ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನ ಮಹಾಮಾರಿ ಜನರ ಚಿತ್ತವನ್ನು ಹೆಚ್ಚಾಗಿ ಆಯುರ್ವೇದದತ್ತ ಹೊರಳಿಸಿದೆ. ಹಾಗಾಗಿ ಜನರಲ್ಲಿ ಸಸ್ಯಗಳ ಕುರಿತು ಜಾಗೃತಿ ಮೂಡಿಸಿ, ಅವುಗಳ ಔಷಧೀಯ ಗುಣಗಳನ್ನು ಪರಿಚಯಿಸುವ ಸಲುವಾಗಿ ಶಿವಮೊಗ್ಗದ ಟ್ರಸ್ಟ್ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿದೆ.
ಅನಿಕೇತನ ಟ್ರಸ್ಟ್ ಶಿವಮೊಗ್ಗದ ಹಲವು ಮನೆಗಳಿಗೆ ಆಯುರ್ವೇದ ಸಸ್ಯಗಳನ್ನು ವಿತರಿಸುವ ಕಾರ್ಯಕ್ಕೆ ಕೈ ಹಾಕಿದೆ. ಮೊದಲ ಹಂತದಲ್ಲಿ ತುಳಸಿ ಗಿಡಗಳನ್ನು ವಿತರಿಸಲಾಗಿದೆ. ಅಷ್ಟೆ ಅಲ್ಲ, ತುಳಸಿಯ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಕೊಟ್ಟಿದೆ.
ಮನೆಗಳು, ಆಟೋ ಚಾಲಕರಿಗೆ ಸಸಿ
ಮೊದಲ ಹಂತದಲ್ಲಿ ಅನಿಕೇತನ ಟ್ರಸ್ಟ್ ವತಿಯಿಂದ ವಿನೋಬನಗರ ನೂರು ಅಡಿ ರಸ್ತೆಯಲ್ಲಿನ ಕೆಲವು ಮನೆಗಳು, ಆಟೋ ಚಾಲಕರಿಗೆ ತುಳಸಿ ಗಿಡಗಳನ್ನು ನೀಡಲಾಗಿದೆ. ತುಳಸಿಯನ್ನು ಬೆಳಸಿ, ಬಳಸುವ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ನಾಗವೇಣಿ ನಾಗರಾಜ್ ತಿಳಿಸಿದ್ದಾರೆ.
ಇದು ಮೊದಲ ಹಂತ
ಮೊದಲ ಹಂತದಲ್ಲಿ ಕೆಲವು ತುಳಸಿ ಗಿಡಗಳನ್ನು ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಔಷಧೀಯ ಸಸ್ಯಗಳನ್ನು ಜನರಿಗೆ ಕೊಡಲು ಯೋಜಿಸಲಾಗಿದೆ. ಸಸ್ಯಗಳನ್ನು ಕೊಡುವ ಸಂದರ್ಭದಲ್ಲಿ, ಅದರ ಔಷಧೀಯ ಗುಣದ ಕುರಿತು ಜನರಿಗೆ ತಿಳಿಸಲಾಗುತ್ತದೆ. ಇದರಿಂದ ಜನರು ಕೂಡ ಸಸ್ಯಗಳ ಕುರಿತು ತಿಳಿಯಲು ಅವಕಾಶವಾಗಲಿದೆ ಅನ್ನುವುದು ಅನಿಕೇತನ ಟ್ರಸ್ಟ್ ಉದ್ದೇಶ.
ಸಸ್ಯಗಳು, ಅವುಗಳ ಔಷಧೀಯ ಗುಣಗಳ ಕುರಿತು ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿರುವ ಅನಿಕೇತನ ಟ್ರಸ್ಟ್ ಮಹಿಳೆಯರ ಕೆಲಸ ಮೆಚ್ಚುಗೆ ಗಳಿಸಿದೆ. ಇದು ಮತ್ತಷ್ಟು ಜನರಿಗೆ ಪ್ರೇರಣೆ ಆಗಬೇಕಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]