ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾ ಶಾಖೆ ವತಿಯಿಂದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ (Hostel) ಉದ್ಘಾಟನೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಮೇ 26ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಹೆಚ್.ಬಿ.ರಮೇಶ್ ಬಾಬು ಜಾಧವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗೋಸಾಯಿ ಮರಾಠ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿ ವಿದ್ಯಾರ್ಥಿ ನಿಲಯ ಉದ್ಘಾಟಿಸಲಿದ್ದಾರೆ. ಕ್ಷತ್ರಿಯ ಪರಿಷತ್ ಗವರ್ನಿಂಗ್ ಕೌನ್ಸಿಲ್ ಚೇರ್ಮನ್ ಎಸ್.ಆರ್.ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುನೀಲ್ ಚವ್ಹಾಣ್, ಖಜಾಂಚಿ ವೆಂಕಟರಾವ್ ಚವ್ಹಾಣ್, ಕರ್ನಾಟಕ ಮರಾಠ ಸಮುದಾಯಗಳ ನಿಗಮದ ಅಭಿವೃದ್ಧಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಆರ್. ಪಾಗೋಜಿ ಭಾಗವಹಿಸುವರು ಎಂದರು.
ಕಾರ್ಯಕ್ರಮದಲ್ಲಿ ಇಂದಿರಾಬಾಯಿ ಲಕ್ಷ್ಮೀಕಾಂತ್ ಪವಾರ್ ಹಾಗೂ ಮಿಥುನ್ ಜಿ. ಜಗದಾಳೆ ಅವರನ್ನು ಸನ್ಮಾನಿಸಲಾಗುವುದು. ಛತ್ರಾಪತಿ ಶಿವಾಜಿ ಮರಾಠ ಟ್ರಸ್ಟ್ ಅಧ್ಯಕ್ಷ ಎಚ್.ಸಿದ್ಧೋಜಿರಾವ್ ಜಾಧವ್, ಶಿವಮೊಗ್ಗದ ಕ್ಷತ್ರಿಯ ಮರಾಠ ಸಹಕಾರ ಸಂಘದ ಆರ್.ಬಿ.ಸುರೇಶ್ ಬಾಬು ಮೋರೆ, ಪರಿಷತ್ ನಗರಾಧ್ಯಕ್ಷ ಬಿ.ಕೆ.ದಿನೇಶ್ ರಾವ್ ಚವ್ಹಾಣ್, ಶಿವಮೊಗ್ಗ ತಾಲೂಕು ಗ್ರಾಮಾಂತರ ಅಧ್ಯಕ್ಷ ಎಂ.ಡಿ.ದೇವರಾಜ್ ಶಿಂಧೆ ಪಾಲ್ಗೊಳ್ಳಲಿದ್ದಾರೆ. ಪರಿಷತ್ ಅಧ್ಯಕ್ಷ ಎಸ್.ಸುರೇಶ್‌ರಾವ್ ಸಾರೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸೂಡಾದಿಂದ ಖರೀದಿಸಿದ್ದ ನಿವೇಶನದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿ ನಿಲಯದಲ್ಲಿ 29 ಕೊಠಡಿಗಳಿವೆ. ಈಗ ಉಳಿದಿರುವ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು.ಆರ್.ಬಿ.ಸುರೇಶ್‌ಬಾಬು ಮೋರೆ, ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಪರಿಷತ್ ಜಿಲ್ಲಾಧ್ಯಕ್ಷ ಆರ್.ಚಂದ್ರರಾವ್ ಘಾರ್ಗೆ, ಕಾರ್ಯಾಧ್ಯಕ್ಷ ಇ.ಚೂಡಾಮಣಿ ಪವಾರ್, ಉಪಾಧ್ಯಕ್ಷ ಎಚ್.ಸಿದ್ಧೋಜಿರಾವ್ ಜಾಧವ್, ಪ್ರಮುಖರಾದ ಡಿ.ಎಂ.ರಾಜ್ ಕುಮಾರ್ ಜಗತಾಪ್, ಬಿ.ಕೆ.ದಿನೇಶ್ ರಾವ್ ಚವ್ಹಾಣ್, ಡಿ.ತುಕಾರಾಂ ಮಾನೆ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಮಳಿಗೆ ಮೇಲೆ ಪೊಲೀಸರ ರೇಡ್, ಇಬ್ಬರು ಅರೆಸ್ಟ್, ದಾಖಲಾಯ್ತು ಕೇಸ್