ತರಕಾರಿ ಮಂಡಿಗೆ ಎಂಎಲ್‌ಎ ಭೇಟಿ | ನೊಳಂಬ ಸಮಾಜಕ್ಕೆ ನೂತನ ಅಧ್ಯಕ್ಷ – 3 ಫಟಾಫಟ್‌ ನ್ಯೂಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 SEPTEMBER 2023

ತರಕಾರಿ ಮಂಡಿಗೆ ಎಂಎಲ್‌ಎ ಭೇಟಿ

FATAFAT-NEWS-1SHIMOGA : ವಿನೋಬನಗರದ ಎಪಿಎಂಸಿ (APMC) ತರಕಾರಿ ಮಾರುಕಟ್ಟೆಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಾಪಾರಿಗಳು, ರೈತರೊಂದಿಗೆ ಸಮಾಲೋಚನೆ ನಡೆಸಿದರು. ಸಮಸ್ಯೆಗಳನ್ನು ಆಲಿಸಿ ಪರಿಹಾರದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ವಿಘ್ನೇಶ್ವರ ಸೊಪ್ಪಿನ ಮಂಡಿಯಲ್ಲಿ ಸ್ನೇಹಿತರ ಬಳಗದಿಂದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಡಿ.ಎಸ್‌. ಸೊಪ್ಪು ಚಂದ್ರು, ದಿನೇಶ್‌, ಭಾಸ್ಕರ್‌, ವಾಸು, ಮಂಜಣ್ಣ, ಸಂದೇಶ್‌ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

ಇದನ್ನೂ ಓದಿ – ಲಾಂಚ್‌ ಸೇವೆ ಪುನಾರಂಭ, ನಿಟ್ಟುಸಿರು ಬಿಟ್ಟ ಸ್ಥಳೀಯರು, ಸಿಗಂದೂರು ಭಕ್ತರು

ಬಿ.ಹೆಚ್‌.ರಸ್ತೆಯಲ್ಲಿ ಬೈಕ್‌ ನಾಪತ್ತೆ

FATAFAT-NEWS-2BHADRAVATHI : ನಗರದ ಬಿ.ಹೆಚ್‌.ರಸ್ತೆಯ ಮೀನುಗಾರರ ಬೀದಿ ಬಳಿ ಅಂಗಡಿ ಒಂದರ ಮುಂದೆ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ. ಬಸವರಾಜು ಎಂಬುವವರು ತಮ್ಮ ಬೈಕ್‌ ಅನ್ನು ಮೆಡ್‌ ಪ್ಲಸ್‌ ಅಂಗಡಿ ಮುಂದೆ ನಿಲ್ಲಿಸಿದ್ದರು. ಮರಳಿ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಆ.15ರಂದು ಘಟನೆ ಸಂಭವಿಸಿದೆ. ಎಲ್ಲೆಡೆ ಹುಡುಕಾಡಿದ ಬಸವರಾಜು ಸೆ.1ರಂದು ದೂರು ನೀಡಿದ್ದಾರೆ. ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಆರು ವರ್ಷದ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ, ಮನೆಯಿಂದ ಹೊರಬರಲು ಗ್ರಾಮಸ್ಥರಿಗೆ ಭೀತಿ

ನೊಳಂಬ ಸಮಾಜಕ್ಕೆ ನೂತನ ಅಧ್ಯಕ್ಷ

FATAFAT-NEWS-3SHIKARIPURA : ನೊಳಂಬ ಸಮಾಜದ ನೂತನ ಅಧ್ಯಕ್ಷರಾಗಿ ಇಟ್ಟಿಗೆಹಳ್ಳಿ ಲೋಕೇಶ್‌, ಉಪಾಧ್ಯಕ್ಷರಾಗಿ ಹುಣಸೆಕೊಪ್ಪ ಗಜೇಂದ್ರಪ್ಪ ಆಯ್ಕೆಯಾಗಿದ್ದು ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ನೊಳಂಬ ಸಮಾಜದ ಮಾಜಿ ಅಧ್ಯಕ್ಷ ಬಿ.ಎಸ್.ಪಾಟೀಲ್‌, ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ದೇಶದ ಅಭಿವೃದ್ಧಿಗಾಗಿ ಸಮಾಜ ಕಟಿಬದ್ಧವಾಗಿರಬೇಕು ಎಂದರು. ಶಶಿಧರ್‌ ಚುರ್ಚಿಗುಂಡಿ, ಮಹೇಂದ್ರಪ್ಪ, ರವೀಂದ್ರ, ಮೌನೇಶ್ವರ್‌, ಉಳ್ಳಿ ದರ್ಶನ್‌, ಹುಲ್ಲಿನಕೊಪ್ಪ ಮಲ್ಲಿಕಾರ್ಜುನ ಸೇರಿದಂತೆ ಹಲವರು  ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment