು, ಕೆಲವರಿಗೆ ತರಾಟೆ

ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ಭೇಟಿ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದರು. ಇವತ್ತು ಏನೆಲ್ಲ ಕೆಲಸ ಮಾಡುವುದಿದೆ? ಯಾವೆಲ್ಲ ಕಡತ ಬಾಕಿ ಇದೆ? ಎಂದು ಪ್ರಶ್ನಿಸಿದಾಗ ಪಾಲಿಕೆ ಸಿಬ್ಬಂದಿ ಉತ್ತರಿಸಲು ತಡಬಡಾಯಿಸಿದರು. ಬೆಳಗ್ಗೆ 11 ಗಂಟೆಯಾದರು ಕಚೇರಿಯ ಕೆಲವು ಸಿಬ್ಬಂದಿ ಬೀಗ ಹುಡುಕುತ್ತಿರುವುದು ಗೊತ್ತಾಗಿ ಲೋಕಾಯುಕ್ತರು ತಾರಾಟೆಗೆ ತೆಗೆದುಕೊಂಡರು. ಇನ್ನು, ಪಾಲಿಕೆಯಲ್ಲಿ ವಿಲೇವಾರಿಗೆ ಬಾಕಿ ಇರುವ ಕಡತಗಳ ಕುರಿತು ಮಾಹಿತಿ ಪಡೆಯುತ್ತಿರುವ ಲೋಕಾಯುಕ್ತರು, ವಿಲೇವಾರಿ ವಿಳಂಬಕ್ಕೆ ಕಾರಣ ಕೇಳಿದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಹಿಳೆಯರ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ, ಕಾರಣವೇನು?

ಐಡಿ ಇಲ್ಲದೆ ಓಡಾಡ್ತಿದ್ದವರಿಗೆ ಕ್ಲಾಸ್‌ ಮತ್ತೊಂದೆಡೆ ಪಾಲಿಕೆ ಗುರುತಿನ ಚೀಟಿ ಧರಿಸಿದೆ, ಎಲ್ಲೆಂದರಲ್ಲಿ ಓಡಾಡುತ್ತಿದ್ದ ಪಾಲಿಕೆಗೆ ಸಿಬ್ಬಂದಿಗು ಇವತ್ತು ಬಿಸಿ ಮುಟ್ಟಿದೆ. ಕಮಿಷನರ್‌ ಮಾಯಣ್ಣ ಗೌಡ ಅವರು ಇಂತಹ ಸಿಬ್ಬಂದಿಗೆ ಕಂಡ ಕಂಡಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ಪ್ರತಿ ವಿಭಾಗಕ್ಕು ಭೇಟಿ ನೀಡಿ, ಲೋಕಾಯುಕ್ತ ಅಧಿಕಾರಿಗಳು ಕೇಳುವ ದಾಖಲೆಗಳನ್ನು ಒದಗಿಸಿಬೇಕು, ಸೂಕ್ತ ಉತ್ತರ ನೀಡಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

Shivamogga Lokayukta officials visit mahanagara palike
Shivamogga Lokayukta officials visit mahanagara palike
Shivamogga Lokayukta officials visit mahanagara palike
lok%202
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment