ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021
ಎಲ್ಲಾ ವರ್ಗದವರನ್ನು ತೃಪ್ತಿಪಡಿಸಲು ಹಲವು ಹೊಸ ಯೋಜನೆಗಳ ಘೋಷಣೆಯೊಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಬಜೆಟ್ ಮಂಡಿಸಲಾಗಿದೆ. 2021 – 22ನೇ ಸಾಲಿನಲ್ಲಿ 2.81 ಕೋಟಿ ರೂ. ಉಳಿತಾಯ ಬಜೆಟ್ ಇದಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು ಬಜೆಟ್ ಮಂಡಿಸಿದರು.
ಏನೆಲ್ಲ ಘೋಷಣೆ ಮಾಡಲಾಗಿದೆ?
ಒಳಾಂಗಣದ ಕ್ರೀಡಾಂಗಣ | ಹುಡ್ಕೊ ಕಲ್ಲಹಳ್ಳಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನ ನಿರ್ಮಾಣ.
ಸುಶಾಸನ ಭವನ : ಎಲ್ಲಾ ವಾರ್ಡ್ ಸದಸ್ಯರಿಗೆ ಸಂಪರ್ಕ ಕೊಠಡಿಗಳ ನಿರ್ಮಾಣ, ಎಂಜಿನಿಯರ್‍ಗಳ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ.
ಕಡಿಯುವ ನೀರು ಘಟಕ | ಜನನಿಬಿಡ ಪ್ರದೇಶಗಳಲ್ಲಿ ಪಾವತಿಸಿ, ಉಪಯೋಗಿಸುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ 5 ಲಕ್ಷ.
ಕೆರೆಗಳ ಕಾಯಕಲ್ಪ | ಆದ್ಯತೆ ಮೇರೆಗೆ ಹತ್ತು ಕೆರೆಗೆಳ ಅಭಿವೃದ್ಧಿ ಮಾಡಲು ಯೋಜನೆ. ಪಾಲಿಕೆ ಅನುದಾನದಿಂದ ಐದು ಕೆರೆಗಳು, ಉಳಿದ ಐದು ಕೆರಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 1 ಕೋಟಿ ರೂ. ಮೀಸಲು
ಪ್ಲಾಸ್ಟಿಕ್ ಮುಕ್ತ, ಹಸಿರು ಶಿವಮೊಗ್ಗ
ಶಿವಮೊಗ್ಗವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಅರಿವು ಮತ್ತು ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 10 ಲಕ್ಷ ರೂ. ಮೀಸಲಿಡಲಾಗಿದೆ. ಇನ್ನು, 27 ಪಾರ್ಕ್‍ಗಳನ್ನು ಅಭಿವೃದ್ದಿಪಡಿಸಲಾಗಿದ್ದು, ಈ ವರ್ಷ ನಗರದ ಉಳಿದ ಪಾರ್ಕುಗಳ ಅಭಿವೃದ್ಧಿಗೆ ಯೋಜಿಸಲಾಗಿದೆ.
ಪಾಲಿಕೆಗೆ ಸಿಬ್ಬಂದಿಗೆ ವಸತಿ ಗೃಹ, ವಿಮೆ
ಪಾಲಿಕೆಯ ಡಿ ಗ್ರೂಪ್ ನೌಕರರು ಮತ್ತು ನೀರು ಸರಬರಾಜು ಮಾಡುವ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಿಸಲು 5 ಕೋಟಿ ರೂ. ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ 30 ಲಕ್ಷ, ಪಾಲಿಕೆ ಖಾಯಂ ನೌಕರರು ಮತ್ತು ಜನಪ್ರತಿನಿಧಿಗಳ ವೈದ್ಯಕೀಯ ವಿಮಾ ಯೋಜನೆಗೆ 50 ಲಕ್ಷ ರೂ.
ಹೊಸ ವಾಣಿಜ್ಯ ಸಂಕೀರ್ಣ
ವಿನೋಬನಗರದಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜಿಸಾಲಿಗದೆ. ಇನ್ನು ಗಾಂಧಿ ಬಜಾರ್‍ನಲ್ಲಿ ಬಟ್ಟೆ ಮಾರುಕಟ್ಟೆ ಅಭಿವೃದ್ಧಿಗೆ ಪ್ಲಾನ್ ಮಾಡಲಾಗಿದೆ. ಮೀನು ಮತ್ತು ಮಾಂಸದ ಮಾರುಕಟ್ಟೆ ನಿರ್ಮಾಣಕ್ಕೆ ಕಳೆದ ಬಜೆಟ್‍ನಲ್ಲಿ 50 ಲಕ್ಷ ಮೀಸಲಿಡಲಾಗಿತ್ತು. ಈ ಬಜೆಟ್‍ನಲ್ಲೂ 50 ಲಕ್ಷ ರೂ. ಮೀಸಲಿಡಲಾಗಿದೆ.
ಇ- ಶೌಚಾಲಯ, ಹೊಸ ಯಂತ್ರಗಳು
ನಗರದ ಸ್ವಚ್ಛತೆಗಾಗಿ ಸ್ವೀಪಿಂಗ್ ಮೆಷಿನ್ ಮತ್ತು ಘನ ತ್ಯಾಜ್ಯ ಸಾಗಣೆಗೆ ಎರಡು ಲಾರಿಗಳು, ಸಂಚಾರಿ ಶೌಚಲಾಯಗಳ ನಿರಂತರ ಬಳಕೆಗೆ ಎರಡು ಹೊಸ ಟ್ರಾಕ್ಟರ್ ಖರೀದಿ, ನಗರದ ವಿವಿಧೆಡೆ ಇ-ಶೌಚಾಲಯ ನಿರ್ಮಾನಕ್ಕೆ 2 ಕೋಟಿ ರೂ. ಮೀಸಲಿಡಲಾಗಿದೆ. ಇನ್ನು, ಮೂಲದಲ್ಲೇ ಘನ ತ್ಯಾಜ್ಯ ವಿಂಗಡಿಸುವ ಯೋಜನೆಯನ್ನು ಮುಂದುವರೆಸಲಾಗುತ್ತಿದೆ.
ವಿಶೇಷ ಚೇತನರಿಗೆ ಸಲಕರಣೆಗಳು
ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳು ಮತ್ತು ಸಲಭ್ಯ ಕಲ್ಪಿಸುವ ಸಲುವಾಗಿ ಡಾ. ಅಬ್ದುಲ್ ಕಲಾಂ ವಿಶಿಷ್ಟ ಚೇತನ ಕ್ಷೇಮಾಭಿವೃದ್ಧಿ ಯೋಜನೆಗೆ 20 ಲಕ್ಷ ರೂ. ಮೀಸಲಿಡಲಾಗಿದೆ. ಇನ್ನು, ಪಂಡಿತ್ ದೀನದಯಾಳ್ ಹೃದಯಸ್ಪರ್ಶಿ ಯೋಜನೆ ಅಡಿಯಲ್ಲಿ ನಿರ್ಗತಿಕರು, ಅನಾಥರಿಗಾಗಿ ಮಾದರಿ ಆಶ್ರಯ ತಾಣ ನಿರ್ಮಾಣಕ್ಕೆ 35 ಲಕ್ಷ ರೂ. ಸ್ಲಂ ಪ್ರದೇಶದಲ್ಲಿ ವಾಸವಾಗಿರುವವರ ಆರೋಗ್ಯಕ್ಕಾಗಿ ಆರೋಗ್ಯ ಭಾರತಿ ಯೋಜನೆ ರೂಪಿಸಲಾಗಿದ್ದು. 25 ಲಕ್ಷ ರೂ. ಮೀಸಲಿಡಲಾಗಿದೆ.
ಮಹಿಳೆಯರು, ಮಕ್ಕಳಿಗೆ ಯೋಜನೆ
ಬಾಲವಿಕಾಸ ಕೇಂದ್ರಗಳ ಮೂಲಕ ಮಕ್ಕಳ ಕಲೆ, ನಾಟಕ, ಆಟೋಟ ಚಟುವಟಿಕೆ ಪ್ರೋತ್ಸಾಹಿಸಲು ಲವಕುಶ ಮಕ್ಕಳ ಕಲ್ಯಾಣ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 10 ಲಕ್ಷ ರೂ. ಮೀಸಲಿಡಲಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗೆ ತಲಾ 10 ಸಾವಿರ ರೂ., ಕೆಳದಿ ಚನ್ನಮ್ಮ ಪ್ರಶಸ್ತಿ ನೀಡಲು ಯೋಜಿಸಲಾಗಿದೆ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲವಾಗುವ ಕರಕುಶಲ, ಗುಡಿ ಕೈಗಾರಿಕೆ, ಕೌಶಲ್ಯ ತರಬೇತಿ ಕಲ್ಪಿಸಲು ಕೆಳದಿ ರಾಣಿ ಚೆನ್ನಮ್ಮ ಮಹಿಳಾ ಯೋಜನೆ ಅಡಿಯಲ್ಲಿ 25 ಲಕ್ಷ ರೂ.
ಬೆಳ್ಳಿ ಮಂಡಲದ ಮೂಲಕ ಛಾಯಾಚಿತ್ರ
ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಬಯಲು ರಂಗಮಂದಿರಗಳ ನಿರ್ಮಾಣ, ಬೆಳ್ಳಿ ಮಂಡಲದ ಮೂಲಕ ಅತ್ಯುತ್ತಮ ಛಾಯಾಚಿತ್ರ ನಿರ್ಮಾಣಕ್ಕೆ 20 ಲಕ್ಷ ರೂ.
ಶಾಲೆಗಳ ದುರಸ್ಥಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
ತ್ರಿವಿಧ ದಾಸೋಹಿ ಡಾ. ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ಥಿ, ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು, ಎನ್‍ಸಿಸಿ, ಎನ್‍ಎಸ್‍ಎಸ್ ಸ್ಕೌಟ್ಸ್ ಅಂಡ ಗೈಡ್ಸ್ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ನೀಡಲು ಯೋಜಿಸಲಾಗಿದೆ.
ಕ್ರೀಡೆಗೆ ಪ್ರೋತ್ಸಾಹ ನೀಡಲು ಯೋಜನೆ
ರಾಷ್ಟ್ರೀಯ ಕ್ರೀಡೆಗಳು, ಸ್ವದೇಶಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಪ್ರೋತ್ಸಾಹ ನೀಡಲು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗೆದ್ದು ಬಂದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು 10 ಲಕ್ಷ ರೂ.
ಸ್ವ ಉದ್ಯೋಗಕ್ಕೆ ಪ್ರೋತ್ಸಾಹ
ವಿವಿಧ ಬ್ಯಾಂಕುಗಳ ಮೂಲಕ ಸ್ವ ಉದ್ಯೋಗ ನಡೆಸುವ ಯುವಕರಿಗೆ ಸಹಾಯಧನ, ಕೌಶಲ್ಯ ಅಭಿವೃದ್ದಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ಪ್ರೋತ್ಸಾಹ, ಉದ್ಯೋಗ ಮೇಳಗಳನ್ನು ಆಯೋಜಿಸಲು 25 ಲಕ್ಷ ರೂ.
ಆದಾಯವೆಷ್ಟು, ಖರ್ಚು ಎಷ್ಟು
ಪ್ರಸಕ್ತ ಸಾಲಿನಲ್ಲಿ 288 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ವಿವಿಧ ವೆಚ್ಚಗಳ ಬಳಿಕ 2.81 ಕೋಟಿ ರೂ. ಉಳಿತಾಯವಾಗಲಿದೆ ಎಂದು ಬಜೆಟ್ ಪ್ರತಿಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]