ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 FEBRUARY 2024
SHIMOGA : ಜಮೀನು ಕೆಲಸ ಮಾಡುವಾಗ ರಾಶಿಗಟ್ಟಲೆ ಚಿನ್ನದ ಸರಗಳು ಪತ್ತೆಯಾಗಿವೆ. ಅದನ್ನು ಮಾರಾಟ ಮಾಡುತ್ತಿರುವುದಾಗಿ ನಂಬಿಸಿ, ಎನ್.ಆರ್.ಪುರದ ವ್ಯಕ್ತಿಯೊಬ್ಬರಿಗೆ ನಕಲಿ ಸರಗಳನ್ನು ನೀಡಿ 15 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿ ಹಣ ಪಡೆದು ಮೋಸ ಮಾಡಲಾಗಿದೆ.
‘ಒರಿಸ್ಸಾದಿಂದ ರಸ್ತೆ ಕೆಲಸಕ್ಕೆ ಬಂದಿದ್ದೆ’
ವ್ಯಕ್ತಿಯೊಬ್ಬರಿಗೆ (ಹೆಸರು ಗೌಪ್ಯ) ಎನ್.ಆರ್.ಪುರದಲ್ಲಿ ಒರಿಸ್ಸಾ ಮೂಲದವ ಎಂದು ಹೇಳಿಕೊಂಡು ಕಿರಣ್ ಎಂಬಾತನ ಪರಿಚಯವಾಗಿತ್ತು. ಜಮೀನು ಒಂದರಲ್ಲಿ ಕೆಲಸ ಮಾಡುವಾಗ ಬಂಗಾರದ ಸರಗಳು ಸಿಕ್ಕಿವೆ ಎಂದು ಕಿರಣ್ ನಂಬಿಸಿದ್ದ. ಸಾಕ್ಷಿಯಾಗಿ ಒಂದು ಚಿನ್ನದ ಸರವನ್ನು ತೋರಿಸಿ, ಅದರ ಸ್ವಲ್ಪ ಭಾಗವನ್ನು ತುಂಡು ಮಾಡಿ ಎನ್.ಆರ್.ಪುರದ ವ್ಯಕ್ತಿಗೆ ನೀಡಿದ್ದ. ಪರೀಕ್ಷಿಸಿದಾಗ ಅದು ಅಸಲಿ ಚಿನ್ನ ಎಂದು ತಿಳಿದು ಬಂದಿತ್ತು.
30 ಲಕ್ಷಕ್ಕೆ ಬೇಡಿಕೆ, 15 ಲಕ್ಷಕ್ಕೆ ವ್ಯವಹಾರ
ಎನ್.ಆರ್.ಪುರದ ವ್ಯಕ್ತಿಗೆ ಕರೆ ಮಾಡಿದ ಕಿರಣ್, ಅಷ್ಟೂ ಚಿನ್ನದ ಸರಗಳನ್ನು ಮಾರಾಟ ಮಾಡಬೇಕಿದೆ. ತಾನೀಗ ಶಿವಮೊಗ್ಗದಲ್ಲಿರುವುದಾಗಿ ತಿಳಿಸಿದ್ದ. ಮೊದಲಿಗೆ 30 ಲಕ್ಷ ರೂ. ಕೇಳಿದ್ದ ವಂಚಕ ಕಿರಣ್, ಕೊನೆಗೆ 15 ಲಕ್ಷ ರೂ.ಗೆ ವ್ಯವಹಾರ ಮಾಡಲು ಒಪ್ಪಿಕೊಂಡಿದ್ದ. ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಸಮೀಪ ಕಾರಿನಲ್ಲಿ ಕುಳಿತು ಎನ್.ಆರ್.ಪುರದ ವ್ಯಕ್ತಿಗೆ ಚಿನ್ನದ ಸರಗಳಿದ್ದ ಚೀಲ ನೀಡಿದ್ದ. ಅವರಿಂದ 15 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ.
ಎನ್.ಆರ್.ಪುರದ ವ್ಯಕ್ತಿ ಸಮೀಪದ ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅವು ನಕಲಿ ಚಿನ್ನ ಅನ್ನುವುದು ಗೊತ್ತಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಜಿಂಕೆ ಮಾಂಸ ಬೇಯಿಸುವ ಹೊತ್ತಿಗೆ ದಾಳಿ, ಪಾತ್ರೆ ಸಹಿತ ಆರೋಪಿಗಳು ಅರೆಸ್ಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422