SHIVAMOGGA LIVE NEWS | 24 SEPTEMBER 2023
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಕಾಂಗ್ರೆಸ್ ಪಕ್ಷ (Congress Party) ಸೇರ್ಪಡೆ ಹೊಸ ನಿರ್ಧಾರವಲ್ಲ. ವರ್ಷದ ಹಿಂದೆಯೆ ತೀರ್ಮಾನಿಸಿದ್ದೆ. ಈಗ ಜೆಡಿಎಸ್ ಪಕ್ಷದ ಮುಖಂಡರ ಜೊತೆ ಸೆ.26ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷದ ಹಿಂದೆ ಕಾಂಗ್ರೆಸ್ (Congress Party) ಸೇರ್ಪಡೆ ನಿರ್ಧಾರ ಮಾಡಿದ್ದೆ. ಆದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯ್ಕ್, ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಸಂದರ್ಭ ಪಕ್ಷ ತೊರೆಯುವುದು ಸರಿಯಲ್ಲ ಎಂದು ಎಲ್ಲರು ನಿರ್ಧರಿಸಿದ್ದರು. ಹಾಗಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಮಯ ಕೂಡಿ ಬಂದಿದೆ ಎಂದರು.
ಜೆಡಿಎಸ್‌ನಲ್ಲಿ ಬಹಳ ಕಷ್ಟ
ಈ ಹಿಂದೆ ಎರಡು ಬಾರಿ ಪಕ್ಷ ತೊರೆಯಲು ನಿರ್ಧರಿಸಿದ್ದೆ. ಆಗ ವರಿಷ್ಠರು ಬೇಡ ಎಂದು ಸೂಚಿಸಿದ್ದರು. ಆದರೆ ಎಷ್ಟೆ ಕಷ್ಟಪಟ್ಟರು ಜನರು ಜೆಡಿಎಸ್ ಪಕ್ಷದತ್ತ ಬರುತ್ತಿಲ್ಲ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದತ್ತ ತೆರಳುತ್ತಿದ್ದೇವೆ. ಹಿಂದಿನಿಂದಲು ನಾವು ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡಿದ್ದೇವೆ. ಪಾಲಿಕೆ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೆವು. ಈಚೆಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದಾಗ ಪಕ್ಷಕ್ಕೆ ಆಹ್ವಾನಿಸಿದ್ದರು. ಜಿಲ್ಲಾ ಜೆಡಿಎಸ್‌ನ ಮುಖಂಡರ ಜೊತೆ ಚರ್ಚೆ ಮಾಡಿ ಈಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಾವಿಕನಿಲ್ಲದ ದೋಣಿಯಾದ ಜೆಡಿಎಸ್, ಪಕ್ಷದ ಭವಿಷ್ಯವೇನು?
30ಕ್ಕು ಹೆಚ್ಚು ಮುಖಂಡರ ಪಟ್ಟಿ
ಎಂ.ಶ್ರೀಕಾಂತ್ ಅವರ ಜೊತೆ 30ಕ್ಕು ಹೆಚ್ಚು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಪಾಲಿಕೆ ಸದಸ್ಯ ನಾಗರಾಜ ಕಂಕಾರಿ, ಮಾಜಿ ಮೇಯರ್ ಹೆಚ್.ಪಾಲಾಕ್ಷಿ, ಎಸ್.ಎನ್.ಮಹೇಶ್, ರಾಜಣ್ಣ, ಕೆ.ಜಿ.ನವಾಬ್, ಸೈಯದ್ ನುಮಾನ್, ಎಸ್.ಡಿ.ಪ್ರಸನ್ನ ಕುಮಾರ್, ಎಸ್.ಕೆ.ಬಾಸ್ಕರ್, ಶ್ಯಾಮು.ಡಿ, ಮಂಜುನಾಥ ನವುಲೆ ಸೇರಿದಂತೆ 30ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ತಮ್ಮೊಂದಿಗೆ ಕಾಂಗ್ರೆಸ್ ಸೇರುತ್ತಿರುವ ಮುಖಂಡರ ಪಟ್ಟಿಯನ್ನು ಎಂ.ಶ್ರೀಕಾಂತ್ ಬಿಡುಗಡೆ ಮಾಡಿದರು.
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು






