ಶಿವಮೊಗ್ಗ : ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ (Film) ಮಾ.28ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಸಿನಿಮಾದ ಪ್ರಮೋಷನ್ಗಾಗಿ ನಿರ್ದೇಶಕ ಯೋಗರಾಜ್ ಭಟ್, ನಾಯಕ ನಟ ಸುಮುಖ್ ಮತ್ತು ನಾಯಕಿ ರಿಷಿಕಾ ಶೆಟ್ಟಿ ಶಿವಮೊಗ್ಗಕ್ಕೆ ಆಗಮಿಸಿದ್ದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ, ಮುಂಗಾರು ಮಳೆ ಮಾದರಿಯಲ್ಲೇ ಮನದ ಕಡಲು ಸಿನಿಮಾ (Film) ಕೂಡ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ತಿಳಿಸಿದರು.
ಸಿನಿಮಾ ಟೀಮ್ ಹೇಳಿದ್ದೇನು?
ಮುಂಗಾರು ಮಳೆ ಸಿನಿಮಾ ನಮಗೆ ಬಹಳಷ್ಟು ಕಲಿಸಿದೆ. ಈಗ ಮನದ ಕಡಲು ಕೂಡ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲಿದೆ. ಹೆಣ್ಮಕ್ಕಳ ಸ್ನೇಹದಲ್ಲಿ ವಿಶೇಷತೆ ಇರುತ್ತದೆ. ನಾಯಕಿಯರಾದ ಅಂಜಲಿ, ರಿಷಿಕಾ ಶೆಟ್ಟಿ ಉತ್ತಮವಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಆರು ಹಾಡುಗಳಿವೆ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಕಾಸರಗೋಡುವರೆಗೆ ಕರಾವಳಿ ಭಾಗದಲ್ಲಿ ವಿಶೇಷ ಸ್ಥಳಗಳನ್ನು ಆಯ್ಕೆ ಮಾಡಿ ಚಿತ್ರೀಕರಣ ಮಾಡಲಾಗಿದೆ.
– ಯೋಗರಾಜ್ ಭಟ್, ನಿರ್ದೇಶಕ
ಇದು ನನ್ನ ಮೊದಲ ಸಿನಿಮಾ. ತುಂಬಾ ದಿನಗಳ ನಂತರ ಒಂದು ಒಳ್ಳೆಯ ಲವ್ ಸ್ಟೋರಿ ಬಂದಿದೆ. ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತದೆ. ನಿಮ್ಮೆಲ್ಲರ ಬೆಂಬಲ ಅಗತ್ಯ.
– ರಿಷಿಕಾ ಶೆಟ್ಟಿ, ನಾಯಕಿ
ಇದನ್ನೂ ಓದಿ » ಇವತ್ತಿನಿಂದ ಶಿವಮೊಗ್ಗ ಮಹಾನಗರ ಪಾಲಿಕೆ 3 ವಲಯವಾಗಿ ವಿಂಗಡಣೆ, ಎಲ್ಲೆಲ್ಲಿ ಹೊಸ ಕಚೇರಿ ಶುರು?
ಈಚೆಗೆ ಮೈಕ್ ಹಿಡಿದುಕೊಂಡು ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಚಿತ್ರದ ಪ್ರಚಾರ ಮಾಡಿದ್ದೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವಿಶೇಷವಾದ ಸಿನಿಮಾ. ಐದು ವಿವಿಧ ಶೇಡ್ನಲ್ಲಿ ಪಾತ್ರ ಮಾಡಿದ್ದೇನೆ. ಈ ಸಿನಿಮಾ ಮನಸ್ಸಿಗೆ ಮುದ ನೀಡುತ್ತದೆ. ಡೈಲಾಗ್ಗಳು ತುಂಬಾ ಚೆನ್ನಾಗಿವೆ.
– ಸಮುಖ್, ನಾಯಕ ನಟ
ಪತ್ರಕರ್ತ ಶ್ರೀಧರ್ ಶಿವಮೊಗ್ಗ ಪತ್ರಿಕಾಗೋಷ್ಠಿಯಲ್ಲಿದ್ದರು. ಸುದ್ದಿಗೋಷ್ಠಿ ಬಳಿಕ ನಿರ್ದೇಶಕ ಯೋಗರಾಜ್ ಭಟ್, ಚಿತ್ರರಂಗ ಮತ್ತು ಪ್ರಸ್ತುತ ಸಿನಿಮಾಗಳ ಕುರಿತು ಪತ್ರಕರ್ತರ ಜೊತೆಗೆ ಸಂವಾದ ನಡೆಸಿದರು.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆ ವಿಂಗಡಣೆ, ಯಾವ್ಯಾವ ವಾರ್ಡ್ ಯಾವ ವಲಯಕ್ಕೆ ಸೇರುತ್ತೆ? ಇಲ್ಲಿದೆ ಲಿಸ್ಟ್
manada kadalu film promotion in shimoga. Director Yogaraj Bhat, hero sumukh, heroin rishika shetty were present.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200