SHIVAMOGGA LIVE NEWS, 17 JANUARY 2025
ಶಿವಮೊಗ್ಗ : ಮುರುಘ ಮಠದ ವತಿಯಿಂದ ಶ್ರೀ ಗುರುಬಸವ ಸ್ವಾಮೀಜಿ ಅವರ 113ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಆಯೋಜಿಸಿದ್ದ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನವನ್ನು ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ (Minister) ಎಂ.ಬಿ.ಪಾಟೀಲ್ ಉದ್ಘಾಟಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಇದೇ ವೇಳೆ ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅವರಿಗೆ ಅಲ್ಲಮ ಪ್ರಭು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಂ.ಬಿ.ಪಾಟೀಲ್ ಹೇಳಿದ ಪ್ರಮುಖಾಂಶ
ಅಂತರ್ಜಾತಿ ವಿವಾಹಗಳಾದರೆ ಇವತ್ತು ಮರ್ಯಾದೆ ಹತ್ಯೆಗಳಾಗುತ್ತಿವೆ. ಆದರೆ 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಅಂತರ್ಜಾತಿ ವಿವಾಹ ಮಾಡಿಸಿದ್ದರು. ಆಗ ಊಹಿಸಿಕೊಳ್ಳಲು ಸಾಧ್ಯವಾಗದ ಕಷ್ಟದ ಪರಿಸ್ಥಿತಿಯನ್ನು ಬಸವಾದಿ ಶರಣರು ಎದುರಿಸಬೇಕಾಗಿತ್ತು. ಆದರೂ ಎಲ್ಲ ವರ್ಗದ ಜನರನ್ನು ಸೇರಿಸಿ ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದ್ದರು. ಸಂಸ್ಕೃತಮಯವಾಗಿದ್ದ ಸಂದರ್ಭ ಬಸವಾದಿ ಶರಣರು ಆಡು ಭಾಷೆ ಕನ್ನಡದಲ್ಲಿ ವಚನಗಳ ಮೂಲಕ ಸಮಾಜ ಸುಧಾರಣೆಗೆ ಯತ್ನಿಸಿದ್ದರು.
ಫಾ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಜಾಗತಿಕ ಮನ್ನಣೆ ಪಡೆದಿದೆ. ಅದರ ನೇತೃತ್ವದಲ್ಲಿ ಎಂ.ಎಂ.ಕಲ್ಬುರ್ಗಿ ಅವರ ಸಂಪಾದಕತ್ವದಲ್ಲಿ 10 ಸಾವಿರ ವಚನಗಳ 15 ವಚನ ಸಂಪುಟಗಳನ್ನು ರಚಿಸಲಾಗಿದೆ. ಆದಿಲ್ ಶಾಹಿ ಅರಸರ ಸಂಬಂಧ 18 ಸಂಪುಟಗಳ ಮುದ್ರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಅದನ್ನು ಮುಖ್ಯಮಂತ್ರಿ ಅವರಿಂದಲೇ ಬಿಡುಗಡೆಗೊಳಿಸಲಾಗುತ್ತದೆ.
ಮುರುಘ ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಕೃಷಿ ಚಟುವಟಿಕೆ, ಮಲೆನಾಡು ಮಠಾಧೀಶರ ಪರಿಷತ್ತು ಸ್ಥಾಪನೆ, ಉಚಿತ ಸಾಮೂಹಿಕ ವಿವಾಹ, ನಾಟಕ ಪ್ರದರ್ಶನ, ವಚನ ಸಾಹಿತ್ಯ, ಸಂಗೀತ ಕಾರ್ಯಕ್ರಮ, ಪ್ರಕೃತಿ ವಿಕೋಪದ ಸಂದರ್ಭ ಪಾದಯಾತ್ರೆ ಮೂಲಕ ಜನರಿಂದ ಧನ ಸಂಗ್ರಹ ಮಾಡಿದ್ದರು. ಮಠದಲ್ಲಿ ಸರ್ವ ಜಾತಿಯವರಿಗು ಅವಕಾಶ ಕಲ್ಪಿಸಿ ನಿಜವಾದ ಅನುಭವ ಮಂಟಪ ಸ್ಥಾಪಿಸಿದ್ದಾರೆ.
ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ, ದಿನಾಂಕ ಪ್ರಕಟ
ಮೂಢ ನಂಬಿಕೆಗಳನ್ನು ಬದಿಗೊತ್ತಿ ಬೆಳಕಿನೆಡೆಗೆ ಸಾಗಬೇಕು. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಧರ್ಮ ರಕ್ಷಣೆ ಮಾಡಿ ಮಾದರಿಯಾಗಿದ್ದಾರೆ. ಸರ್ವ ಧರ್ಮಿಯರಿಗು ಮಾರ್ಗದರ್ಶಿಯಾಗಿದ್ದಾರೆ. – ಬೇಳೂರು ಗೋಪಾಲಕೃಷ್ಣ, ಶಾಸಕ
ಮುರಘ ಮಠ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸರ್ವರನ್ನು ಸರಿಸಮಾನವಾಗಿ ಕಾಣುತ್ತಾರೆ. – ಶಾರದಾ ಪೂರ್ಯಾನಾಯ್ಕ್, ಶಾಸಕಿ
ಹಲವು ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸವನ್ನು ಮರೆತಂತಿದೆ. ಆದರೆ ಗುರು ಬಸವ ಭವನದಲ್ಲಿ ಇಂತಹ ಚುಟುವಟಿಕೆ ಮೂಲಕ ದೇಶ ಕಟ್ಟುವ ಕೆಲಸವಾಗುತ್ತಿದೆ. ಮುಂದಿನ ಪೀಳಿಗೆಗೆ ಬೇಕಾದ ಸಂಸ್ಕಾರವನ್ನು ಈ ಮಠ ನೀಡುತ್ತಿದೆ. – ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ
ಬಸವಣ್ಣ ಮೊದಲ ಸಂಸತ್ತನ್ನ ಸ್ಥಾಪಿಸುವ ಜೊತೆಗೆ ಜಾತ್ಯತೀತ ಸಮಾಜ ಸೃಷ್ಟಿಸಿದರು. ಸಮಾಜವಾದಿ ಸಿದ್ಧಾಂತಕ್ಕೆ ನಾಂದಿ ಹಾಡಿದರು. ವಚನ ಸಾಹಿತ್ಯ ಬದುಕಿನ ಪಾಠ ತಿಳಿಸುತ್ತದೆ. ಹಾಗಾಗಿ 900 ವರ್ಷವಾದರು ವಚನ ಸಾಹಿತ್ಯ ಇಂದು ಪ್ರಸ್ತುತವಾಗಿದೆ. – ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಬೆಳಗಾವಿಯ ಸಾಹಿತಿ ಪ್ರಕಾಶ್ ಗಿರಿಮಲ್ಲವರ ಅವರು ಪ್ರಧಾನ ಉಪನ್ಯಾಸ ನೀಡಿದರು. ಮುರುಘ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಎಸ್.ಎಸ್.ಜ್ಯೋತಿಪ್ರಕಾಶ್, ಹೆಚ್.ಸಿ.ಯೋಗೇಶ್, ಇ.ವಿಶ್ವಾಸ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಶಿವಮೊಗ್ಗಕ್ಕೆ ನಾಳೆ ಸಚಿವ ಮಧು ಬಂಗಾರಪ್ಪ ಭೇಟಿ, ವಿವಿಧ ಸಭೆಗಳಲ್ಲಿ ಭಾಗಿ, ಎಲ್ಲೆಲ್ಲಿಗೆ ತೆರಳಲಿದ್ದಾರೆ?