ಕೋಟೆ ಮಾರಿಕಾಂಬ ಜಾತ್ರೆ, ‘ಸಾರು ಹಾಕುವ ಪದ್ಧತಿ’ಗೆ ಚಾಲನೆ, ವಿದೇಶಿಗರನ್ನು ಸೆಳೆದ ಆಚರಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 MARCH 2024

SHIMOGA : ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಮಹೋತ್ಸವದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಸಾರು ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ದೇಗುಲದ ಆವರಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಾಕು ಹಾಕುವ ಕಾರ್ಯವನ್ನು ವಿದ್ಯುಕ್ತವಾಗಿ ಆರಂಭಿಸಿತು.

m6

ವಿಶೇಷ ಪೂಜೆ ಬಳಿಕ ಚಾಲನೆ

ಸಾರು ಹಾಕುವ ಕಾರ್ಯಕ್ಕು ಮೊದಲು ಕೋಟೆ ‍ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಆಡಳಿತ ಮಂಡಳಿ, ಭಕ್ತರು ಭಾಗವಹಿಸಿದ್ದರು. ಇದೆ ವೇಳೆ ಮಾರಿ ಗದ್ದುಗೆಗು ಪೂಜೆ ನೆರವೇರಿಸಲಾಯಿತು. ಬಳಿಕ ತಮಟೆ ಬಾರಿಸುವ ಮೂಲಕ ಸಾರು ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

m5

ಏನಿದು ಸಾರು ಹಾಕುವ ಕಾರ್ಯ?

ಮಾ.12ರಿಂದ ಮಾ.16ರವರೆಗೆ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ನಡೆಯಲಿದೆ. ಈ ಕುರಿತು ನಗರದ ವಿವಿಧೆಡೆ ಮಾಹಿತಿಯನ್ನು ಸಾರುವುದಕ್ಕೆ ಸಾರು ಹಾಕುವುದು ಎನ್ನಲಾಗುತ್ತದೆ. ಈ ಮುಂಚೆ ಡಂಗೂರ ಸಾರಲಾಗುತ್ತಿತ್ತು. ಈಗ ಆಟೋಗಳಲ್ಲಿ ಮೈಕ್‌ ಮೂಲಕ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಕೋಟೆ ಶ್ರೀ ಮಾರಿಕಾಂಬ ದೇವಿ ದೇಗುಲದ ಆವರಣದಲ್ಲಿ ಪ್ರಚಾರದ ಆಟೋಗಳಿಗೆ ಚಾಲನೆ ನೀಡಲಾಯಿತು.

m8

ವಿದೇಶಿಗರನ್ನು ಸೆಳೆದ ಮಾರಿಕಾಂಬೆ

ಸಾರು ಹಾಕುವ ಕಾರ್ಯಕ್ಕೆ ಚಾಲನೆ ನೀಡುವ ಹೊತ್ತಿಗೆ ವಿದೇಶಿ ಮಹಿಳೆಯರು ಕೋಟೆ ರಸ್ತೆಯಲ್ಲಿ ಆಗಮಿಸಿದ್ದರು. ದೇಗುದಲ್ಲಿನ ಪೂಜೆ, ತಮಟೆ ಸದ್ದು, ಪದ್ಧತಿಗಳನ್ನು ಕುತೂಹಲದಿಂದ ಗಮನಿಸಿದರು. ಈ ವೇಳೆ ದೇಗುಲದ ಆಡಳಿತ ಮಂಡಳಿಯವರು ವಿದೇಶಿ ಮಹಿಳೆಯರಿಗೆ ಜಾತ್ರೆ, ಪದ್ಧತಿಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗ ಟೋಲ್‌, ದಾಖಲೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ, ಏನದು ದಾಖಲೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment