ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 DECEMBER 2024
ಶಿವಮೊಗ್ಗ : ಬೆಳೆ ವಿಮೆ (Insurance) ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಶಿವಮೊಗ್ಗ ಜಿಲ್ಲೆಯಲ್ಲಿ 50,383 ರೈತರು 22.60 ಕೋಟಿ ರೂ. ಪ್ರೀಮಿಯಂ ಪಾವತಿಸಿದ್ದರು. ಈ ಪೈಕಿ 23,094 ರೈತರು ಡಿಸಿಸಿ ಬ್ಯಾಂಕ್ ಮೂಲಕವೇ 10.13 ಕೋಟಿ ರೂ. ಜಮಾ ಮಾಡಿದ್ದರು. ಈಗ ಒಟ್ಟು 19,358 ರೈತರಿಗೆ 45 ಕೋಟಿ ರೂ. ಬೆಳೆ ವಿಮೆ ಪಾವತಿಸಲಾಗಿದೆ. ಈ ಪೈಕಿ ಡಿಸಿಸಿ ಬ್ಯಾಂಕ್ ಮೂಲಕ ಪ್ರೀಮಿಯಮ್ ಪಾವತಿಸಿದ್ದ 8873 ರೈತರಿಗೆ 19.17 ಕೋಟಿ ರೂ. ವಿಮೆ ಪರಿಹಾರ ದೊರೆತಿದೆ ಎಂದರು.
ಹೆಚ್ಚು ವಿಮೆ ಪರಿಹಾರ ದೊರೆಯಬೇಕು
ಬೆಳೆ ವಿಮೆ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಹಚ್ಚುವಂತಾಗಬಾರದು. ಭಾರಿ ಮಳೆಯಾಗಿ ಶೇ.50 ಅಡಿಕೆ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಇಲಾಖೆಯವರು ವಿಮೆ ಕಂಪನಿಗೆ ಸರಿಯಾಗಿ ಮಾಹಿತಿ ನೀಡಿ ಹೆಚ್ಚು ವಿಮೆ ಪರಿಹಾರ ಕೊಡಿಸಬೇಕು.
– ಡಾ. ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ
ವಿಮೆ ಕಂಪನಿಯವರು ನಮ್ಮ ಜಿಲ್ಲೆಯಲ್ಲಿ ಶಾಖೆಯನ್ನೇ ತೆರೆಯುವುದಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ರೈತರಿಂದ ಪ್ರೀಮಿಯಂ ಪಾವತಿಸಿಕೊಳ್ಳುತ್ತಾರೆ. ಆ ಬಳಿಕ ವಿಮೆ ಕಂಪನಿಯವರು ಮಾಯವಾಗುತ್ತಾರೆ. ಮುಂದೆ ರೈತರು ಯಾರನ್ನು ವಿಚಾರಿಸಬೇಕು ಅನ್ನುವುದೇ ಗೊತ್ತಾಗುವುದಿಲ್ಲ. ಅಧಿಕಾರಿಗಳಿಗು ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಶಾಸ್ತ್ರಿ, ಸುಧೀರ್, ದುಗ್ಗಪ್ಪಗೌಡ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ವಿಐಎಸ್‌ಎಲ್, ಭದ್ರಾವತಿಯಲ್ಲಿ ಬಿ.ವಿ.ಶ್ರೀನಿವಾಸ್‌ಗೆ ಮನವಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422