ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಇ-ಆಸ್ತಿ (E Aasthi) ಪಡೆಯಲು ಇರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಏರ್ಪಡಿಸಲಾಗಿತ್ತು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಕೇವಲ 20,251 ಇ-ಆಸ್ತಿ ಮಾತ್ರ ನೀಡಲಾಗಿದೆ. ಭದ್ರಾವತಿಯಲ್ಲಿ 29,900 ಕೊಟ್ಟಿದ್ದಾರೆ. ತುಮಕೂರು, ಹುಬ್ಬಳ್ಳಿಯ ಅಂಕಿ ಅಂಶ ನೋಡಿದರೆ ಶಿವಮೊಗ್ಗ ಬಹಳ ಹಿಂದಿದೆ.
- ಕೆ.ವಿ.ವಸಂತ ಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ
![]()
ಈ ಸಂದರ್ಭ ಅಹವಾಲು ಆಲಿಸಿದ ಪಾಲಿಕೆ ಕಮಿಷನರ್ ಮಯಾಣ್ಣಗೌಡ ಪ್ರಮುಖ ನಿರ್ಧಾರ ಪ್ರಕಟಿಸಿದರು.
ಆಯುಕ್ತ ಮಾಯಣ್ಣಗೌಡ ಏನೆಲ್ಲ ಹೇಳಿದರು?

ದಸರಾ ಬಳಿಕ ಸಾರ್ವಜನಿಕರೇ ನೇರವಾಗಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಇ-ಆಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ಇದುವರೆಗೆ 21 ಸಾವಿರ ಇ-ಆಸ್ತಿ ಗಳನ್ನು ನೀಡಲಾಗಿದೆ. ವಾರಕ್ಕೆ 1 ಸಾವಿರ ಇ-ಆಸ್ತಿಗಳನ್ನು ಕೊಡಲಾಗುತ್ತಿದೆ.
ಮುಂಚಿನದ್ದಕ್ಕೆ ಹೋಲಿಸಿದರೆ ಪರಿಸ್ಥಿತಿ ಸುಧಾರಣೆಯಾಗಿದೆ. ಇ-ಆಸ್ತಿಯನ್ನು ಇನ್ನಷ್ಟು ಶೀಘ್ರವಾಗಿ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ದಸರಾ, ಗಣೇಶ ಹಬ್ಬದ ಹಿನ್ನೆಲೆ ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಕೆಲಸ ಅಧಿಕವಾಗಿ ಇದ್ದುದ್ದರಿಂದ ಸ್ವಲ್ಪ ಕಷ್ಟವಾಗಿದೆ.
ಪ್ರಮುಖರಾದ ಸತೀಶ್ ಕುಮಾರ್ ಶೆಟ್ಟಿ, ಗೋಪಾಲ್, ಸೀತಾರಾಮ್, ಕೆ.ವಿ. ವಸಂತಕುಮಾರ್, ಜನಮೇಜಿ ರಾವ್ ಇತರರಿದ್ದರು.

ಇದನ್ನೂ ಓದಿ » ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಸಂಸದರು ಗರಂ, ಇಲ್ಲಿದೆ ರಾಘವೇಂದ್ರ ಹೇಳಿಕೆಯ ಪಾಯಿಂಟ್ಸ್
meeting about E Aasthi
LATEST NEWS
- ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

- ರಾತ್ರಿ 11:45ಕ್ಕೆ ಅಮೀರ್ ಅಹಮದ್ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು















