ಇನ್ಮುಂದೆ ಫೋನ್ ಮಾಡಿದರೆ ಸಾಕು ಶಿವಮೊಗ್ಗ ಸಿಟಿಯಲ್ಲಿ ಮನೆಗೆ ಬರುತ್ತೆ ಡಯಾಗ್ನಸ್ಟಿಕ್ ಲ್ಯಾಬೋರೆಟರಿ

ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಿರುವ ಶಿವಮೊಗ್ಗದ ಕುವೆಂಪು ರಸ್ತೆಯ ನಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಈಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಮನೆ ಬಾಗಿಲಿಗೆ ಡಯಗ್ನಸ್ಟಿಕ್ ಲ್ಯಾಬೋರೆಟರಿ ಯೋಜನೆ ಆರಂಭಿಸಿದೆ.

ಏನಿದು ಯೋಜನೆ? ಹೇಗೆ ಕೆಲಸ ಮಾಡುತ್ತೆ?

ಡಯಗ್ನಸ್ಟಿಕ್ ಲ್ಯಾಬೋರೆಟರಿಗಾಗಿ ಅಲೆದಾಡಬೇಕು, ಅಲ್ಲಿ ಗಂಟೆಗಟ್ಟಲೆ ಕಾಯಬೇಕು ಎಂಬ ಚಿಂತೆ ಬೇಡ. ಈಗ ಫೋನ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಲ್ಯಾಬೋರೆಟರಿ ಬರಲಿದೆ.

Shivamogga Live Promotion

ಸಾಮಾನ್ಯ ಮತ್ತು ಉನ್ನತ ಮಟ್ಟದ ಪರೀಕ್ಷೆಗಳಿಗಾಗಿ ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಅಲ್ಲದೆ ಕೋವಿಡ್ 19 ಆರ್‍ಟಿಪಿಸಿಆರ್‍ ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತದೆ. ಪರೀಕ್ಷೆಗಳು ಅತ್ಯಂತ ಗುಣಮಟ್ಟದಿಂದ ಕೂಡಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಈ ಮೊಬೈಲ್ ಲ್ಯಾಬೋರೆಟರಿ ಕೆಲಸ ಮಾಡಲಿದೆ. 08182 268002, 268000, 223967, 221003 ನಂಬರ್‍ಗೆ ಕರೆ ಮಾಡಿದರೆ ಲ್ಯಾಬ್‍ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment