SHIVAMOGGA LIVE NEWS | 9 JANUARY 2025
ಶಿವಮೊಗ್ಗ : ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಶಿವರಾಜ್ ಕುಮಾರ್ ಅವರ ಅರೈಕೆಗೆ ಸಚಿವ ಮಧು ಬಂಗಾರಪ್ಪ ಅಮೆರಿಕಾಗೆ ತೆರಳಿದ್ದಾರೆ. ವಿದೇಶದಲ್ಲಿದ್ದರು ಶಿಕ್ಷಣ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಸಭೆಗಳಿಗೆ ಆನ್‌ಲೈನ್ (Online) ಮೂಲಕವೇ ಹಾಜರಾಗಿ, ಜವಾಬ್ದಾರಿ ಮೆರೆದಿದ್ದಾರೆ.
ನಟ ಶಿವರಾಜ್ ಕುಮಾರ್ ಅಮೆರಿಕಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಆರೈಕೆಗೆ ಪತ್ನಿ ಗೀತಾ ಶಿವರಾಜ್ ಕುಮಾರ್, ಅವರ ಸಹೋದರ ಸಚಿವ ಮಧು ಬಂಗಾರಪ್ಪ ಸೇರಿದಂತೆ ಕುಟುಂಬದವರು ಜೊತೆಗಿದ್ದಾರೆ. ಡಿಸೆಂಬರ್ ಕೊನೆಯ ವಾರ ಸಚಿವ ಮಧು ಬಂಗಾರಪ್ಪ ಅಮೆರಿಕ ಮಿಯಾಮಿಗೆ ತೆರಳಿದ್ದರು.
ಅಮೆರಿಕದಲ್ಲಿದ್ದರು ಸಚಿವ ಮಧು ಬಂಗಾರಪ್ಪ ಇಲಾಖೆಯ ಪ್ರಮುಖ ಸಭೆಗಳು, ಶಿವಮೊಗ್ಗ ಜಿಲ್ಲೆಯ ಮಹತ್ವ ಮೀಟಿಂಗ್‌ಗಳಿಗೆ ಆನ್‌ಲೈನ್‌ನಲ್ಲೆ ಭಾಗವಹಿಸಿದ್ದರು. ಡಿಸೆಂಬರ್ 25ರಂದು ನಟ ಶಿವರಾಜ್ ಕುಮಾರ್ ಅವರ ಆರೋಗ್ಯದ ಕುರಿತು ಸಚಿವ ಮಧು ಬಂಗಾರಪ್ಪ, ಸಹೋದರಿ ಗೀತಾ ಶಿವರಾಜ್ ಕುಮಾರ್ ಜೊತೆಗೆ ವಿಡಿಯೋ ರಿಲೀಸ್ ಮಾಡಿದ್ದರು. ಡಿ.27ರಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಕುಮಾರ್ ಅವರೊಂದಿಗೆ ಆನ್‌ಲೈನ್ ಮೂಲಕ ಸಭೆ ನಡೆಸಿದರು. ಕರಕುಶಲತೆ ಮತ್ತು ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವ ಯೋಜನೆ ಸಂಬಂಧ ಚರ್ಚೆ ನಡೆಸಿದರು. ವಿವಿಧ ಸ್ವ ಸಹಾಯ ಸಂಘಗಳ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.ಸಾಲು ಸಾಲು ಆನ್‌ಲೈನ್ ಸಭೆ
ಜನವರಿ 2ರಂದು ಭದ್ರಾ ಕಾಡಾ ಮತ್ತು ನೀರಾವರಿ ನಿಗಮದ ಅಧಿಕಾರಿಗಳ ಜೊತೆಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ಕುರಿತು ಚರ್ಚೆ ನಡೆಸಿದರು. ಜನವರಿ 4ರಂದು ನಡೆದ ನೀರಾವರಿ ಸಲಹ ಸಮಿತಿ ಸಭೆಯಲ್ಲೂ ಸಚಿವ ಮಧು ಬಂಗಾರಪ್ಪ ಭಾಗವಹಿಸಿದ್ದರು. ಅದೇ ದಿನ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಲಾಯಿತು.
ಇದನ್ನೂ ಓದಿ » ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ
ಜನವರಿ 4ರಂದು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ » ನಂಜಪ್ಪ ಆಸ್ಪತ್ರೆಯಲ್ಲಿ ಕ್ಯಾಪ್ಸುಲ್ ಎಂಡೋಸ್ಕೋಪಿ, ಏನಿದು? ಉಪಯೋಗವೇನು?
ವೈಯಕ್ತಿಕ ಕೆಲಸದ ಮೇಲೆ ಅಮೆರಿಕದಲ್ಲಿದ್ದರು ಸಚಿವ ಮಧು ಬಂಗಾರಪ್ಪ ಜವಾಬ್ದಾರಿ ನಿಭಾಯಿಸಿದ್ದಾರೆ. ಇಲಾಖೆ ಮತ್ತು ಉಸ್ತುವಾರಿ ಹೊತ್ತಿರುವ ಜಿಲ್ಲೆಯ ಪ್ರಮುಖ ಸಭೆಗಳಲ್ಲಿ ಭಾಗವಹಿಸಿದ್ದಾರೆ.