ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 31 JULY 2024 : ಭಾರಿ ಮಳೆ ಮುನ್ಸೂಚನೆ ಮಧ್ಯೆ ಶಿವಮೊಗ್ಗ ನಗರದಲ್ಲಿ ಬಿಸಿಲು ಪ್ರತ್ಯಕ್ಷವಾಗಿದೆ. ಇನ್ನೊಂದೆಡೆ ನೆರೆ ಭೀತಿ ಹಿನ್ನೆಲೆ ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತರು ಪ್ರತ್ಯೇಕವಾಗಿ ಸಿಟಿ ರೌಂಡ್ಸ್ (ROUNDS) ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಸಿಟಿಯಲ್ಲಿ ಬಿಸಿಲು
ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕಳೆದ ಎರಡು ವಾರದಿಂದ ಬಿಸಿಲು ಮರೆಯಾಗಿತ್ತು. ಇವತ್ತು ಬೆಳಗೆಯಿಂದ ಆಗಸಲ್ಲಿ ಮೋಡಗಳು ಮರೆಯಾಗಿವೆ. ಪುನಃ ಬಿಸಲು ಕಾಣಿಸಿಕೊಂಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಮುಗ್ಗುಲು ಹಿಡಿದ ಬಟ್ಟೆಗಳನ್ನು ಒಣಗಿಸುತ್ತಿದ್ದಾರೆ.
ರಾತ್ರಿ ರೌಂಡ್ಸ್ ಮಾಡಿದ ಎಂಎಲ್‌ಎ
ತುಂಗಾ ನದಿಯಿಂದ ಭಾರಿ ಪ್ರಮಾಣದ ನೀರು ಹೊಳೆಗೆ ಹರಿಸುವ ಸಾಧ್ಯತೆ ಹಿನ್ನೆಲೆ ನಗರದಲ್ಲಿ ನೆರೆ ಭೀತಿ ಉಂಟಾಗಿತ್ತು. ಹಾಗಾಗಿ ವಿವಿಧ ಬಡಾವಣೆಗೆ ತೆರಳಿ ಪರಿಶೀಲನೆ ನಡೆಸಿದರು. ಇನ್ನು, ಶಿವಮೊಗ್ಗ ಪಂಪ್ ಹೌಸ್ ಮತ್ತು ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಕಮಿಷನರ್ ಸಿಟಿ ರೌಂಡ್ಸ್
ಇನ್ನೊಂದೆಡೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುಂಗಾ ನದಿ ತೀರದಲ್ಲಿರುವ ಬಡಾವಣೆಗಳಿಗೆ ಕಮಿಷನರ್ ಕವಿತಾ ಯೋಗಪ್ಪನವರ್ ರಾತ್ರಿ ತೆರಳಿ, ಪರಿಶೀಲಿಸಿದರು. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ವಿವಿಧೆಡೆಗೆ ಭೇಟಿ ನೀಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸೀಗೆಹಟ್ಟಿಯ ಐದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ಕಾಳಾಜಿ ಕೇಂದ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ ⇓
ರಾತ್ರಿ ಶಿವಮೊಗ್ಗದ ವಿದ್ಯಾನಗರ ಸೇರಿ ವಿವಿಧೆಡೆ ಎಚ್ಚರಿಕೆ ಸಂದೇಶ, ಕೂಡ್ಲಿಯಲ್ಲಿ ಸ್ನಾನ ಘಟ್ಟ ಜಲಾವೃತ