ಶಿವಮೊಗ್ಗ ಸಿಟಿಯಲ್ಲಿ ಭಾನುವಾರ ಎಂಟು ಮೈಕ್ರೊ ಕಂಟೈನ್ಮೆಂಟ್ ಜೋನ್ ರಚನೆ, ಏನಿದು ಜೋನ್? ಎಲ್ಲೆಲ್ಲಿ ಮಾಡಲಾಗಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 MAY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕರೋನ ನಿಯಂತ್ರಣಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧೆಡೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ನಡುವೆ ಭಾನುವಾರ ಎಂಟು ಮೈಕ್ರೊ ಕಂಟೈನ್ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ

ನಗರದ ಪ್ರಮುಖ ರಸ್ತೆಗಳು, ಜನನಿಬಿಡ ಪ್ರದೇಶಗಳಲ್ಲಿ ಭಾನುವಾರ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಸ್ಯಾನಿಟೈಸರ್ ಟ್ಯಾಂಕ್ ‍ ಹೊತ್ತ ವಾಹನದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.

ಮೈಕ್ರೋ ಕಂಟೈನ್ಮೆಂಟ್ ಜೋನ್

ಭಾನುವಾರ ನಗರದಾದ್ಯಂತ ಎಂಟು ಮೈಕ್ರೊ ಕಂಟೈನ್ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ. ಕೆಎಸ್‍ಆರ್‍ಟಿಸಿ ಲೇಔಟ್‍, ಕರಿಯಣ್ಣ ಬಿಲ್ಡಿಂಗ್ ಸಮೀಪ, ಎಲ್‍ಐಸಿ ಕ್ವಾರ್ಟರ್ಸ್ ಸಮೀಪ, ಮೆಡಿಕಲ್ ಕಾಲೇಜು ಹಾಸ್ಟೆಲ್‍, ವೆಟರ್ನರಿ ಕಾಲೇಜು ರಂಗನಾಥ ದೇವಸ್ಥಾನದ ಬಳಿ, ಆರ್‍ಎಂಎಲ್‍ ನಗರದಲ್ಲಿ ಒಂದೆಡೆ ಮೈಕ್ರೊ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ.

ಸಣ್ಣ ಪ್ರಮಾಣದಲ್ಲಿ ಸೋಂಕಿತರು ಒಂದೆ ಮನೆ ಅಥವಾ ಅಕ್ಕಪಕ್ಕದ ಮನೆಯಲ್ಲಿ ಇದ್ದರೆ ಅಂತಹ ಪ್ರದೇಶವನ್ನು ಮೈಕ್ರೊ ಕಂಟೈನ್ಮೆಂಟ್ ಜೋನ್‍ ಎಂದು ಘೋಷಿಸಲಾಗುತ್ತದೆ. ಇನ್ನು, ಅಧಿಕ ಸಂಖ್ಯೆಯಲ್ಲಿ ಸೋಂಕಿತರು ಕಾಣಿಸಿಕೊಂಡರೆ ರಸ್ತೆಯನ್ನೇ ಸೀಲ್ ಡೌನ್ ಮಾಡಲಾಗುತ್ತದೆ.

ನೀವಿನ್ನೂ ಕರೋನ ಲಸಿಕೆ ಪಡೆದಿಲ್ಲವಾ? ಕೂಡಲೆ ಕೆಳಗಿರುವ ಫೋಟೊದಲ್ಲಿನ ನಂಬರ್‍ಗೆ ಕರೆ ಮಾಡಿ, ಸುರಕ್ಷಿತವಾಗಿ ಲಸಿಕೆ ಪಡೆಯಿರಿ

Covid 19 Vaccination Kan poster 1 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment