ಶಿವಮೊಗ್ಗ: ರಾಗಿಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ 100 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಇಎಸ್‌ಐ ಆಸ್ಪತ್ರೆಗೆ (ESI Hospital) ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಗುತ್ತಿಗೆದಾರರಿಗೆ ಸಚಿವರು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಬ್ಲಾಕ್ ಲಿಸ್ಟ್‌ಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕಾಮಗಾರಿ ಪರಿಶೀಲಿಸಿದ ಮಿನಿಸ್ಟರ್
ಶಿವಮೊಗ್ಗದಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ 2020ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿ ಆರಂಭಿಸುವಾಗ ಬಂಡೆ ಅಡ್ಡಿಯಾಗಿತ್ತು. ಅದನ್ನು ಒಡೆದು ತೆರವು ಮಾಡಲು ಅನುಮತಿ ತಡವಾಯಿತು ಎಂದು ಗುತ್ತಿಗೆದಾರರು ತಿಳಿಸಿದರು. ಇದರಿಂದ ಗರಂ ಆದ ಸಚಿವೆ ಶೋಭಾ ಕರಂದ್ಲಾಜೆ, ‘ಸಂಸದರಿಗೆ ತಿಳಿಸಿದ್ದರೆ ಅನುಮತಿ ಕೊಡಿಸುತ್ತಿರಲಿಲ್ಲವೆ. ಇನ್ನು ಆರು ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಬ್ಲಾಕ್ ಲಿಸ್ಟ್‌ಗೆ ಹಾಕಿ, ದೇಶಾದ್ಯಂತ ಎಲ್ಲಿಯು ಕಾಮಗಾರಿ ಸಿಗದಂತೆ ಮಾಡಲಾಗುತ್ತದೆʼ ಎಂದು ಎಚ್ಚರಿಸಿದರು.
ಕಟ್ಟಡ ವೀಕ್ಷಿಸಿದ ಮಿನಿಸ್ಟರ್
ಇನ್ನು ಕಟ್ಟಡವನ್ನು ವೀಕ್ಷಿಸಿದ ಸಚಿವೆ ಶೋಭಾ ಕರಂದ್ಲಾಜೆ ಕಾಮಗಾರಿಯ ಕುರಿತು ಮಾಹಿತಿ ಪಡೆದರು. ಎಲ್ಲೆಲ್ಲಿ ಏನೆಲ್ಲ ಕೆಲಸ ನಡೆಯುತ್ತಿದೆ ಎಂದು ಪ್ರಶ್ನಿಸಿ ತಿಳಿದುಕೊಂಡರು.

ಮಿನಿಸ್ಟರ್ ಏನೆಲ್ಲ ಹೇಳಿದರು?
ಕಾಮಗಾರಿ ಪರಿಶೀಲನೆ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಕಾರ್ಮಿಕ ಯೋಜನೆಗಳ ಕುರಿತು ಮಾತನಾಡಿದೆ. ಇಲ್ಲಿದೆ ಅವರ ಭಾಷಣದ ಹೈಲೈಟ್ ಪಾಯಿಂಟ್ಸ್
‘ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಬೇರೆ ರಾಜ್ಯದವರಿಗೆ ಟೆಂಡರ್ ಆಗಿದೆ. ಅವರಿಗೆ ಇಲ್ಲಿನ ಭೂ ಪ್ರದೇಶದ ಬಗ್ಗೆ ಅರಿವಿಲ್ಲ. ಬಂಡೆ ಅಡ್ಡಿಯಾಗಿದ್ದು ಬ್ಲಾಸ್ಟಿಂಗ್‌ಗೆ ಅನುಮತಿ ತಡವಾಗಿದ್ದರಿಂದ ಕಾಮಗಾರಿ ತಡವಾಗಿದೆ.’
‘ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು 2026ರ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾಮಗಾರಿಯ ವರದಿ ಪಡೆಯಬೇಕು.ʼ
‘ಇಲ್ಲಿ 70 ಸಾವಿರ ಐಪಿಗಳಿದ್ದಾರೆ. ಕೆಲವು ಸಂಸ್ಥೆಗಳಲ್ಲಿ ಇಎಸ್‌ಐ, ಪಿಎಫ್ ನೀಡಬೇಕು ಎಂಬ ಕಾರಣಕ್ಕೆ ಕಾರ್ಮಿಕರ ಸಂಖ್ಯೆಯನ್ನೆ ಕಡಿಮೆ ತೋರಿಸಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ತೀವ್ರ ನಷ್ಟವಾಗಲಿದೆ. ಕಾರ್ಮಿಕ ಕಾನೂನುಗಳನ್ನು ಸರಳೀಕರಣ ಮಾಡಲಾಗುತ್ತಿದೆ.ʼ
‘ಕಾರ್ಮಿಕರು ಚಿಕಿತ್ಸೆಗೆ ಇಎಸ್‌ಐ ಆಸ್ಪತ್ರೆಗೆ ಹೋಗಬೇಕು ಎಂದೇನಿಲ್ಲ. ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದೆ ಅವಕಾಶ ಕಲ್ಪಿಸುವ ಯೋಚನೆ ಇದೆ.ʼ
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಎಸ್.ರುದ್ರೇಗೌಡ ಸೇರಿದಂತೆ ಹಲವರು ಇದ್ದರು.







ಇದನ್ನೂ ಓದಿ » ಶಿವಮೊಗ್ಗದ ಮಾಚೇನಹಳ್ಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಶೀಘ್ರ ಕ್ಲಸ್ಟರ್ ಸ್ಥಾಪನೆಯ ಘೋಷಣೆ

ESI Hospital
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






